ದೊಡ್ಡ ಮೆದುಳಿದ್ದರೆ ಬುದ್ಧಿ ಜಾಸ್ತೀನಾ..?

ಸುದ್ದಿಗಳು - 0 Comment
Issue Date : 13.10.2014

ಮೆದುಳು ದೊಡ್ಡದಾಗಿದ್ದರೆ ಬುದ್ಧಿ ಹೆಚ್ಚಾಗಿರುತ್ತಾ? ಇಂಥದೊಂದು ವಿಚಿತ್ರವಾದ ಅನುಮಾನ ಕೆಲ ದಿನಗಳ ಹಿಂದೆ ವಿಜ್ಞಾನಿಗಳನ್ನು ಕಾಡತೊಡಗಿತ್ತು. ವಿಜ್ಞಾನಿಗಳಿಗೆ ಅನುಮಾನ ಶುರುವಾಯ್ತೆಂದರೆ ಬಿಡಿ, ಸಂಶೋಧನೆ ನಡೆದಂತೂ ಅವರಿಗೆ ನಿದ್ದೆಯಿಲ್ಲ. ಇಲಿ ಮತ್ತು ಹೆಗ್ಗಣಗಳು ವಿಜ್ಞಾನಿಗಳ ಆಪ್ತಸ್ನೇಹಿತರು! ಏಕೆಂದರೆ ಯಾವುದೇ ಪ್ರಯೋಗ ಮಾಡಬೇಕೆಂದರೂ ವಿಜ್ಞಾನಿಗಳಿಗೆ ಮೊದಲು ನೆನಪಾಗುವ ಪಾಪದ ಜೀವಿಗಳೆಂದರೆ ಇಲಿಗಳು. ಇಲಿಗಳ ಮೆದುಳನ್ನು ಬೇರೆ ದೊಡ್ಡ ಪ್ರಾಣಿಗಳ ಮೆದುಳಿನೊಂದಿಗೆ ಹೋಲಿಸಿ ನೋಡಿದಾಗ ಬುದ್ಧಿಶಕ್ತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದ್ದು ಕಂಡುಬಂತು. ಇದರಿಂದಾಗಿ ಮೆದುಳಿನ ಗಾತ್ರಕ್ಕೂ ಬುದ್ಧಿಶಕ್ತಿಗೂ ಯಾವುದೇ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರಂತೆ!

ಅಷ್ಟೇ ಅಲ್ಲದೆ, ಗಾತ್ರದಲ್ಲಿ ಇಲಿಗಿಂತ ಎರಡು ಮೂರು ಪಟ್ಟು ದೊಡ್ಡದಾಗಿರುವ ಹೆಗ್ಗಣಗಳ ವರ್ತನೆಗೂ ಇಲಿಯ ವರ್ತನೆಗೂ ಯಾವುದೇ ವ್ಯತ್ಯಾಸವಿರಲಿಲ್ಲ. ಅವುಗಳ ಬುದ್ಧಿಶಕ್ತಿ ಸಹ ಒಂದೇ ರೀತಿಯಿತ್ತು. ಹಾಗೆ ಹೇಳುವುದಕ್ಕೆ ಹೋದರೆ ಹೆಗ್ಗಣಗಳಿಗಿಂತ ಇಲಿಗಳು ಹೆಚ್ಚು ಚುರುಕಾಗಿದ್ದಿದ್ದು ಕಂಡುಬಂತು. ಇದರಿಂದಾಗಿ ಮೆದುಳು ಚಿಕ್ಕದಾಗಿದ್ದರೂ ಬುದ್ಧಿಶಕ್ತಿ ಹೆಚ್ಚೇ ಇರಬಹುದು ಎಂಬುದು ದೃಢವಾಯಿತು.

ಇಂಥ ಸಂಶೋಧನೆಗಳನ್ನೆಲ್ಲ ಮಾಡುವ ಯೋಚನೆ ಬಂತಲ್ಲ, ಆ ವಿಜ್ಞಾನಿಯ ಮೆದುಳಿನ ಗಾತ್ರ ಹೇಗಿತ್ತು ಎಂಬುದನ್ನು ಮಾತ್ರ ಎಲ್ಲಿಯೂ ತಿಳಿಸಿಲ್ಲ!

   

Leave a Reply