ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿನೀತಿ ವಿರುದ್ಧ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ

ದಕ್ಷಿಣ ಕನ್ನಡ - 0 Comment
Issue Date : 20.05.2014

ಮಂಗಳೂರು: ಗುಲ್ಭರ್ಗದ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ, ಎಎನ್‌ಎಫ್ ಯೋಧ ನವೀನ್ ನಾಯಕ್ ಅವರ ಕರ್ತವ್ಯನಿಷ್ಠೆಗೆ ಗೌರವ, ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದವರಿಗೆ ‘ಚೋರ ಭಾಗ್ಯ’ ಕಲ್ಪಿಸುತ್ತಿದೆ. ಪ್ರಜಾಸತ್ತೆಯಲ್ಲಿ ಈ ತೆರನ ಧೋರಣೆ ಸರ್ವಥಾ ಅಕ್ಷಮ್ಯ ಎಂದು ಸ್ವಾಭಿಮಾನ್ ಭಾರತ್‌ನ ನಿಕೇತ್ ರಾಜ್ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿನೀತಿ ವಿರುದ್ಧ ವಿಶ್ವ ಹಿಂದು ಪರಿಷತ್ ಮೇ 12ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಅನ್ಯಾಯ ಮಾಡಿದವರ ವಿರುದ್ಧ ಕ್ರಮ ಕೈಗೊಂಡಾಗಲೇ ನೀವು ಹಿಂದುಗಳ ಪಾಲಿನ ನಿಜವಾದ ಹೀರೊ ಆಗ್ತಿರಾ ಎಂದವರು ಪೊಲೀಸರನ್ನು ಉದ್ದೇಶಿಸಿ ನುಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿಆಡಳಿತ ನಡೆಸುತ್ತಿದ್ದು, ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಸನ್ನಿವೇಶ ಸೃಷ್ಟಿಸುತ್ತಿದೆ. ಆದರೆ ಹಿಂದು ಸಮಾಜ ಬೆಂಕಿಯಲ್ಲಿ ಅರಳಿದ ಹೂವಿನಂತೆ. ಇಂತಹ ಷಡ್ಯಂತ್ರಗಳಿಗೆ ಹೆದರದೆ ದಿಟ್ಟ ಉತ್ತರ ನೀಡಲಿದೆ ಎಂದರು. ರಾವಣ ಸೀತೆಯನ್ನು ಕದ್ದೊಯ್ಯಲು ಹೇಡಿಯಂತೆ ಮಾರುವೇಷದಲ್ಲಿ ಬಂದಿದ್ದ . ಅಂತೆಯೇ ಸೋನಿಯಾ ಗಾಂಧಿಹಿಂದು ಸಂಸ್ಕೃತಿಯನ್ನು ಬಿಂಬಿಸುವ ಉಡುಪು ಧರಿಸಿ ಹಿಂದು ಸಮಾಜದ ಕ್ರೈಸ್ತೀಕರಣಕ್ಕೆ ಷಡ್ಯಂತ್ರ ಹೂಡಿದ್ದಾರೆ. ಈ ಕುರಿತು ಹಿಂದು ಸಮಾಜ ಜಾಗೃತವಾಗಬೇಕು ಎಂದರು. ಬೆಂಗಳೂರಿನಲ್ಲಿ ಸುಬ್ರಹ್ಮಣ್ಯ ದೇವಾಲಯಕ್ಕೆಂದು ಕಾದಿರಿಸಿದ್ದ ಸ್ಥಳವನ್ನು ಸರ್ಕಾರ ಹಿಂದುಳಿದವರು ಮತ್ತು ಬುದ್ಧಿಮಾಂದ್ಯರಿಗೆ ಮೀಸಲಾದ ಜಾಗವೆಂಬ ಸಬೂಬು ನೀಡಿ ಹಿಂದಕ್ಕೆ ಪಡೆದು ಯು.ಟಿ.ಫರೀದ್ ಟ್ರಸ್ಟ್‌ಗೆ ನೀಡಿ ಮಲತಾಯಿ ಧೋರಣೆ ಅನುಸರಿಸಿದೆ. ದೇವಳಕ್ಕೆ ನೀಡಿದ ಸ್ಥಳ ಹಿಂದಕ್ಕೆ ಪಡೆಯುವ ಸರ್ಕಾರ ವಕ್ಸ್‌ಬೋರ್ಡ್‌ಗೆ ನೀಡಿದ ಸ್ಥಳವನ್ನು ಹಿಂದಕ್ಕೆ ಪಡೆದೀತೆ ಎಂದು ಪ್ರಶ್ನಿಸಿದ ನಿಕೇತ್ ರಾಜ್, ಮಹಾತ್ಮ ಗಾಂಧಿಹೆಸರಿನಲ್ಲಿ ನಕಲಿ ಗಾಂಧಿಕುಟುಂಬ ದೇಶದಲ್ಲಿ ರಾಜಕೀಯ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಹಿಂದು ಜಾಗರಣ ವೇದಿಕೆ ರಾಜ್ಯ ಸಹಸಂಚಾಲಕ ಸತ್ಯಜೀತ್ ಸುರತ್ಕಲ್ ಮಾತನಾಡಿ ಗೋ ಕಳ್ಳರಿಗೆ ಶಾಸಕ ಮೊಯ್ದೀನ್ ಬಾವ ರಕ್ಷಣೆ ನೀಡಿದ್ದರೆಂದು ಆರೋಪಿಸಿದರು. ಬಜರಂಗದಳದ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್, ಜಿಲ್ಲಾಧ್ಯಕ್ಷ ಮನೋಹರ ತುಳಜಾರಾಂ, ಎಸ್.ವಿರಪ್ಪ ಮೂಡುಶೆಡ್ಡೆ, ಶ್ರೀರಾಮ ಸೇನೆಯ ಕುಮಾರ ಮಾಲೆಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ವಿ.ಹಿಂ.ಪ ಸಹಕಾರ್ಯದರ್ಶಿ ಕೃಷ್ಣಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಸ್ವಾಗತಿಸಿದರು. ವಿ.ಹಿಂ.ಪ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್‌ ಉಪಸ್ಥಿತರಿದ್ದರು.

   

Leave a Reply