ಪ್ರತ್ಯಕ್ಷ ಕಂಡರೂ, ಪ್ರಮಾಣಿಸಿ ನೋಡು

ಯುವ - 0 Comment
Issue Date : 15.01.2015

ಅರ್ಕಿಮಿಡಿಸ್, ಎಂದರೆ ತಕ್ಷಣ  ನೆನಪಿಗೆ ಬರುವುದು ಯುರೇಕಾ, ಯುರೇಕಾ ಎಂದು ಬಚ್ಚಲಿನಿಂದ ಬೆತ್ತಲಾಗಿ ಬೀದಿಯಲ್ಲಿ ಓಡಿದ ವ್ಯಕ್ತಿ. ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು ಇದರಿಂದ  ತನ್ನ  ರಾಜನ ಚಿನ್ನದ ಕಿರೀಟದ ಸಮಸ್ಯೆಗೆ ಪರಿಹಾರ ಕಂಡು ಹಿಡಿದ  ಗ್ರೀಕ್ ದೇಶದ  ಗಣಿತಜ್ಞ, ತತ್ವಜ್ಞಾನಿ, ಮೇಧಾವಿ, ವಿಜ್ಞಾನಿ. ಇಂದು ನಾನು ಹೇಳಬಯಸುವುದು ಅರ್ಕಿಮಿಡಿಸನ ದುರಂತ ಅಂತ್ಯದ ಬಗ್ಗೆ.  ರೋಮನ್ ಸೇನೆಯ ನಾಯಕನಾದ ಮರ್ಸಿಲಸ್, ಸ್ಯರಕಾಸ್ ನಗರವನ್ನು ಆಕ್ರಮಿಸಿದಾಗ, ಆತನಿಗೆ  ತತ್ವಜ್ಞಾನಿ ಅರ್ಕಿಮಿಡಿಸ್‌ನನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದ. ತನ್ನ […]

ಸತ್ಯದ ಪರವಾಗಿ ದನಿ ಎತ್ತಿ

ಯುವ - 0 Comment
Issue Date : 20.01.2015

ಮತ್ತೊಂದು ಕ್ಯಾಲೆಂಡರ್ ಬದಲಾಯ್ತು. ಅನೇಕರಿಗೆ ವರ್ಷವೂ ಬದಲಾಯಿತೆನಿಸಿದೆ. ಆದರೆ ಮಾನಸಿಕತೆ ಬದಲಾಗಿದೆಯೇ ಎಂಬುದು ಪ್ರಶ್ನಾರ್ಥಕ ಚಿನ್ಹೆಯಾಗಿದೆ. ನಾವಾಗಿಯೇ ಬದಲಾಯಿಸಿದರೆ ಮಾತ್ರ ಬದಲಾಗುವ ಕ್ಯಾಲೆಂಡರ್ ಬಿಟ್ಟು ಪ್ರಕೃತಿಯನ್ನು ಕಂಡವರಿಗೆಲ್ಲ (ಹೊರಗಣ್ಣಿಂದ ಮಾತ್ರವಲ್ಲ ಒಳಗಣ್ಣಿನಿಂದ, ಕಣ್ಣಿಂದಲ್ಲ ಸೂಕ್ಷ್ಮ ದೃಷ್ಟಿಯಿಂದ ಗಮನಿಸಿದವರಿಗೆಲ್ಲಾ) ಹೊಸ ವರ್ಷದ ಸಂಭ್ರಮ ಗೋಚರಿಸುವುದಿಲ್ಲ. ವಿದೇಶಗಳ ಕಥೆ ಹೇಗಾದರೂ ಇರಲಿ ನಮ್ಮ ದೇಶದಲ್ಲಿ ಯುಗಾದಿ ಸಂದರ್ಭ ಸಮೀಪಿಸಿದಾಗ ಪ್ರಕೃತಿಯಲ್ಲಿ ನಳನಳಿಕೆ, ಪಶು ಪಕ್ಷಿಗಳಲ್ಲಿ ಆನಂದ, ಮಳೆ ಬೆಳೆಗಳಿಂದಾಗಿ ಜನ ಸಮುದಾಯದಲ್ಲಿ ಸಂತಸ ಸಮಾಧಾನ ಕಾಣ ತೊಡಗುತ್ತೇವೆ. ನಿಜ, ಕಾಲ […]

ಪ್ರಕೃತಿ ಮಾತೆಯ ಋಣ ತೀರಿಸೋಣ

ಯುವ - 0 Comment
Issue Date : 10.12.2014

17ನೇ ಶತಮಾನದಲ್ಲಿ ನಡೆದ ಒಂದು ಘಟನೆ. ರಾಜಸ್ಥಾನದ ಜೋದ್‌ಪುರ್‌ನ ರಾಜರಿಗೆ ಒಂದು ಅರಮನೆ ಕಟ್ಟಿಸುವ ಯೋಚನೆ ಶುರುವಾಯಿತು. ಈ ಕಾರಣಕ್ಕಾಗಿ ರಾಜನ ಸೇವಕರು ಅದಕ್ಕೆ ಬೇಕಾದ ಮರದ ದಿಮ್ಮಿಗಳನ್ನು ತರಲು ಕಾಡಿಗೆ ಹೊರಟರು. ರಾಜ ಸೇವಕರು ಇನ್ನೇನು ಮರಗಳನ್ನು ಕಡಿಯಬೇಕೆನ್ನುವಷ್ಟರಲ್ಲಿ ಸುತ್ತಲಿನ ಕೆಜದಳಿ ಗ್ರಾಮದ ಜನತೆ ಇವರನ್ನು ತಡೆಯಲು ಹೊರಬಂದರು. ಆ ಸಮುದಾಯದ ಹೆಸರು ಬಿಷ್‌ನೋಯ್, ಅಂದರೆ ಇಪ್ಪತ್ತೊಂಭತ್ತು. ಗುರು ಜಂಬಾಜಿ 1941ರಲ್ಲಿ ಸ್ಥಾಪಿಸಿದ / ಪ್ರಾರಂಭಿಸಿದ ಒಂದು ವಿಶಿಷ್ಟ ಸಮುದಾಯ. ಈ ಸಮುದಾಯ ಜಂಬಾಜಿಯನ್ನು ಗುರುವಾಗಿ […]

ಭೂಮಿ ಒತ್ತುವರಿ ಕುರಿತು…

ಯುವ - 0 Comment
Issue Date : 01.12.2014

ಈ ವಿಷಯಕ್ಕೆ ಸಂಬಂಧಪಟ್ಟಂತೆ ಭೂಮಿ ತೆರವಿನ ನಂತರ ಸ್ವಾತಂತ್ರ್ಯಾ ನಂತರ ದೇಶದಲ್ಲಿ ನಡೆದ, ನಡೆಯುತ್ತಿರುವ ಭೂ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದನ್ನು ನೋಡಿ ಒಂದು ಕಡೆ ಹೇಳತೀರದ ಸಂತೋಷ; ಮತ್ತೊಂದು ಕಡೆ ಮುಂದೆ ನಡೆಯಬಹುದಾದ ವರ್ಗ ಸಂಘರ್ಷ, ಜಾತಿ ಕೋಮು ದಳ್ಳುರಿಗಳ ಬಗ್ಗೆ ಖೇದ ಉಂಟಾಗುತ್ತಿದೆ. ಏಕೆಂದರೆ ಇದುವರೆಗೆ ಭೂ ಒತ್ತುವರಿ ಮಾಡಿರುವವರು ಹೆಚ್ಚಾಗಿ ರಾಜಕೀಯ ನಂಟುಳ್ಳ ನೇತಾರರು, ಶ್ರೀಮಂತರು ಮತ್ತು ದೊಡ್ಡ ದೊಡ್ಡ ಅಧಿಕಾರಿ ಸಂಬಂಧಿಗಳ ಹತ್ತಿರದವರು. ಈಗ ಅವರಿಂದ ಭೂ ಒತ್ತುವರಿಯನ್ನು ತೆರವು ಮಾಡಿಸಲಾಗುತ್ತಿದೆ. […]

ಸಮರ್ಪಣೆಗೆ ‘9 ರ ಮಗ್ಗಿ’ಯೇ ಆದರ್ಶ!

ಯುವ - 0 Comment
Issue Date : 26.11.2014

ಸಾರ್ಥಕ ಬದುಕಿಗೆ ‘ಸಮರ್ಪಣೆ’ ಅತ್ಯಗತ್ಯ. ನಿತ್ಯ ಜೀವನದಲ್ಲಿ ಸದಾ ಅನುಭವಕ್ಕೆ ಬರುವ ಸರಳ ಸಂಗತಿಯಿದು. ಸಮರ್ಪಣೆಯೆಂದರೆ ಸಾಮಾನ್ಯ ಭಾಷೆಯಲ್ಲಿ ‘ಕೊಡುವುದು’ ಎಂದರ್ಥ. ಕೊಡದಿದ್ದಲ್ಲಿ ಏನೂ ಪಡೆಯಲಾರೆವು! (ಬೇರೆಯವರಿಗಾಗಿ ನಾವಾಗಬಹುದು – ನಮಗಾಗಿ ಬೇರೆಯವರಾಗಬಹುದು) ಬದುಕಲು ಬೇಕಾದ ಆಹಾರ-ನಿದ್ರೆ-ಇಂದ್ರಿಯ ಸುಖಗಳನ್ನೇ ತೆಗೆದುಕೊಳ್ಳೋಣ. ತಿನ್ಬೇಕು-ಕುಡಿಯಬೇಕಾದ್ರೂ ಆ ವಸ್ತು ತರಲು ಹಣ ಕೊಡಬೇಕು, ತರುವುದಕ್ಕೂ ಸಮಯ ಕೊಡಬೇಕು, ಸಿದ್ಧಪಡಿಸೋ ಶ್ರಮ ಕೊಡ್ಬೇಕು, ಕೈ ಬಾಯಿ ಕೆಲಸ ಮಾಡಿರಬೇಕು ಸರಿತಾನೆ ? ಅಂತೆಯೇ, ನಿದ್ದೆ ಮಾಡ್ಬೇಕು-ಸಂಗೀತ ಕೇಳ್ಬೇಕು- ನೃತ್ಯ, ನಾಟಕ ನೋಡ್ಬೇಕು, ಕಥೆ […]

ಅರುಣಿಮಾ ಸಿನ್ಹಾಗೆ ಪ್ರೊ. ಕೇಳ್ಕರ್ ಯುವ ಪ್ರಶಸ್ತಿ

ಯುವ - 0 Comment
Issue Date : 12.11.2014

ಮುಂಬೈ: ಮೌಂಟ್‌ಎವರೆಸ್ಟ್ ಏರಿದ ಮೊಟ್ಟ ಮೊದಲ ವಿಕಲಾಂಗ ಮಹಿಳೆ ಅರುಣಿಮಾ ಸಿನ್ಹಾ ಅವರನ್ನು 2014ರ ಪ್ರೊ. ಯಶವಂತರಾವ್ ಕೇಳ್ಕರ್ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಗತ್ತಿನ ಅತೀ ಎತ್ತರದ ಪರ್ವತವನ್ನು ಕೇವಲ ಕೃತಕ ಕಾಲುಗಳನ್ನು ಬಳಸುವ ಮೂಲಕ ಏರಿ ಸಾಧನೆ ಮಾಡಿದ ಅರುಣಿಮಾ ಸಾಹಸ ಸರ್ವತ್ರ ಶ್ಲಾಘನೆಗೆ ಒಳಗಾಗಿತ್ತು. ಇಂತಹ ಸಾಹಸದ ಹಿಂದೆ ಪ್ರಬಲ ಇಚ್ಛಾಶಕ್ತಿ, ಬದ್ಧತೆ ಅಡಗಿತ್ತು. ಜಗತ್ತಿನಾದ್ಯಂತ ಅರುಣಿಮಾ ಈಗ ಯುವಕರಿಗೆ ಪ್ರೇರಣಾಸ್ರೋತವಾಗಿ ಎದ್ದು ನಿಂತಿದ್ದಾಳೆ. ಈ ಪುರಸ್ಕಾರವು 50 ಸಾವಿರ ರೂ. ನಗದು, […]

ಭಾರತದಲ್ಲಿರುವವರೆಲ್ಲ ಹಿಂದುಗಳೇ

ಯುವ - 0 Comment
Issue Date : 28.10.2014

‘ನಾವು ಶಾಲೆಯಲ್ಲಿ ಓದಿದ ಇತಿಹಾಸವನ್ನು ತಿರುಚಿದ್ದಾರೆ, ನೆಡೆದದ್ದೊಂದು ಬರೆದ ದ್ದೊಂದು’ ಎಂದು ಒಂದಷ್ಟು ಮಂದಿ ಹೇಳಿಕೊಂಡು ಬಂದಿದ್ದಾರೆ. ಬರೆದ ಇತಿಹಾಸವನ್ನು ಸರಿಯಾಗಿಯೇ ಬರೆದಿದ್ದೇವೆಂದು ಬರೆದವರು ಹೇಳುತ್ತಾರೆ. ಸತ್ಯ ಯಾರಿಗೆ ಗೊತ್ತಿದೆ? ಪುಸ್ತಕದಲ್ಲಿರುವ ಅಚ್ಚಾಗಿರುವ ಇತಿಹಾಸವನ್ನು ಬದಲಾಯಿಸಲು ಕಷ್ಟ. ಏಕೆಂದರೆ ಎಲ್ಲದಕ್ಕೂ ಸಾಕ್ಷಿ ಬೇಕು. ಆದರೆ ಭಾರತದಲ್ಲಿ ಹಿಂದೂ ಧರ್ಮ ಹರಡಿಕೊಂಡಿರುವ ಬಗೆಯನ್ನು ಅಳೆಯಲು ಹಾಗು ಹಿಂದೂಸ್ಥಾನದಲ್ಲಿರುವವರೆಲ್ಲ ಹಿಂದೂಗಳೇ ಎಂದು ದೃಢಪಡಿಸಲು ಆಳವಾದ ಹಾಗು ವಿಶಾಲವಾದ ಆಲೋಚನಾ ಶಕ್ತಿ ಬೇಕೇ ಹೊರತು ಯಾರ‌್ಯಾರೋ ಬರೆದ ಇತಿಹಾಸವನ್ನೋದುವ ಅಗತ್ಯವಿಲ್ಲ. ಭಾರತದಲ್ಲಿ […]

ಕಸ ಎಸೆಯುವ ಮೊದಲು

ಯುವ - 0 Comment
Issue Date : 13.10.2014

ನಮ್ಮ ಮೆಚ್ಚಿನ ಪ್ರಧಾನಮಂತ್ರಿಯವರು ಗಾಂಧಿ ಜಯಂತಿ ಸಂದರ್ಭದಲ್ಲಿ ಸ್ಚಚ್ಛತೆಗೆ ಮಹತ್ವ ನೀಡಿ ‘ಸ್ವಚ್ಛ ಭಾರತ್-ಶ್ರೇಷ್ಠ ಭಾರತ್’ ಅಭಿಯಾನಕ್ಕೆ ಕರೆ ನೀಡಿದ್ದು ನನಗೆ ಅತ್ಯಂತ ಸಂತಸ ತಂದಿತು. ಮೋದಿಯವರ ಪ್ರಾಮಾಣಿಕ ಕಳಕಳಿಯ ಕರೆಗೆ ಅಭೂತಪೂರ್ವ ಸ್ಪಂದನೆ ನೀಡಿದ ದೇಶವಾಸಿಗಳೂ ದೊಡ್ಡ ಸಂಖ್ಯೆಯಲ್ಲಿ ರಸ್ತೆ, ಕಟ್ಟಡಗಳನ್ನು ಗುಡಿಸಿ, ಸ್ವಚ್ಛಗೊಳಿಸಿ ಏನೋ ಒಂದು ರೀತಿಯ ಆನಂದ ಕಂಡಿದ್ದಾರೆ. ರಾಷ್ಟ್ರಪತಿ-ಮಾಜಿ ಪ್ರಧಾನಿ ಹಿಂಬಾಲಕ-ಮುಂಬಾಲಕರು, ಆಟಗಾರರು- ಕಲಾವಿದರು-ಅಭಿಮಾನಿ ವೃಂದ, ಅಧಿಕಾರಿ-ನೌಕರ, ಕಛೇರಿ ಕಂಪನಿ ಮುಖ್ಯಸ್ಥ-ಸಹೋದ್ಯೋಗಿ ತಂಡ… ಇತ್ಯಾದಿ ವಿವಿಧ ರೀತಿಯ, ವಿವಿಧ ವಯಸ್ಸಿನ, ನಗರ-ಗ್ರಾಮೀಣ […]

ಪರಿಧಿಯೊಳಗೇ ನಲುಗದಿರೋಣ

ಯುವ - 0 Comment
Issue Date : 06.10.2014

ಪರಿಧಿ ಮತ್ತು ಪರಿಧಿಯಾಚೆ ಎರಡನ್ನೂ ಪ್ರತ್ಯೇಕಗೊ ಳಿಸಲಾಗುವುದಿಲ್ಲ. ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಅಥವಾ ರಥದ ಎರಡು ಚಕ್ರಗಳಿದ್ದಂತೆ. ಪರಿಧಿಯು ನಮ್ಮ ಕಾರ್ಯದ ವ್ಯಾಪ್ತಿಯನ್ನು ಸೂಚಿಸಿದಲ್ಲಿ, ಪರಿಧಿಯಾಚೆಯ ಚಿಂತನೆಯು ಮತ್ತಷ್ಟು ಬೆಳೆಯಲು ಸಹಕಾರಿ. ಗಡಿಯಾಚೆಯ ಚಿಂತನೆಗೆ ಆಕಾಶವೇ ಮಿತಿ! ಒಮ್ಮೊಮ್ಮೆ ವ್ಯಾಪ್ತಿ ಮೀರಿ ಕಾರ್ಯಮಾಡಿದಾಗ ಸಂತಸ ನೀಡಿದರೂ, ಕೆಲವೊಮ್ಮೆ ಪಶ್ಚಾತ್ತಾಪ ಪಡಬೇಕಾದೀತು. ಹೀಗೆ ನಡುವಿನ ಗೆರೆ ಸೂಕ್ಷ್ಮವಾಗಿ ಕಂಡರೂ ಎರಡರ ನಡುವೆ ಗುಡ್ಡದಷ್ಟು ಅಂತರವಿದೆ. 2 ದೇಶಗಳನ್ನು ಬೇರ್ಪಡಿಸುವ ಗಡಿರೇಖೆಯಂತೆ (ಪರಸ್ಪರ ಕಚ್ಚಾಟ ಇಂದೂ ನಡೆದಿದೆ!). ನಮ್ಮ […]

ಗಿರಿಜಾ ಎಂಬ ಸಮಾಜ ಸುಧಾರಕಿ

ಯುವ - 0 Comment
Issue Date : 20.09.2014

ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದೇ ಇದೆಯಾದ್ದರಿಂದ ಸಮಸ್ಯೆಯ ಕುರಿತಾಗಿಯೇ ದುಃಖಿಸುತ್ತಾ ಹತಾಶೆಗೊಳ್ಳುವುದಕ್ಕಿಂತ ಪರಿಹಾರದತ್ತ ಗಮನಿಸುವುದು ಅಥವಾ ಸಮಸ್ಯೆಯೇ ಬರದಂತೆ ತಡೆಗಟ್ಟುವುದು,ಆ ದಿಶೆಯಲ್ಲಿ ಕಾರ್ಯೋನ್ಮುಖರಾಗುವುದು ವಿವೇಕಯುತ ನಡೆಯೆನಿಸಿಕೊಳ್ಳುತ್ತದೆ. ಹೊಸದುರ್ಗದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಾಹಿಕಾ ಆಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಶ್ರೀಮತಿ ಗಿರಿಜಾ ಶಂಕರಪ್ಪನವರದು ಈ ದಿಶೆಯಲ್ಲಿ ಗಮನಾರ್ಹ ಪ್ರಯತ್ನ ಹಾಗೂ ಸ್ತುತ್ಯರ್ಹ ಸಾಧನೆ ಎಂದೇ ಹೇಳಬೇಕು. ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯದ ಸಮಸ್ಯೆ ಜಟಿಲವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಗಿರಿಜಾ ಸಹಕಾರ್ಯಕರ್ತೆಯರೊಂದಿಗೆ ಯೋಚಿಸಿ ಕಾರ್ಯಕ್ರಮವೊಂದನ್ನು ಯೋಜಿಸಿದರು. […]