ಸಾವಿರದ ಅಷ್ಟಾವಧಾನ

ಸಾವಿರದ ಅಷ್ಟಾವಧಾನ

ಜಿಲ್ಲೆಗಳು - 0 Comment
Issue Date : 17.02.2014

ಕಳೆದ 33 ವರ್ಷಗಳಿಂದ ಕನ್ನಡನಾಡಿನಲ್ಲಲ್ಲದೇ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿಯೂ ಕನ್ನಡ, ಸಂಸ್ಕೃತ, ತೆಲುಗು ಮತ್ತು ಪ್ರಾಕೃತ ಭಾಷೆಗಳಲ್ಲಿ ಅಷ್ಟಾವಧಾನ ಮತ್ತು ಶತಾವಧಾನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ವಿದ್ವದ್ರಸಿಕರನ್ನು ರಂಜಿಸಿ, ಸಾಹಿತ್ಯ ಪರಂಪರೆಯ ಶ್ರೇಷ್ಠ ಮತ್ತು ಅತಿಕ್ಲಿಷ್ಟಪ್ರಕಾರವಾದ ಅವಧಾನ ನೀಡಿದ ಶತಾವಧಾನಿ ಡಾ|| ಆರ್. ಗಣೇಶರ “ಸಾವಿರದ ಅಷ್ಟಾವಧಾನ” ಕಾರ್ಯಕ್ರಮವು ಜಯನಗರದ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ಭಾನುವಾರ (ಫೆ.16)ದಂದು ನಡೆಯಿತು. ಸಾವಿರದ ಅಷ್ಟಾವಧಾನಕ್ಕೆ ‘ಘಂಟಾನಾದ’ ಮತ್ತು ‘ನೃತ್ಯಕಾವ್ಯ’ ಎನ್ನುವ 2 ವಿಶೇಷ ವಿಭಾಗವನ್ನು ಸೇರ್ಪಡೆಗೊಳಿಸಲಾಗಿತ್ತು. ನಂತರ ಹಿಂದಿನ 999 […]

ಉಳ್ಳಾಲ ಸಂತ್ರಸ್ತ ಹಿಂದುಗಳಿಗೆ ಸಂತರ ಸಾಂತ್ವನ

ಉಳ್ಳಾಲ ಸಂತ್ರಸ್ತ ಹಿಂದುಗಳಿಗೆ ಸಂತರ ಸಾಂತ್ವನ

ಜಿಲ್ಲೆಗಳು - 0 Comment
Issue Date : 14.02.2014

ಹಿಂದು ಧರ್ಮ ಸದಾ ಅಹಿಂಸೆಯ ಜೊತೆಗೆ ಅನ್ಯಮತೀಯರನ್ನು ಗೌರವಾದರಗಳಿಂದ ಕಂಡ ಧರ್ಮ. ಹಿಂದು ಸಮಾಜ ಯಾರಿಗೂ ಹಿಂಸೆ – ಕೇಡನ್ನು ಬಗೆಯದು. ಅದೇ ವೇಳೆ ಹಿಂದು ಸಮಾಜವನ್ನು ಕೆಣಕಿದರೆ ತಕ್ಕ ಪ್ರತ್ಯುತ್ತರ ನೀಡಲು ಹಿಂಜರಿಯಕೂಡದು ಎಂದು ಉಡುಪಿ ಪೇಜಾವರ  ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಶ್ರೀಗಳು ಫೆ. 13ರಂದು ಸಂಜೆ ವಿವಿಧ ಮಠಗಳ ಪೀಠಾಧಿಪತಿಗಳೊಂದಿಗೆ ಉಳ್ಳಾಲದ ಮೊಗವೀರ ಪಟ್ನಕ್ಕೆ ಭೇಟಿ ನೀಡಿ ಮಾತನಾಡಿದರು. ಮೊಗವೀರ ಪಟ್ನದ ಶ್ರೀ ವ್ಯಾಘ್ರ ಚಾಮುಂಡಿ ದೇವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ […]

ಪಿಲಿಕುಳದಲ್ಲಿ ‘ಸ್ವಾಮಿ ವಿವೇಕಾನಂದ ತಾರಾಲಯ’ಕ್ಕೆ ಭೂಮಿಪೂಜೆ

ಜಿಲ್ಲೆಗಳು - 0 Comment
Issue Date : 14.02.2014

ಪಿಲಿಕುಳ ನಿಸರ್ಗದಾಮದಲ್ಲಿ ನಿರ್ಮಾಣವಾಗಲಿರುವ ಭಾರತದ ಪ್ರಥಮ 3ಡಿ ತಾರಾಲಯದ ಕಟ್ಟಡ ಕಾಮಗಾರಿಗೆ ಫೆ. 13ರಂದು ಶಾಸಕ ಜೆ.ಆರ್.ಲೋಬೋ ಭೂಮಿಪೂಜೆ ನೆರವೇರಿಸಿದರು. ‘ಸ್ವಾಮಿ ವಿವೇಕಾನಂದ ತಾರಾಲಯ’ ಎಂಬ ಹೆಸರಿನೊಂದಿಗದೆ ಸುಮಾರು 24.5 ಕೋಟಿ ರೂ. ವೆಚ್ಚದಲ್ಲಿ ಈ ತಾರಾಲಯ ನಿರ್ಮಾಣವಾಗಲಿದೆ. ಭಾರತದ ಪ್ರಥಮ 3ಡಿ ತಾರಾಲಯ ಇದಾಗಿದ್ದು, ಆಧುನಿಕ ತಂತ್ರಜ್ಞಾನದ ಅಳವಡಿಕೆ, 18 ಮೀಟರ್ ವ್ಯಾಸದ ಗುಮ್ಮಟ, ಸ್ಕೈ ಥಿಯೇಟರ್, ವಸ್ತು ಪ್ರದರ್ಶನ ಗ್ಯಾಲರಿ, ಖಗೋಳ ಪಾರ್ಕ್ ಗಳನ್ನು ಇದು ಹೊಂದಿದೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ […]

ಕಾರವಾರ ತೀರಕ್ಕೆ ಹೋವರ್ ಕಾಪ್ಟರ್

ಕಾರವಾರ ತೀರಕ್ಕೆ ಹೋವರ್ ಕಾಪ್ಟರ್

ಜಿಲ್ಲೆಗಳು - 0 Comment
Issue Date : 12.02.2014

ಕರಾವಳಿ ತೀರದಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲು ಕರಾವಳಿ ಕಾವಲು  ಪಡೆಗೆ ಸೇರ್ಪಡೆ ಮಾಡಲಾಗಿರುವ ಹೋವರ್ ಕಾಪ್ಟರ್ ಏರ್ ಕುಶನ್ ವೆಹಿಕಲ್ ಎಸಿವಿಎಚ್ – 194 ಫೆ. 10ರಂದು ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರಕ್ಕೆ ಆಗಮಿಸಿತು.  ಉಗ್ರರ ದಾಳಿ ಘಟನೆಗಳ ಹಿನ್ನಲೆಯಿಂದ ಕರಾವಳಿ ತೀರದುದ್ದಕ್ಕೂ ರಕ್ಷಣಾ ಕ್ರಮಗಳನ್ನು ತೀವ್ರಗೊಳಿಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಕರ್ನಾಟಕ ಕರಾವಳಿ ಕಾವಲು ಪಡೆಗೆ ಈ ಹೋವರ್ ಕಾಪ್ಟರ್  ಒದಗಿಸಲಾಗಿದೆ.  ಹೋವರ್ ಕಾಪ್ಟರ್ ಏರ್ ಕುಶನ್ ವೆಹಿಕಲ್ 21. ಮೀ ಉದ್ದವಿದ್ದು, 31 ಟನ್ ಭಾರವಿದೆ. […]

ಬೃಹತ್ ರಾಷ್ಟ್ರಧ್ವಜ

ಬೃಹತ್ ರಾಷ್ಟ್ರಧ್ವಜ

ಜಿಲ್ಲೆಗಳು - 0 Comment
Issue Date : 11.02.2014

ಯಲಹಂಕದ ಉಪನಗರದ ಕೆಎಚ್ ಬಿ ಮೈದಾನದಲ್ಲಿ ಸೋಮವಾರ (ಫೆ.10) 50 ಅಡಿ ಉದ್ದ, 180 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಬೆಂಗಳೂರಿಗೆ ಅಣ್ಣಾ ಹಜಾರೆ ಫೆ.12ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕಾಗಿ ಈ ಧ್ವಜ ತಯಾರಿಸಲಾಗಿದೆ. ಆಕಾಶದೆತ್ತರಕ್ಕೂ ಹರಡಿಕೊಂಡ ಬೃಹತ್ ಧ್ವಜಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದ ದೃಶ್ಯ ಪ್ರೇಕ್ಷಕರ ಗಮನ ಸೆಳೆಯಿತು.  ಮೈದಾನದಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾವುಟ ಹಿಡಿದು ಪಥಸಂಚಲನ ನಡೆಸಿ ಜನರಲ್ಲಿ ದೇಶಭಕ್ತಿ ಇಮ್ಮಡಿಗೊಳಿಸಿದರು. ಅಮ್ಮಾ ಪ್ರತಿಷ್ಠಾನ, ಜ್ಞಾನಜ್ಯೋತಿ ಕಾಲೇಜು […]

ರಾಷ್ಟ್ರ ಪ್ರಶಸ್ತಿ  ಪುರಸ್ಕೃತ ಹರಿಶ್ಚಂದ್ರ ರೇಣಾಪುರಕರ್

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹರಿಶ್ಚಂದ್ರ ರೇಣಾಪುರಕರ್

ಜಿಲ್ಲೆಗಳು - 0 Comment
Issue Date : 10.02.2014

  ಮೊನ್ನೆ ಜನವರಿ 18ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಪುರಸ್ಕೃತರಾದ ಹರಿಶ್ಚಂದ್ರ ರೇಣಾಪುರಕರ್ ಒಬ್ಬ ಶ್ರೇಷ್ಠ ಕವಿ ಹಾಗೂ ಸಂಸ್ಕೃತ ವಿದ್ವಾಂಸ. ಕಾಶಿಯ ವಿಶ್ವ ಸಂಸ್ಕೃತ ಪ್ರತಿಷ್ಠಾನದ ಕಾರ್ಯಕಾರಿ ಸದಸ್ಯರು.ಹುಟ್ಟಿದ್ದು 1924ರ ಸೆ. 17ರಂದು ಲಾತೂರ್ ಜಿಲ್ಲೆಯ ರೇಣಾಪುರ ಎನ್ನುವ ಗ್ರಾಮದಲ್ಲಿ. 1 ವರ್ಷ ಇದ್ದಾಗಲೇ ತಾಯಿಯ ಮಮತೆಯಿಂದ ವಂಚಿತರಾದವರು. ತಂದೆ ಪಾಂಡುರಂಗರಾವ್ ಮತ್ತು ಅತ್ತೆ ಕೃಷ್ಣಾಬಾಯಿಯವರ ಆರೈಕೆಯಲ್ಲಿ ಬೆಳೆದು ಆರಂಭಿಕ ಶಿಕ್ಷಣವನ್ನು ರೇಣಾಪುರ ಮತ್ತು ಲಾತೂರಿನಲ್ಲಿ ಮುಗಿಸಿದರು. ಉನ್ನತ ಶಿಕ್ಷಣವನ್ನು ಪಡೆದಿದ್ದು ಔರಂಗಾಬಾದ್ ಮತ್ತು ಹೈದರಾಬಾದಿನಲ್ಲಿ. […]

ಮೂಲಭೂತವಾದಿಗಳಿಂದ ರಕ್ಷಣೆ ಅಗತ್ಯ: ನ. ಕೃಷ್ಣಪ್ಪ

ಮೂಲಭೂತವಾದಿಗಳಿಂದ ರಕ್ಷಣೆ ಅಗತ್ಯ: ನ. ಕೃಷ್ಣಪ್ಪ

ಜಿಲ್ಲೆಗಳು - 0 Comment
Issue Date : 07.02.2014

ಮೂಲಭೂತವಾದಿಗಳು ಹಾಗೂ ಭೋಗವಾದಿಗಳಿಂದ ಜಗತ್ತನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮಾನನೀಯ ನ. ಕೃಷ್ಣಪ್ಪ ಹೇಳಿದರು. ಅವರು ಫೆ.6ರರಂದು ಚಿಕ್ಕಮಗಳೂರಿನ ಸಾಯಿ ಮಧುವನ ಬಡಾವಣೆಯಲ್ಲಿ ಸಮರ್ಪಣಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಕಾರ್ಯಾಲಯದ ಲೋಕಾರ್ಪಣಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಜಗತ್ತು ಇಂದು ಸಂದಿಗ್ಧ ಸನ್ನಿವೇಶದಲ್ಲಿದೆ. ನಾನು ಹೇಳಿದ್ದೇ ಸರಿ, ಅದನ್ನು ಒಪ್ಪದಿದ್ದರೆ ಎಲ್ಲವನ್ನೂ ನಾಶ ಮಾಡುತ್ತೇವೆ ಎನ್ನುವ  ಮೂಲಭೂತವಾದಿಗಳು ಒಂದೆಡೆ, ಮತ್ತೊಂದೆಡೆ ಜುಗತ್ತು ಇರುವುದೇ ನಮ್ಮ […]

2012ನೇ ಸಾಲಿನ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಶಸ್ತಿ ಪ್ರಕಟ

2012ನೇ ಸಾಲಿನ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಶಸ್ತಿ ಪ್ರಕಟ

ಜಿಲ್ಲೆಗಳು - 0 Comment
Issue Date : 04.02.2014

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ 2012ನೇ ಸಾಲಿನ ವಿವಿಧ ಪ್ರಶಸ್ತಿ­ಗಳನ್ನು ಪ್ರಕಟಿಸಲಾಗಿದೆ. ಎಲ್ಲ ಪ್ರಶಸ್ತಿ­ಗಳೂ ತಲಾ ರೂ. 3 ಲಕ್ಷ ನಗದು, ಸ್ಮರ­ಣಿಕೆ ಮತ್ತು ಪ್ರಶಸ್ತಿ ಪತ್ರ ಹೊಂದಿವೆ. ಎಸ್‌. ಸೋಮಸುಂದರಂ (ಬೆಂಗಳೂರು) ಅವರಿಗೆ ಸಂತ ಶಿಶುನಾಳ ಶರೀಫ ಪ್ರಶಸ್ತಿ ದೊರೆತಿದೆ.  ಪಂ.ಸಂಗಮೇಶ್ವರ ಗುರವ (ಧಾರವಾಡ) ನಿಜಗುಣ ಪುರಂದರ ಪ್ರಶಸ್ತಿ  ಪಂ.ಸಂಗಮೇಶ್ವರ ಗುರವ ಇವರು ಅಪರೂಪದ ಗಾಯಕ ರತ್ನ.  ಅತ್ಯಂತ ಚಿಕ್ಕವಯಸ್ಸಿನಲ್ಲಿ ಆಕಾಶವಾಣಿಯ ಶ್ರೇಣೀಕೃತ ಕಲಾವಿದರಾಗಿ ಹೆಸರು ಮಾಡಿದವರು.  ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಅವರ […]

ಪುಸ್ತಕ ಲೋಕದಲ್ಲಿ ಬಹು ದೊಡ್ಡ ಕ್ರಾಂತಿ

ಪುಸ್ತಕ ಲೋಕದಲ್ಲಿ ಬಹು ದೊಡ್ಡ ಕ್ರಾಂತಿ

ಜಿಲ್ಲೆಗಳು - 0 Comment
Issue Date : 29.01.2014

ರಾಷ್ಟ್ರೋತ್ಥಾನ ಬಳಗ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಮಂಗಳವಾರ (ಜ.28) ಆಯೋಜಿಸಲಾಗಿದ್ದ 50 ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾರತ-ಭಾರತಿ ಪುಸ್ತಕ ಸಂಪದದ ಎರಡನೇ ಸರಣಿಯ ಪುಸ್ತಕಗಳು ಲೋಕಾರ್ಪಣೆಯಾಯಿತು. ಭಾರತ-ಭಾರತಿಯ ಮೊದಲ ಮುದ್ರಣದ ಪ್ರತಿಗಳು ಮರುಮುದ್ರಣವಾಗಿರುವುದು ಪುಸ್ತಕ ಲೋಕದಲ್ಲಿಯೇ ಬಹಳ ದೊಡ್ಡ ಕ್ರಾಂತಿ ಎಂದು ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಾಹಿತಿ ನಾ.ಡಿಸೋಜಾ ಅಭಿಪ್ರಾಯಪಟ್ಟರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹರಡಿರುವ ಕಲಾವಿದ, ಸಾಹಿತಿ, ಧಾರ್ಮಿಕ ಸಂತರಿಂದ ಹಿಡಿದು ಎಲ್ಲ ವರ್ಗದ ವ್ಯಕ್ತಿಗಳ ಬಗ್ಗೆ ರಾಷ್ಟ್ರೋತ್ಥಾನ […]

ಕನ್ನಡ 'ಯೂನಿಕೋಡ್' ಲೋಕಾರ್ಪಣೆ

ಕನ್ನಡ ‘ಯೂನಿಕೋಡ್’ ಲೋಕಾರ್ಪಣೆ

ಜಿಲ್ಲೆಗಳು - 0 Comment
Issue Date : 23.01.2014

ಪ್ರಪಂಚವೇ ನೂತನ ತಂತ್ರಾಂಶಗಳನ್ನು ಅಶವಡಿಸಿಕೊಂಡು ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ ಅವರೊಂದಿಗೆ ನಾವು ಕೂಡಾ ಹೆಜ್ಜೆ ಹಾಕಬೇಕಾಗಿದೆ.  ಅದಕ್ಕೆ ತಕ್ಕಹಾಗೆ ಕನ್ನಡ ಭಾಷೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ.  ಕನ್ನಡ ಭಾಷಾಭಿವೃದ್ಧಿಗೆ ಬಿಡುಗಡೆ ಮಾಡಲಾದ 12 ಬಗೆಯ ಅಕ್ಷರ ವಿನ್ಯಾಸಗಳು 12 ಪರಿವರ್ತಕಗಳು ಬ್ರೈಲ್ ಕನ್ನಡ ತಂತ್ರಾಂಶ ಹಾಗೂ ಮೊಬೈಲ್‍ನಲ್ಲಿ ಬಳಕೆ ಮಾಡುವ ತಂತ್ರಾಂಶಗಳು ಹಾಗೂ ಕೀಲಿಮಣೆ ವಿನ್ಯಾಸ ಹೆಚ್ಚಿನ ನೆರವನ್ನು ನೀಡಲಿವೆ.  ಇದರ ಬಳಕೆಯನ್ನು ಸಮರ್ಪವಾಗಿ ಉಪಯೋಗಿಸಬಹುದು. ಪ್ರಸಕ್ತ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕನ್ನಡ ಯೂನಿಕೋಡ್ ತಂತ್ರಾಂಶಗಳ ಬೀಟಾ […]