ಹಾರ್ವರ್ಡ್ ಕಾಲೇಜ್ ಡೀನ್ ಆದ ರಾಕೇಶ್ ಖುರಾನ

ಸಾಧನೆ - 0 Comment
Issue Date : 13.02.2014

ಇತ್ತೀಚಿನ ದಿನಗಳಲ್ಲಿ ಭಾರತೀಯ ಮೂಲದ ತಜ್ಞರು, ವೈದ್ಯರಿಗೆ ವಿದೇಶದಲ್ಲಿ ಹೆಚ್ಚು ಮನ್ನಣೆ ಸಿಗುತ್ತಿದೆ.  ಈ ಸಾಲಿಗೆ ಈಗ ಭಾರತೀಯ ಮೂಲದ ಶಿಕ್ಷಣ ತಜ್ಞ  ರಾಕೇಶ್ ಖುರಾನ ಸೇರುತ್ತಾರೆ. ಅವರು ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ಕಾಲೇಜಿನ ಡೀನ್ ಆಗಿ ನೇಮಕ ಗೊಂಡಿದ್ದಾರೆ.

ಖುರಾನ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನ ನಾಯಕತ್ವ ಬೆಳವಣಿಗೆಗೆ ಸಂಬಂಧಿಸಿದ  ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಜೊತೆಗೆ ಹಾರ್ವರ್ಡ್ ಕ್ಯಾಬೋಟ್ ಹೌಸ್ ನಲ್ಲಿ ಕಲೆ ಮತ್ತು ವಿಜ್ಞಾನ ವಿಭಾಗದಲ್ಲಿ  ಸಮಾಜಶಾಸ್ತ್ರದ ಪ್ರೊಫೆಸರ್ ಕೂಡ ಹೌದು. ಪದವಿಪೂರ್ವ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವಲ್ಲಿ ಖುರಾನ ಅವರು ತೋರಿಸಿದ ಬದ್ಧತೆ ಮತ್ತು ಅವರ ಅಪಾರ ಅನುಭವ ಹಿನ್ನಲೆಯಲ್ಲಿ ಉತ್ತಮ ಬೋಧಕ ಹಾಗೂ ವಿದ್ವಾಂಸರು ಎಂದೇ ಖ್ಯಾತರಾಗಿದ್ದಾರೆ. ಖುರಾನ ಅವರು ಜುಲೈನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

   

Leave a Reply