ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ

ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭ

ಜಿಲ್ಲೆಗಳು - 0 Comment
Issue Date : 26.12.2013

ಮಾಗಡಿ ರಸ್ತೆಯ ಚೆನ್ನೇನಹಳ್ಳಿಯಲ್ಲಿರುವ ಜನಸೇವಾ  ವಿದ್ಯಾಕೇಂದ್ರ  ಗಂಡುಮಕ್ಕಳ ವಸತಿ ಶಾಲೆಯು 1975 ರಲ್ಲಿ ಸ್ಥಾಪನೆಯಾಗಿದ್ದು, ಪಠ್ಯ ಚಟುವಟಿಕೆ ಜೊತೆಯಲ್ಲಿ  ಮಕ್ಕಳು ಶಾರೀರಿಕವಾಗಿ ಸದೃಢವಾಗಲೆಂದು ಇಲ್ಲಿ ಪ್ರತಿನಿತ್ಯ ಕಸರತ್ತುಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ ಮತ್ತು ಆ ಕಸರತ್ತುಗಳನ್ನು ಜನಸೇವಾ ವಿದ್ಯಾಕೇಂದ್ರದ ವಾರ್ಷಿಕೋತ್ಸವ ಸಮಾರಂಭದ ಶಾರೀರಿಕ ಸಂಜೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ.  ಅದರಂತೆ ಈ ವರ್ಷ 550 ವಿದ್ಯಾರ್ಥಿಗಳನ್ನೊಳಗೊಂಡ ಸಾಮೂಹಿಕ ಸಂಚಲನದಿಂದ ಆರಂಭವಾದ ಪ್ರದರ್ಶನ, ಕೇಸರಿ ಅಂಗಿ ತೊಟ್ಟ ವಿದ್ಯಾರ್ಥಿಗಳ ದಂಡು ಯೋಗಾಸನದ ಒಟ್ಟು 30 ಆಸನಗಳ ಪ್ರದರ್ಶನ, ಬೆಂಕಿ ವರ್ತುಲದೊಳಗಿನ ಜಿಗಿತದ ಸಾಹಸ, ಹಗ್ಗದಲ್ಲಿ ನಡೆದ […]

ಯುವ ಸನ್ಯಾಸಿಗಳಿಗೆ ಪ್ರೇರಣೆ ನೀಡಿದ ಸಂಸ್ಕೃತಿ ಚಿಂತನ ಶಿಬಿರ

ಯುವ ಸನ್ಯಾಸಿಗಳಿಗೆ ಪ್ರೇರಣೆ ನೀಡಿದ ಸಂಸ್ಕೃತಿ ಚಿಂತನ ಶಿಬಿರ

ಜಿಲ್ಲೆಗಳು - 0 Comment
Issue Date : 17.12.2013

ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಅಮೂಲ್ಯ ಜೀವನ ವೌಲ್ಯಗಳನ್ನು ಯುವಜನತೆಯ ಮನದಲ್ಲಿ ತುಂಬಲು ಭಾರತೀಯ ಸಾಂಸ್ಕೃತಿಕ ಪರಿಷತ್ ಅವಿರತವಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಹಲವು ಬಗೆಯ ಕಾರ್ಯಾಗಾರ, ಶಿಬಿರಗಳನ್ನು ನಡೆಸುತ್ತಾ ಬಂದಿದೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಸನ್ಯಾಸಿಗಳು ಸಕ್ರಿಯವಾಗಿ ಭಾಗವಹಿಸಲು ಅನುವಾಗುವಂತೆ ಮಾಡಲು ಯುವಸನ್ಯಾಸಿಗಳಿಗೆಂದೇ ಸಂಸ್ಕೃತಿ ಚಿಂತನೆ ಶಿಬಿರವನ್ನು ಇಲ್ಲಿನ ರವಿಶಂಕರ್ ಗುರೂಜಿಯವರ ‘ಆರ್ಟ್ ಆಫ್ ಲಿವಿಂಗ್’ ಆಶ್ರಮದ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. 142 ಯುವ ಸನ್ಯಾಸಿಗಳು, 30 ಮಂದಿ ಆಧ್ಯಾತ್ಮಿಕ ಸಾಧಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. […]

 ಭಗವದ್ಗೀತಾ ಪಾರಾಯಣ ಯಜ್ಞ

ಭಗವದ್ಗೀತಾ ಪಾರಾಯಣ ಯಜ್ಞ

ಜಿಲ್ಲೆಗಳು - 0 Comment
Issue Date : 16.12.2013

ನಗರದ ಶಂಕರಮಠದಲ್ಲಿ ಡಿಸೆಂಬರ್ 15 ಭಾನುವಾರ ವಿಶ್ವಹಿಂದು  ಪರಿಷತ್  ಆಯೋಜಿಸಿದ್ದ 21ನೇ ವರ್ಷದ  ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಒಂದಾಗಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಪಠಿಸಿದರು. ವಿಶ್ವಹಿಂದು ಪರಿಷತ್ತಿನ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಸುಧಾನ್ವು ಪಟ್ನಾಯಕ್ ಮಾತನಾಡಿ, ಹಿಂದು ಸಮಾಜ ಜನರು ಒಂದಾಗಲು ಪಾರಾಯಣದಂತಹ ಕಾರ್ಯಕ್ರಮಗಳು ನೆರವಾಗುತ್ತವೆ.  ಭಕ್ತಿ ಮೂಲಕ ಆಗಾಗ್ಗೆ ಒಂದುಗೂಡುವುದು ಸಮಾಜದ ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದರು. ಓಂಕಾರಾಶ್ರಮದ ಮುಧುಸೂದನಾನಂದಪುರಿ ಸ್ವಾಮೀಜಿ, ಶ್ರೀಧರಾಶ್ರಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಹೊಸಕೋಟೆಯ […]

ಸಾಮಾನ್ಯರಲ್ಲಿ ಅಸಾಮಾನ್ಯ ದಿ.ಬಾಹುಬಲಿ

ಸಾಮಾನ್ಯರಲ್ಲಿ ಅಸಾಮಾನ್ಯ ದಿ.ಬಾಹುಬಲಿ

ಜಿಲ್ಲೆಗಳು - 0 Comment
Issue Date : 10.12.2013

ಜಮಖಂಡಿ: ಸಾವಿರಾರು ಜನರ ನೋವಿಗೆ ಸ್ಪಂದಿಸುವವನೇ ನಿಜವಾದ ದೇವರು. ನಾವು ಮಾತನಾಡಬಾರದು, ನಮ್ಮ ಬಗ್ಗೆ ಮಾತನಾಡುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರಕ ಶಂಕರಾನಂದ ಹೇಳಿದರು.ನಗರದ ನಮಸ್ಕಾರ ಮಂಡಳಿ ಮೈದಾನದಲ್ಲಿ ಆಯೋಜಿಸಿದ್ದ ಬಾಹುಬಲಿ ದೈಗೊಂಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಹಣ ಗಳಿಸಲು ನಾನಾ ಮಾರ್ಗಗಳಿವೆ. ಆದರೆ ಜನರ ಹೃದಯವನ್ನು ಗೆಲ್ಲುವುದು ಕಷ್ಟಸಾಧ್ಯ ಎಂದರು.ಈ ವ್ಯಕ್ತಿ ಸಾಮಾನ್ಯನಾಗಿದ್ದುಕೊಂಡು ಅಸಾಮಾನ್ಯನಾಗಿ ಬೆಳೆದು ನಮ್ಮನ್ನು ಅಗಲಿದ. ಆತನ ಧ್ಯೇಯನಿಷ್ಠೆಗೆ ನಾವೆಲ್ಲರೂ ಶರಣಾಗಬೇಕು. ಒಬ್ಬ ಸಾಮಾನ್ಯ ಕಾರ್ಯಕರ್ತನ ಜೀವನ […]

ಮೈಸೂರಿನಲ್ಲಿ ಓದುಗರ ಸಮಾವೇಶ

ಮೈಸೂರಿನಲ್ಲಿ ಓದುಗರ ಸಮಾವೇಶ

ಜಿಲ್ಲೆಗಳು - 0 Comment
Issue Date : 09.12.2013

ವಿಕ್ರಮ ಪತ್ರಿಕೆಯ ಆಶ್ರಯದಲ್ಲಿ ಡಿ.1ರಂದು ಇಲ್ಲಿನ ಗೋಪಾಲಸ್ವಾಮಿ ಶಾಲಾ ಆವರಣದಲ್ಲಿ ಓದುಗರ ಸಮಾವೇಶ ನಡೆಯಿತು. ವಿಕ್ರಮ ಪತ್ರಿಕೆಯ ಕುರಿತು ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಓದುಗರು ಹಂಚಿಕೊಂಡರು. ಈಗಿರುವ ಅನೇಕ ಅಂಕಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಓದುಗರು, ಪ್ರಸಾರ ಸಂಖ್ಯೆಯಲ್ಲಿ ಪತ್ರಿಕೆ ಕೊರತೆ ಅನುಭವಿಸುತ್ತಿದ್ದರೂ ಅಂತಹ ಅಂಕಣ ಲೇಖನಗಳು ಬೇರೆ ಯಾವ ಪತ್ರಿಕೆಯಲ್ಲೂ ಸಿಗುವುದಿಲ್ಲ ಎಂಬುದನ್ನು ಪ್ರಾಂಜಲವಾಗಿ ಒಪ್ಪಿಕೊಂಡರು. ಪತ್ರಿಕೆಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕುರಿತ ಬರಹಗಳಿರಬೇಕೆಂದು ಓದುಗರೊಬ್ಬರು ಸಲಹೆ ನೀಡಿದರು. ಪತ್ರಿಕೆಯ ಪ್ರಸರಣ […]

ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಜಾತ್ರೋತ್ಸವ

ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಜಾತ್ರೋತ್ಸವ

ಜಿಲ್ಲೆಗಳು - 0 Comment
Issue Date : 05.12.2013

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪುಟ್ಟ ಊರು ಸುಬ್ರಹ್ಮಣ್ಯ. ಸುತ್ತ ದರ್ಪಣ ತೀರ್ಥ ನದಿ. ನಂಬಿ ಬಂದ ಭಕ್ತರಿಗೆ ಇಂಬು ನೀಡುವ ಕಾರಣಿಕದ ಸನ್ನಿಧಿ ಈ ಕ್ಷೇತ್ರ. ಸುಬ್ರಹ್ಮಣ್ಯ ನಾಗಕ್ಷೇತ್ರ. ಸರ್ಪರಾಜ ವಾಸುಕಿ ಸುಬ್ರಹ್ಮಣ್ಯನೊಂದಿಗೆ ಸನ್ನಿಹಿತನಾಗಿ ಇಲ್ಲಿ ಪೂಜೆ ಪಡೆಯುತ್ತಾನೆ. ಆದ್ದರಿಂದಲೇ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧಿ. ಮಕ್ಕಳಾಗದವರು, ಚರ್ಮರೋಗಗಳ ಸಮಸ್ಯೆ ಇರುವ ಸರ್ವ ಧರ್ಮೀಯರೂ ಕ್ಷೇತ್ರಕ್ಕೆ ಹರಕೆ ಹೊತ್ತು, ಸಲ್ಲಿಸಿ ಕೃತಾರ್ಥರಾಗುತ್ತಾರೆ. ಪೌರಾಣಿಕ ಹಿನ್ನೆಲೆ  ಶ್ರೀ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ […]

ಗಿನ್ನಿಸ್ ವೀರ

ಗಿನ್ನಿಸ್ ವೀರ

ಉಡುಪಿ ; ಜಿಲ್ಲೆಗಳು - 0 Comment
Issue Date : 02.12.2013

ಸಾಧನೆಗೆ ಅಸಾಧ್ಯವಾದದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ,ನಂಬಿಕೆ, ಸತತ ಪ್ರಯತ್ನ ಮುಖ್ಯವೆನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ಕೋಡಿ ಕನ್ಯಾನದ ಗೋಪಾಲ್ ಖಾರ್ವಿ 2011 ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ಕಟ್ಟಿಹಾಕಿದ್ದರು. ಅಲ್ಲಿಗೆ ಸುಮ್ಮನಾಗದ ಅವರು ಕಳೆದ ಜನವರಿಯಲ್ಲಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಿಂದ ಕೈಕಾಲುಗಳಿಗೆ ಕಬ್ಬಿಣದ ಸರಪಳಿಯಿಂದ ಬಂಧಿಸಿಕೊಂಡು ಮಲ್ಪೆ ಕಿನಾರೆ ತನಕ ಈಜೀ ಗಿನ್ನಿಸ್ ದಾಖಲೆ ನಿರ್ಮಾಣದ ಹೊಸ್ತಿನಲ್ಲಿದ್ದರೆ ಜಿ.ಪಿ.ಎಸ್ ಕ್ಯಾಮಾರ ಅಳವಡಿಸಲಿಲ್ಲವೆಂಬ ಕಾರಣಕ್ಕೆ ದಾಖಲೆಯು ಕೈತಪ್ಪಿತ್ತು.   ಆದರೆ ಗಿನ್ನಿಸ್ ಪಡೆಯಬೇಕೆಂಬ […]

ಬಾಳ್ತಿಲ: ದಿ|ಸೌಮ್ಯಾ ಕುಟುಂಬಕ್ಕೆ ಮನೆ ಹಸ್ತಾಂತರ

ಬಾಳ್ತಿಲ: ದಿ|ಸೌಮ್ಯಾ ಕುಟುಂಬಕ್ಕೆ ಮನೆ ಹಸ್ತಾಂತರ

ಜಿಲ್ಲೆಗಳು - 0 Comment
Issue Date : 27.11.2013

ಬಾಳ್ತಿಲ ಗ್ರಾಮ ಕೋರ್ಯದಲ್ಲಿ 2013 ಫೆ. 23ರಂದು ಹತ್ಯೆಯಾಗಿದ್ದ ದಿ| ಸೌಮ್ಯಾ ಕುಟುಂಬಕ್ಕೆ ಸಂಘ ಪರಿವಾರವು ನೀಡಿದ ವಾಗ್ದಾನದಂತೆ ವಸತಿಗೃಹವನ್ನು ನಿರ್ಮಿಸಿ ಹಸ್ತಾಂತರಿಸಿದರು. ಕಡು ಬಡತನದ ನಡುವೆಯೂ ಡಿ.ಎಡ್. ಮುಗಿಸಿದ್ದ ಸೌಮ್ಯಾ ಉದ್ಯೋಗ ಸೇರ್ಪಡೆಗಾಗಿ ಶೈಕ್ಷಣಿಕ ದಾಖಲೆ ಪತ್ರಗಳನ್ನು ತರಲು ಮನೆಗೆ ಬರುತ್ತಿದ್ದಾಗ ಹಿಂಬಾಳಿಸಿದ ಸ್ಥಳೀಯ ನಿವಾಸಿ ಸತೀಶ್ ಎಂಬಾತ ಆತ್ಯಾಚಾರಕ್ಕೆ ಯತ್ನಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ಕೆರೆಗೆ ತಳ್ಳಿದ್ದಾಗಿ ಪ್ರಕರಣ ದಾಖಲಾಗಿತ್ತು. ಘಟನೆಯ ಸಂದರ್ಬ ಮೃತಳ ಮನೆಗೆ ಭೇಟಿ ನೀಡಿದ್ದ ಸಂಘ ಪರಿವಾರದ […]

ಶೃಂಗೇರಿ ಫಾರೆಸ್ಟ್ ಚೆಕ್‌ಪೋಸ್ಟ್ ಮೇಲೆ ನಕ್ಸಲ್ ದಾಳಿ

ಚಿಕ್ಕಮಂಗಳೂರು ; ಜಿಲ್ಲೆಗಳು - 0 Comment
Issue Date : 25.11.2013

ಚಿಕ್ಕಮಗಳೂರು: ರಾಜ್ಯದಲ್ಲಿ ನಕ್ಸಲ್ ಉಪಟಳ ಮತ್ತೆ ಹೆಚ್ಚಾಗತೊಡಗಿದೆ. ಈ ತಿಂಗಳ ಮೊದಲ ವಾರದಲ್ಲಿ ಬೆಳ್ತಂಗಡಿ ಬಳಿ ದಾಳಿ ನಡೆಸಿದ ನಕ್ಸಲರು ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಶೃಂಗೇರಿ ತಾಲ್ಲೂಕು ತನಿಕೋಡು ಅರಣ್ಯ ತನಿಖಾ ಠಾಣೆ ಮೇಲೆ ನ.18ರಂದು ನಸುಕಿನ ವೇಳೆ ನಕ್ಸಲರು ದಾಳಿ ಮಾಡಿ ಪೀಠೋಪಕರಣ ಧ್ವಂಸಗೊಳಿಸಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂವರು ಮಹಿಳೆಯರು ಸೇರಿ ಹತ್ತು ಜನರಿದ್ದ ತಂಡ ರಾತ್ರಿ 2.30 ಸಮಯದಲ್ಲಿ ದಾಳಿ ಮಾಡಿದ್ದು, […]

ಕೆಎಲ್ಇಗೆ 98 ವರ್ಷ – ಶತಕದತ್ತ ಪಯಣ

ಜಿಲ್ಲೆಗಳು - 0 Comment
Issue Date : 12.11.2013

ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಬೆಳವಣಿಗೆಗಾಗಿ ಹುಟ್ಟಿಕೊಂಡ ಸಂಸ್ಥೆ  ಶಿರಸಂಗಿಯ ಲಿಂಗರಾಜ ದೇಸಾಯಿಯವರ ತ್ಯಾಗದ, ದಾನದ ಪ್ರತೀಕವಾಗಿ ಇಂದಿಗೂ ಉಳಿದುಕೊಂಡು ತನ್ನ ಕೊಂಬೆಗಳನ್ನು ನಾಡಿನಾದ್ಯಂತ ವಿಸ್ತರಿಸುತ್ತಿರುವ ಕೆಎಲ್ಇ ಸೊಸೈಟಿಗೆ ನ.12 ರಂದು 98 (1916) ವರ್ಷದ ಸಂಭ್ರಮ.  ಸಂತಾನವಿಲ್ಲದ ಲಿಂಗರಾಜ ದೇಸಾಯಿಯವರು ನಾಡಿನ ಸಮಸ್ತ ಮಕ್ಕಳಿಗೆ ಶಿಕ್ಷಣಭಾಗ್ಯವನ್ನು ಒದಗಿಸುವ ಕಾರಣದಿಂದ ಹುಟ್ಟಿಕೊಂಡ ಸಂಸ್ಥೆ.  7 ಜನ ಶಿಕ್ಷಕರ ಪರಿಶ್ರಮದಿಂದ ಹುಟ್ಟಿಕೊಂಡ ಸಂಸ್ಥೆ ಇಂದು ಅಸಂಖ್ಯಾತ ಜನರಿಗೆ ದಾರಿದೀಪವಾಗಿದೆ.