ಡಾ. ಮುಖರ್ಜಿ ಬಲಿದಾನ ದಿನಾಚರಣೆ

ಬಾಗಲಕೋಟೆ - 0 Comment
Issue Date : 05.08.2014

ಬಾಗಲಕೋಟೆ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರಬೇಕೆಂದು ಹೋರಾಡಿ, ಕಾಶ್ಮೀರದ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಧನರಾದ ಜನಸಂಘದ ಸಂಸ್ಥಾಪಕ ಡಾ. ಶಾಮ ಪ್ರಸಾದ ಮುಖರ್ಜಿಯವರ ಬಲಿದಾನ ದಿನವನ್ನು ಇಲ್ಲಿ ಆಚರಿಸಲಾಯಿತು. ಮುಖರ್ಜಿಯವರ ಕುರಿತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಸವರಾಜ ಯಂಕಂಚಿಯವರು ಮಾತನಾಡಿದರು.

ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷೆ ಶ್ರೀಮತಿ ಕಲಾವತಿ ರಾಜೂರ ಅವರು ಮುಖರ್ಜಿಯವರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಕಿರಣ್ ಕೋರಿ ಸ್ವಾಗತಿಸಿದರು. ಬಸವರಾಜ ಭಜಂತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಗುಂಡೂರಾವ್ ಶಿಂಧೆ, ಸುಭಾಸ್ ಕೊಟಾರಿ, ವಿರೂಪಾಕ್ಷ, ಅಮೃತಕರ ರಾಜುಗೌಳಿ, ನಗರಸಭೆ ಉಪಾಧ್ಯಕ್ಷ ಮಹೇಶ್ ಕಮತಗಿ ಮೊದಲಾದ ಪ್ರಮುಖರು ಹಾಜರಿದ್ದರು.

 

   

Leave a Reply