ದಕ್ಷಿಣಪಾದ ಪ್ರಸರಣಾಸನ

ಅಷ್ಟಾಂಗ ಯೋಗ - 0 Comment
Issue Date : 22.03.2014

ಬಲಗಾಲನ್ನು ಹಿಂದಕ್ಕೆ ಚಾಚಿರುವುದುಂದಾಗಿ ಈ ಆಸನಕ್ಕೆ ದಕ್ಷಿಣಪಾದ ಪ್ರಸರಣಾಸನ ಎಂಬ ಹೆಸರು ಬಂದಿದೆ.

ಮಾಡುವ ಕ್ರಮ:

1)    ನಮಸ್ಕಾರ ಮುದ್ರೆಯಲ್ಲಿ ಎರಡೂ ಕಾಲುಗಳ ಪಾದಗಳನ್ನು ಒಟ್ಟಿಗೆ ಜೋಡಿಸಿ ಎದೆ ಎತ್ತಿ  (ಸೂರ್ಯ ನಮಸ್ಕಾರ ಸ್ಥಿತಿ 1 ರಂತೆ) ನಿಂತುಕೊಳ್ಳಬೇಕು.

2)   ದೀರ್ಘವಾದ ಉಸಿರನ್ನು ತೆಗೆದುಕೊಳ್ಳುತ್ತ ಕಾಲುಗಳ ಸ್ಥಿತಿ ಬದಲಿಸದೇ ಕೈಗಳನ್ನು ನಮಸ್ಕಾರ ಮುದ್ರೆಯಲ್ಲೇ (ಸೂರ್ಯ ನಮಸ್ಕಾರ ಸ್ಥಿತಿ ಎರಡರಂತೆ) ಮೇಲಕ್ಕೆ ಎತ್ತಿ ನಿಲ್ಲಬೇಕು.

3)  ಅನಂತರ ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮುಂದಕ್ಕೆ ಬಗ್ಗಿ ಎರಡೂ ಕೈಗಳ ಅಂಗೈಗಳನ್ನು ಮಂಡಿ ಬಗ್ಗಿಸದೇ (ಸೂರ್ಯ ನಮಸ್ಕಾರ 3ರ ಸ್ಥಿತಿಯಂತೆ) ನೆಲದಲ್ಲಿ ಇಡಬೇಕು.

4)  ಎಡಗಾಲನ್ನು ಎರಡೂ ಕೈಗಳ ಮಧ್ಯೆ ಇರಿಸಿ ಬಲಗಾಲನ್ನು ಸಾಧ್ಯವಾದಷ್ಟೂ ಹಿಂದಕ್ಕೆ ನೇರವಾಗಿ ಚಾಚಬೇಕು. ಈ ಸ್ಥಿತಿಯಲ್ಲಿ ಸೊಂಟವನ್ನು ನೆಲಕ್ಕೆ ಒತ್ತುತ್ತಾ, ಎದೆಯನ್ನು ಎತ್ತಿ, ಅಗಲಿಸಿ, ಕತ್ತನ್ನು ಮತ್ತು ದೃಷ್ಟಿಯನ್ನು ಸಾಕಷ್ಟು ಮೇಲಕ್ಕೆತ್ತಬೇಕು. ಇದರೊಂದಿಗೆ ಎಡಗಾಲಿನ ತೊಡೆ ಮೀನಖಂಡವನ್ನು ಸ್ಪರ್ಶಿಸಬೇಕು.

ಲಾಭಗಳು:

ಈ ಆಸನದ ಅಭ‍್ಯಾಸದಿಂದಾಗಿ ಹೊಟ್ಟೆಯ ಬೊಜ್ಜು ಕರಗುವುದು ಹಾಗೂ ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ದೂರವಾಗುವುವು. ಕತ್ತು ನೋವು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುವುದು ಮತ್ತು ಕಾಲುಗಳ ಗಡಸುತನ ನಿವಾರಣೆಯಾಗುವುದು. 

   

Leave a Reply