ದತ್ತಪೀಠ

ಚಿಕ್ಕಮಂಗಳೂರು - 1 Comment
Issue Date : 06.02.2014

ಚಿಕ್ಕಮಗಳೂರಿನ ದತ್ತಪೀಠವಿರುವ ಚಂದ್ರದ್ರೋಣ ಪರ್ವತ ಪ್ರದೇಶ ಅತ್ಯಂತ ಸುಂದರ ರಮಣೀಯ ತಾಣ. ಇದು ಗುಹಾಂತರ ದೇವಾಲಯ. ಸಾವಿರಾರು ವರ್ಷಗಳಿಂದ ಇದು ಹಿಂದುಗಳ ಶ್ರದ್ಧಾಕೇಂದ್ರವಾಗಿತ್ತು. ಅಲ್ಲದೆ ಈ ಗುಹೆಯಲ್ಲಿ ದತ್ತಾತ್ರೇಯರ ಮೂರ್ತಿ ಇದೆ. ನಿತ್ಯ ಪೂಜೆ ಮಾಡುತ್ತಿದ್ದ ವಿಚಾರವು ಸ್ವತಃ ಮುಸಲ್ಮಾನ ಮಠದ ವ್ಯಕ್ತಿಯಾದ ಶಾಖಾದ್ರಿಯೇ ಪ್ರಕಟಿಸಿದ (ಖಲಂದಿರಿಯಾ ಬರ ಹಾಶ್) ಎಂಬ ಪುಸ್ತಕದಲ್ಲಿಯೂ ಉಲ್ಲೇಖವಿದೆ. ಆದರೆ ಹೈದರಾಲಿ ಹಾಗೂ ಟಿಪ್ಪುವಿನ ಕಾಲದಲ್ಲಿ ಇದನ್ನು ಇಸ್ಲಾಮೀಕರಿಸಲಾಯಿತು. ವೇದಗಳ ಅಧ್ಯಯನದ ನಾಲ್ಕು ಪೀಠಗಳನ್ನು ನಾಲ್ಕು ಗೋರಿಗಳನ್ನಾಗಿ ಪರಿವರ್ತಿಸಲಾಯಿತು. ದತ್ತಾತ್ರೇಯ ದೇವರ ಹೆಸರಿನ ಖಾತೆಯ ನೂರಾರು ಎಕರೆ ಭೂಮಿಯನ್ನು ಮಾರಾಟ ಮಾಡಲಾಯಿತು. ಸುಮಾರು 1725 ವರೆಗೂ ಇದು ಹಿಂದೂ ಧರ್ಮೀಯರ ಕೇಂದ್ರವಾಗಿತ್ತು ಎನ್ನುವುದಕ್ಕೆ ದಾಖಲೆಗಳಲ್ಲಿ ಆಧಾರಗಳು ಸಿಗುತ್ತವೆ. ಕ್ರಮೇಣ ಪೀಠದ ನಿರ್ವಹಣೆಯ ಜವಾಬ್ದಾರಿ ಅಲ್ಲೆ ನೆಲೆಯೂರಿದ ಖಲಂದರ್ ಎನ್ನುವವನದಾಯಿತು. ಹೈದರಾಲಿಯು ಪೀಠದ ರಕ್ಷಣೆಗೆಂದು ಕೆಲವು ಮುಸಲ್ಮನರನ್ನು ನೇಮಿಸಿದ. ಖಲಂದರ್ ಸತ್ತ ನಂತರ ಬುಡನ್ ಷಾ ಖಾದ್ರಿಯನ್ನು ದತ್ತಪೀಠದ ಸರ್ವಾಧಿಕಾರಿಯಾಗಿ ನೇಮಿಸಿದ. ಈತನೇ ದತ್ತಪೀಠದ ಇಸ್ಲಾಮೀಕರಣಕ್ಕೆ ಕಾರಣನಾದನು. ಈತ ಚಂದ್ರರೋಣ ಪರ್ವತ ಎಂಬ ಹೆಸರನ್ನು ಮರೆಮಾಚಿ ದತ್ತಪೀಠದ ಜೊತೆಗೆ ಬಾಬಾ ಬುಡನ್ ಗಿರಿ ಎಂದು ಸೇರಿಸಿಕೊಂಡನು. ಸುಮಾರು 1990 ರ ಸಮಯದಲ್ಲಿ ವಿ.ಹಿಂ.ಪ.ಪ್ರಮುಖರು ಚಿಕ್ಕಮಗಳೂರಿನ ಹಿರಿಯರನ್ನು ಭೇಟಿ ಮಾಡಿ ದತ್ತಪೀಠದ ಮಾಹಿತಿಯನ್ನು ಕಲೆಹಾಕಿದರು. ಸರಕಾರದ ಕಡತಗಳನ್ನು ಪರಿಶೀಲಿಸಿದರು. ರಾಜರುಗಳ ಕಾಲದ ಶಾಸನಗಳಲ್ಲಿ ಉಲ್ಲೇಖಿಸಿದ ವಿಷಯಗಳನ್ನು ಸಂಗ್ರಹಿಸಿದರು. ದತ್ತಪೀಠಕ್ಕೆ ಭೇಟಿ ನೀಡಿದರು. ಅಲ್ಲಿ ನಡೆಯುತ್ತಿದ್ದ ಹಿಂದು ವಿರೋಧಗಳನ್ನು ಸಹಿಸದೆ, ಜನಜಾಗರಣೆಗೆ ಚಿಂತನೆ ನಡೆಸಿದರು. 1998 ರಲ್ಲಿ ಮೊಟ್ಟಮೊದಲು ದತ್ತ ಜಯಂತಿ ಉತ್ಸವ ಯೋಚಿಸಲಾಯಿತು. ಅದರ ಅಂಗವಾಗಿ ರಥಯಾತ್ರೆಗಳು ಆರಂಭವಾದವು. ರಾಜ್ಯಾದ್ಯಂತ ಭಾರಿ ಸುದ್ದಿಯಾಯಿತು. ಬಾಬರಿ ಕಟ್ಟಡ ದ್ವಂಸಕ್ಕೆ ಹೋಲಿಸಿ, ಚರ್ಚೆ, ಟೀಕೆಗಳು ಕೇಳಿಬಂದವು. ಹಿಂದೂ ವಿರೋಧಿ ಪತ್ರಿಕೆಗಳು ಬಾಯಿಗೆ ಬಂದಂತೆ ಬರೆದವು. ವಿಚಾರ ವಾದಿಗಳೆಂದು ಕರೆಸಿಕೊಳ್ಳುವವರು ಮೈಕೊಡವಿ ಎದ್ದು ನಿಂತರು. ಅಂತೂ ದತ್ತಪೀಠ ಮತ್ತೆ ಸುದ್ದಿಗೆ ಗ್ರಾಸವಾಯಿತು. 1997ರಲ್ಲಿ ಬಜರಂಗ ದಳ ಪ್ರವೇಶವಾಯಿತು. ರಾಜ್ಯಾದ್ಯಂತ ರಥಯಾತ್ರೆಗಳು ಆರಂಭವಾದವು. ಸತ್ಯಸಂಗತಿ ಜನರಿಗೆ ಅರಿವಾಗತೊಡಗಿತು. ದತ್ತ ಜಯಂತಿಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬಜರಂಗ ದಳದ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಬರಲಾರಂಭಿಸಿದರು. ತುಷ್ಟೀಕರಣ ನೀತಿಯನ್ನು ನಡೆಸುವ ಸರಕಾರಗಳಿಗೆ ಮುಜುಗರವಾಗಲಾರಂಭಿಸಿತು. ರಥಯಾತ್ರೆಗಳಿಗೆ ನಿರ್ಬಂಧ ಹೇರಿತು. ಹಿಂದು ಮುಖಂಡರನ್ನು ಬಂಧಿಸಿತು. ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆಯನ್ನು ರದ್ದುಗೊಳಿಸಲು ಆದೇಶಿಸಿತು. ಮೆರವಣಿಗೆ ನೇತೃತ್ವ ವಹಿಸಿದ ಹಿಂದು ಮುಖಂಡರಾದ ಪ್ರಮೋದ ಮುತಾಲಿಕ್, ಸಿ.ಟಿ.ರವಿ, ಸುನಿಲ ಕುಮಾರ್, ವಿಠಲ್ ರಾವ್ ಮಂತಾದವರ ಬಂಧನವಾಯಿತು. ಅದರೂ ಅದ್ದೂರಿಯಾಗಿ ದತ್ತ ಜಯಂತಿ ಉತ್ಸವ ನಡೆಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ವಿವಿಧ ಮಜಲುಗಳಲ್ಲಿ ಬಜರಂಗ ದಳ ಹೋರಾಟವನ್ನು ನಡೆಸುತ್ತಾ ಬಂದಿದೆ. ಈ ಕ್ಷೇತ್ರವು ಹಿಂದುಗಳ ಕ್ಷೇತ್ರವಾಗಿದ್ದು, ಅದು ಹಿಂದುಗಳಿಗೇ ಸೇರಬೇಕು. ದತ್ತಪೀಠದಲ್ಲಿ ನಿತ್ಯ ತ್ರಿಕಾಲ ಪೂಜೆಗೆ ಅವಕಾಶ ನೀಡಬೇಕು, ಪೀಠದಲ್ಲಿ ಪೂಜೆಗೆ ಖಾಯಂ ಆಗಿ ಅರ್ಚಕರನ್ನು ನಿಯುಕ್ತಿಗೊಳಿಸಬೇಕು. ಪೀಠಕ್ಕೆ ಬರುವ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಅರ್ಚಕರಿಗೆ ವಸತಿ ವ್ಯವಸ್ಥೆ , ಅರ್ಚನೆಗೆ ಬೇಕಾದ ಸಾಮಾಗ್ರಿಗಳ ಮಾರಾಟಕ್ಕೆ ಮಳಿಗೆ ಹಾಗೂ ಪೀಠದ ಪರಿಸರದಲ್ಲಿ ಹಿಂದುಗಳಿಗೂ ಅಂಗಡಿಗಳನ್ನಿಟ್ಟು ವ್ಯಪಾರ ನಡೆಸಲು ವ್ಯವಸ್ಥೆ ಮಾಡಿ ಕೊಡಬೇಕು. ಅಕ್ರಮ ಗೋರಿಗಳನ್ನು ತೆರವುಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಯುತ್ತಿದ್ದು, ದತ್ತಪೀಠವು ಸಂಪೂರ್ಣವಾಗಿ ಹಿಂದುಗಳ ಶ್ರದ್ಧಾಕೇಂದ್ರವೆಂದು ಘೊಷಣೆಯಾಗಬೇಕೆಂಬುದೇ ಹಿಂದೂ ಸಮಾಜದ ಆಗ್ರಹವಾಗಿದೆ. ಈ ಹಿನ್ನಲೆಯಲ್ಲಿ 12ವರ್ಷಗಳಿಂದ ಜನಜಾಗರಣೆಯ ಅಂಗವಾಗಿ ದತ್ತಮಾಲಾ ಕಾರ್ಯಕ್ರಮವು ನಡೆಯುತ್ತಿದ್ದು, ಗ್ರಾಮ ಗ್ರಾಮಗಳಿಂದ ದತ್ತ ಭಕ್ತರು ಪೀಠಕ್ಕೆ ಬರುವಂತಾಗಿದೆ. ಮಾತ್ರವಲ್ಲದೆ, ಹಿಂದೂ ಸಮಾಜದ ಯುವ ಜನಾಂಗವನ್ನು ಇನ್ನಷ್ಟು ಸಂಸ್ಕಾರಬದ್ಧಗೊಳಿಸುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಮಾತ್ರವಲ್ಲದೆ ಸಾವಿರಾರು ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿ ದೇಶಭಕ್ತರನ್ನಾಗಿ ಮಾಡಲು ದತ್ತಪೀಠ ಆಂದೋಲನವು ಸಹಕಾರಿಯಾಗಿದೆ.

   

1 Response to ದತ್ತಪೀಠ

  1. Shannan

    I see a lot of interesting articles on your blog. You have to spend a
    lot of time writing, i know how to save you a lot of work, there
    is a tool that creates unique, SEO friendly posts in couple of seconds, just type in google – k2
    unlimited content

Leave a Reply