ಈ ನೆಲವನ್ನು ಪ್ರೀತಿಸುವವರೇ ನಿಜವಾದ ರಾಷ್ಟ್ರೀಯರು: ಕಜಂಪಾಡಿ

ಚಾಮರಾಜನಗರ - 0 Comment
Issue Date : 29.01.2014

ಚಾಮರಾಜನಗರ: ಭಾರತ ದೇಶದಲ್ಲಿ ಇಂದು ಕ್ರೈಸ್ತರಿಗೆ ಹಾಗೂ ಮುಸಲ್ಮಾನರಿಗೆ ಹಿಂದೂಗಳು ಜಾಗ ಕೊಟ್ಟಿದ್ದಾರೆ. ಆದರೆ ಅವರು ಇದಕ್ಕಾಗಿ ಕೃತಜ್ಞರಾಗಿದ್ದಾರೆಯೇ ಎಂದು ಅಖಿಲ ಭಾರತ ಕುಟುಂಬ ಪ್ರಬೋಧನ ಪ್ರಮುಖ್ ಕಜಂಪಾಡಿ ಸುಬ್ರಮಣ್ಯಭಟ್ ಪ್ರಶ್ನಿಸಿದರು.

ಅವರು ಚಾಮರಾಜನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಸ್ವಾಮಿ ವಿವೇಕಾನಂದ -150ನೇ ವರ್ಷಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಸಾವಿರಾರು ಲಕ್ಷಾಂತರ ಸಂಘಗಳಿವೆ. ಸಂಘ ಎಂದರೆ ಸಾಕು ನೆನಪಾಗುವುದು ಅದು ರಾಷ್ಟ್ರೀಯ ಸ್ವಯಂಸೇವಕ ಸಂಘವಾಗಿದೆ. ನಮ್ಮಲ್ಲಿ ಶಿಸ್ತಿನ ಸಿಪಾಯಿಗೆ ಶಸ್ತ್ರಾಸ್ತ್ರ ಹೇಗೋ ಹಾಗೇ ನಮ್ಮ ಸಂಘದ ಕಾರ್ಯಕರ್ತರಿಗೆ ಶಸ್ತ್ರ ದಂಡ. ಅದು ಕೇವಲ ದಂಡವಲ್ಲ. ಬಾಂಬ್ ಹಾಕುವ ಕೈಗಳಿಗೆ, ಆತಂಕವಾದಿಗಳ ವಿರುದ್ಧ ಕೆಲಸ ಮಾಡುವ ಶಸ್ತ್ರ ಎಂದರು.

ಭಾರತ ದೇಶದಲ್ಲಿ 6 ಲಕ್ಷದ 75 ಸಾವಿರ ಗ್ರಾಮಗಳಿವೆ. ಅದರಲ್ಲಿ ಈಗ 40 ಸಾವಿರ ಗ್ರಾಮಗಳಲ್ಲಿ ನಮ್ಮ ಸಂಘ ಕಾರ್ಯ ಇದೆ. ಸಂಘ ಎಲ್ಲರನ್ನೂ ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ದೇಶದಲ್ಲಿನ ಮಣ್ಣನ್ನು ಯಾರು ಪ್ರೀತಿಸಿ ಗೌರವಿಸುತ್ತಾರೋ ಅವರು ನಿಜವಾದ ರಾಷ್ಟ್ರೀಯತೆಯುಳ್ಳವರು ಎಂದರು.

ಮುಖ್ಯ ಅತಿಥಿಗಳಾಗಿದ್ದ ಗುರುಸ್ವಾಮಿ ಮಾತನಾಡಿ, ಆರು ಸಾವಿರ ವರ್ಷದ ಇತಿಹಾಸವಿರುವ ಭಾರತ ದೇಶದಲ್ಲಿ ಪರಂಪರಾಗತ ಧರ್ಮ ಹಿಂದೂ ಧರ್ಮ. ಅದರ ಮೂಲಾಧಾರವೇ ವೇದ ಎಂದರು. ಕಾರ್ಯಕ್ರಮದಲ್ಲಿ ದಕ್ಷಿಣ ಪ್ರಾಂತ ಸಂಘಚಾಲಕ ಮ.ವೆಂಕಟರಾಮು ಅವರು ಹಾಜರಿದ್ದರು.

ಗಣವೇಷಧಾರೀ ಸ್ವಯಂಸೇವಕರು ನಗರದ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲ ನಡೆಸಿದರು. ದಾರಿಯುದ್ದಕ್ಕೂ ಮಾತೆಯರು, ಬಂಧುಭಗಿನಿಯರು ಭಗವಾಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

  • ರಾಮಸಮುದ್ರ ಎಸ್. ವೀರಭದ್ರಸ್ವಾಮಿ
   

Leave a Reply