ಗಂಗೂಬಾಯಿ ಹಾನಗಲ್

ವ್ಯಕ್ತಿ ಪರಿಚಯ - 0 Comment
Issue Date : 05.02.2014

ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ್ದು 1913ರ ಮಾರ್ಚ್ 5 ರಂದು ಹಾವೇರಿ ಜಿಲ್ಲೆಯ  ಹಾನಗಲ್ಲಿನಲ್ಲಿ.  ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ.  

1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿಯವರು ಮಹಾತ್ಮಾ ಗಾಂಧೀಜಿಯವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತ ಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು.

‘ಗಂಗೂಬಾಯಿ ಹಾನಗಲ್ ‘, ತಮ್ಮ ಬದುಕಿನಲ್ಲಿ ಎರಡುಬಾರಿ ಹೆಸರನ್ನು ಬದಲಾಯಿಸಿಕೊಂಡರು. ಮೂಲಹೆಸರು, ‘ಗಾಂಧಾರಿ ಹಾನಗಲ್,’ ಎಂದಿತ್ತು. ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, ಅವರ ಪರಿಚಯ ‘ಗಂಗೂಬಾಯಿ ಹುಬ್ಳೀಕರ,’ ಎಂದಾಯಿತು. 1936 ರಲ್ಲಿ ಅವರ ಸಂಗೀತ ಜೀವನದಲ್ಲಿ ಅತ್ಯಮೂಲ್ಯವಾದ ಸಮಯವಾಗಿದ್ದು ಅವರನ್ನು ಕೀರ್ತಿ ಶಿಖರಕ್ಕೆ ಕೊಂಡೊಯ್ಯುವ ಮಾರ್ಗವಾಯಿತು. ಅದೇ ವರ್ಷದಲ್ಲಿ ‘ಮಿಯಾ ಕೀ ಮಲ್ಹಾರ್ ‘ ರಾಗವನ್ನು ಹಾಡಿದಾಗ, ಆಕಾಶವಾಣಿಯಲ್ಲಿ ಅದನ್ನು ಪ್ರಸಾರಮಾಡುವ ಸಮಯದಲ್ಲಿ ‘ಗಂಗೂಬಾಯಿ ಹಾನಗಲ್,’ ಎಂದು ಘೋಶಿಸಲಾಯಿತು. ‘ಹಾನಗಲ್” ಎನ್ನುವುದು ಬಾಯಿಯವರ ಪೂರ್ವಜರ ಊರು.

ಗಂಗೂಬಾಯಿಯವರು ಸಂಗೀತಕಚೇರಿಗಳಿಗಾಗಿ ಭಾರತದ ಉದ್ದಗಲದಲ್ಲೆಲ್ಲ ಸುತ್ತಿದ್ದಾರೆ. ಎಲ್ಲೆಡೆಗೂ ಶ್ರೋತೃಗಳ ಮನಸ್ಸನ್ನು ಗೆದ್ದಿದ್ದಾರೆ. ಅಲ್ಲದೆ 1958ರಲ್ಲಿ ನೇಪಾಳ, 1961ರಲ್ಲಿ ಪಾಕಿಸ್ತಾನ, 1979ರಲ್ಲಿ ಅಮೇರಿಕಾ ಮತ್ತು ಕೆನಡಾ ಹಾಗು 1984ರಲ್ಲಿ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೂ ಪ್ರಯಾಣಿಸಿ ಭಾರತೀಯ ಸಂಗೀತದ ಸವಿಯನ್ನು ಅಲ್ಲೆಲ್ಲ ಉಣಬಡಿಸಿದ್ದಾರೆ.

ಬಿರುದುಗಳು

 • 1948— ಬನಾರಸದಲ್ಲಿ ಭಾರತೀಕಂಠ ಬಿರುದು
 • 1969—ಪ್ರಯಾಗದಲ್ಲಿ ಸ್ವರಶಿರೋಮಣಿ ಬಿರುದು.
 • ಗಾಯನ ಸಮಾಜ, ಬೆಂಗಳೂರು ನೀಡಿದ ಸಂಗೀತ ಕಲಾರತ್ನ ಬಿರುದು

ಪ್ರಶಸ್ತಿಗಳು

ಗಂಗೂಬಾಯಿ ಹಾನಗಲ್ಲರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು ಕೆಲವನ್ನು ಇಲ್ಲಿ ಹೆಸರಿಸಬಹುದು:

  • 1962—ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • 1970—ಪದ್ಮಭೂಷಣ ಪ್ರಶಸ್ತಿ
  • 1973—ಕೇಂದ್ರ ಸಂಗೀತ ನಾಟಕ ಅಕಾಡೆಮಿ
  • 1984—ಮಧ್ಯಪ್ರದೇಶ ಸರಕಾರದಿಂದ ತಾನಸೇನ ಪ್ರಶಸ್ತಿ
  • 1992—ಕರ್ನಾಟಕ ಸರಕಾರದಿಂದ ಕನಕ-ಪುರಂದರ ಪ್ರಶಸ್ತಿ

ಹೃದಯ ಸಂಬಂಧೀ ಉಸಿರಾಟದ ತೊಂದರೆಯಿಂದ ದೀರ್ಘಕಾಲದಿಂದ ಬಳಲುತ್ತಿದ್ದ 97 ವರ್ಷಪ್ರಾಯದ ಜನಪ್ರಿಯ ಹಿಂದೂಸ್ತಾನಿ ಸಂಗೀತಕಾರರಾದ ಗಂಗೂಬಾಯಿಯವರು, ಹುಬ್ಬಳ್ಳಿಯಲ್ಲಿ 21 ಜುಲೈ, 2009ರಂದು  ಅವರ ಪರಿವಾರದವರನ್ನೂ ಹಾಗೂ ಅಪಾರ ಸಂಗೀತಪ್ರೇಮಿಗಳನ್ನೂ ಅಗಲಿದರು. 

 

   

Leave a Reply