ಗೋಹತ್ಯೆ ಮಾಡುವವರ ಕೈ ಕತ್ತರಿಸಿ

ಚಿಕ್ಕಮಂಗಳೂರು - 0 Comment
Issue Date : 20.05.2014

ಹಸುಗಳನ್ನು ಕೊಲ್ಲುವುದೇ ಕೆಲ ಮುಸ್ಲಿಮರ ಕೆಲಸವಾದರೆ, ಗೋರಕ್ಷಣೆಯೇ ಹಿಂದುಗಳ ಕೆಲಸ ಎಂಬುದು ನೆನಪಿರಲಿ… ಗೋಹತ್ಯೆ ಮಾಡುವವರ ಕೈಕತ್ತರಿಸಿ, ಎಂದು ಭಾರತ ಕ್ರಾಂತಿ ಸೇನಾ ಸಂಘಟನೆಯ ಅಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿ ಕರೆನೀಡಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಎರಡು ದಿನಗಳ ಉಪವಾಸ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಕಬೀರ್ ಶೂಟೌಟ್ ಪ್ರಕರಣದಲ್ಲಿ ನಿಷ್ಠಾವಂತ ಅಧಿಕಾರಿ ನವೀನ್ ನಾಯ್ಕಾರನ್ನು ಬಂಧಿಸಿದ ಕ್ರಮವನ್ನು ವಿರೋಧಿಸಿ ಈ ಸತ್ಯಾಗ್ರಹವನ್ನು ನಡೆಸಲಾಯಿತು. ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಕಬೀರ್‌ನನ್ನು ನಕ್ಸಲ್ ಎಂದು ತಿಳಿದು ಗುಂಡು ಹಾರಿಸಿದ ನವೀನ್ ನಾಯ್ಕಿ ಅವರನ್ನು ಇಂದು ಬಂಧಿಸಲಾಗಿದೆ. ನಕ್ಸಲ್ ಹೌದೋ ಅಲ್ಲವೋ ಬೇರೆ ಮಾತು. ಆದರೆ ಗೋವುಗಳನ್ನು ಅಕ್ರಮವಾಗಿ, ಅಮಾನವೀಯವಾಗಿ ಸಾಗಣೆ ಮಾಡುತ್ತಿದ್ದುದು ಅಕ್ಷಮ್ಯ ಅಪರಾಧವೇ ಅಲ್ಲವೇ? ಅವನ ಮೇಲೆ ಗುಂಡು ಹಾರಿಸಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.

ಬೇಕೆಂದೇ ಕಾಂಗ್ರೆಸ್ ಸರ್ಕಾರ ನವೀನ್ ನಾಯ್ಕೆರನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ಎಂದಿಗೂ ಹಿಂದುಗಳ ವಿರೋಧಿಯೇ ಎಂದು ಅಲ್ಲಿ ನೆರೆದಿದ್ದ ಜನರು ಅಭಿಪ್ರಾಯಪಟ್ಟರು.

ಶಾಸಕರಾಗಲೀ, ಸಾಂಸದರಾಗಲೀ ಯಾವುದೇ ಒಂದು ಸಮುದಾಯದ ಪ್ರತಿನಿಧಿಗಳಲ್ಲ. ಬದಲಾಗಿ ಅವರು ನಿರ್ದಿಷ್ಟ ಕ್ಷೇತ್ರವೊಂದರ ಜನರ ಪ್ರತಿನಿಧಿಗಳು ಎಂಬುದು ನೆನಪಿರಲಿ. ಅವರನ್ನು ಗೆಲ್ಲಿಸಿದವರಲ್ಲಿ ಹಿಂದುಗಳೂ ಸೇರಿದ್ದಾರೆ. ಯಾವುದೋ ಒಂದು ನಿರ್ದಿಷ್ಟ ಸಮುದಾಯ ದಿಂದ ಅವರು ಅಧಿಕಾರಕ್ಕೆ ಬಂದಿಲ್ಲ. ಹೀಗಿದ್ದ ಮೇಲೆ ಎಂದಿಗೂ ಒಂದು ಸಮುದಾಯಕ್ಕೆ ಮಾತ್ರ ನಿಷ್ಠರಾಗಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

   

Leave a Reply