ಗಾಂಧಿಜಯಂತಿಯಂದು ಸ್ವಚ್ಛತಾ ಅಭಿಯಾನ

ಬೀದರ್ - 0 Comment
Issue Date : 13.10.2014


ಬಿದರ್: ಇಲ್ಲಿನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಗಾಂಧಿ ಜಯಂತಿಯಂದು ಸ್ವಚ್ಛತಾ ಅಭಿಯಾನಕ್ಕೆ ತನ್ನ ಕಾಣಿಕೆ ನೀಡಿದೆ.

ಪರಿಸರ ಸ್ವಚ್ಛತೆಯ ಬಗ್ಗೆ ಗಾಂಧೀಜಿ ವಿಶೇಷ ಮಹತ್ವ ಕೊಟ್ಟಿದ್ದರು. ಈ ಸ್ವಚ್ಛತಾ ಆಂದೋಲನ ಇಂದಿನ ಸನ್ನಿವೇಶದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಬಿ. ಕುಚಬಾಳ್ ಅವರು ತಿಳಿಸಿದರು. ಗಾಂಧೀಜಿ, ಲಾಲ್‌ಬಹದ್ಧೂರ್ ಶಾ
ಸ್ತ್ರಿ ಅಂತಹ ಮಹಾಪುರುಷರ ಆದರ್ಶಗಳನ್ನು ಇಂದು ನಾವು ಗಾದಿ ತಲೆದಿಂಬುಗಳಂತೆ ಹಾಸಿ ಹೊದ್ದುಕೊಳ್ಳುತ್ತಿದ್ದೇವೆಯೇ ಹೊರತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿಲ್ಲ ಎಂದವರು ವಿಷಾದಿಸಿದರು.

ಎನ್.ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ರೇವಣಪ್ಪ ಸಂಗೋಳಗಿ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

   

Leave a Reply