ಗಿರೀಶ್ ಚಂದ್ರ ಘೋಷ್ ಜನ್ಮದಿನ

ವ್ಯಕ್ತಿ ಪರಿಚಯ - 0 Comment
Issue Date : 28.02.2014

ಗಿರೀಶ್ ಚಂದ್ರ ಘೋಷ್ (ಫೆಬ್ರವರಿ 28, 1844 – ಫೆಬ್ರವರಿ 8, 1912)  ಬಂಗಾಳಿ ಸಂಗೀತಗಾರ, ಕವಿ, ನಾಟಕಕಾರ, ಕಾದಂಬರಿಕಾರ, ರಂಗ ನಿರ್ದೇಶಕ ಮತ್ತು ನಟ. ಅವರು ಬಂಗಾಳಿ ರಂಗಭೂಮಿಯ ಸುವರ್ಣಯುಗಕ್ಕೆ ಬಹುಮಟ್ಟಿಗೆ ಕಾರಣರಾದರು. ಅವರು ಬಂಗಾಳಿ ‘ಥಿಯೇಟರ್ ಜನಕ’ ಎಂದು ಹೇಳಬಹುದು. ಅವರು ಬಹುಮುಖ ಪ್ರತಿಭೆ,  ಔಪಚಾರಿಕ ಶೈಕ್ಷಣಿಕ ಹಿನ್ನೆಲೆಯಿರುವ ನಟ. 

ಗಿರೀಶ್ ಚಂದ್ರ ಘೋಷ್ ಅವರು 1872 ರಲ್ಲಿ ನಿರ್ಮಿಸಿದ ‘ಗ್ರೇಟ್ ನ್ಯಾಷನಲ್ ಥಿಯೇಟರ್ ‘   ಮೊದಲ ಬಂಗಾಳಿ ವೃತ್ತಿಪರ ನಾಟಕ ಕಂಪನಿಯಾಗಿತ್ತು. ಇವರು ಸುಮಾರು 40 ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಗಿರೀಶ್ ಅವರು ನಾಟಕಗಳನ್ನೇ ಅಲ್ಲದೆ ಕಾದಂಬರಿ, ಸಣ್ಣಕತೆಗಳು, ವಿಮರ್ಶೆ, ಪ್ರಬಂಧ ಮುಂತಾದವುಗಳನ್ನು ಬರೆದಿದ್ದಾರೆ.  

ನಂತರದ ಜೀವನದಲ್ಲಿ ಗಿರೀಶ್ ಅವರ ಮನಸ್ಸು ಆಧ್ಯಾತ್ಮಿಕ ಭಾವನೆಗಳಿಗೆ ಎಡೆಗೊಟ್ಟು ಶ್ರೀ ರಾಮಕೃಷ್ಣ ಪರಮಹಂಸರ ಖ್ಯಾತ ಅನುಯಾಯಿಯಾದರು. ಪರಮಹಂಸರು ನುಡಿದ ಉಪದೇಶಗಳ ನೆನಪುಗಳು, ಅವರ ಶಿಷ್ಯರ ಸಹವಾಸ, ಜೊತೆಗೆ ರಾಮಕೃಷ್ಣ ಪರಮಹಂಸರ ಆಶೀರ್ವಾದ; ಶ್ರೀಮಾತೆ ಶಾರದಾದೇವಿಯ ಮಾತೃಪ್ರೇಮ ಇವೆಲ್ಲವೂ ಅವರನ್ನು ಪಕ್ವವನ್ನಾಗಿಸಿ ಪರಮಹಂಸರ ಭಕ್ತನಾದ.

ಸ್ವಾಮಿ ವಿವೇಕಾನಂದರ ಜೊತೆ ಗಿರೀಶರ ಸಂಬಂಧ ಅತ್ಯಂತ ಸ್ನೇಹಿ ಆಗಿತ್ತು. ಅವರು ಪರಸ್ಪರ ಅಪಾರ ಗೌರವ ಹೊಂದಿದ್ದರು. ಸ್ವಾಮಿ ವಿವೇಕಾನಂದ ಪ್ರೀತಿಯಿಂದ ” ಜಿ.ಸಿ ” ಎಂದು ಕರೆಯುತ್ತಿದ್ದರು . 

1912ರ ಫೆಬ್ರವರಿ 8ರಂದು ರಾಮಕೃಷ್ಣರ ಪ್ರಿಯಭಕ್ತ, ವಿವೇಕಾನಂದರ ಪರಮ ಮಿತ್ರ ಗಿರೀಶ್ ಚಂದ್ರ ಘೋಷ್ ಕೊನೆಯುಸಿರೆಳೆದರು.

   

Leave a Reply