ಹಾಸನದಲ್ಲಿ ಪರಿಸರ ಜಾಗೃತಿ ಯಜ್ಞ

ಹಾಸನ - 0 Comment
Issue Date : 23.06.2014ಹಾಸನ: ಎಂ. ಕೃಷ್ಣಾ ಅಂಧಮಕ್ಕಳ ಶಾಲೆಯಲ್ಲಿ ಜೂ.15ರಂದು ಸ್ಪಂದನ ವೇದಿಕೆ ಮತ್ತು ವೇದ ಭಾರತಿಯ ಸಹಯೋಗದೊಡನೆ ಪರಿಸರ ಜಾಗೃತಿ ಕಾರ್ಯಕ್ರಮದ ನಿಮಿತ್ತ ಪರಿಸರ ಜಾಗೃತಿ ಯಜ್ಞ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವೇದಭಾರತಿಯ ಸದಸ್ಯರುಗಳಿಂದ ಅಗ್ನಿಹೋತ್ರ ನಡೆಯಿತು. ಎಲ್ಲಾ ಅಂಧಮಕ್ಕಳೂ ಯಜ್ಞಕ್ಕೆ ಹವಿಸ್ಸನ್ನು ಅರ್ಪಿಸುವಾಗ ಆನಂದ ಪರವಶರಾದರು. ಉತ್ತಮ ಪರಿಸರಕ್ಕಾಗಿ ಅಗ್ನಿಹೋತ್ರದ ಲಾಭವನ್ನು ವೇದಭಾರತಿಯ ಸಂಯೋಜಕರಾದ ಹರಿಹರಪುರ ಶ್ರೀಧರ್ ಅವರು ತಿಳಿಸುತ್ತಾ, ಅಗ್ನಿಹೋತ್ರದ ಮಂತ್ರಗಳಿಂದ ಅಂತರಂಗ ಶುದ್ಧಿಯಾದರೆ ಅಗ್ನಿಹೋತ್ರದಲ್ಲಿ ಬಳಸುವ ತುಪ್ಪ, ಸಮಿತ್ತು ಮತ್ತು ಗಿಡ ಮೂಲಿಕೆಗಳು ಅಗ್ನಿಯಲ್ಲಿ ದಹನವಾಗಿ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಪರಿಸರ ಶುದ್ಧವಾಗುವುದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಲ್ಲೇಶಗೌಡರು ಭೂತಾಯಿ ಮತ್ತು ಹೆತ್ತತಾಯಿಯ ಮಹತ್ವವನ್ನು ತಿಳಿಸುತ್ತಾ, ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ನಮ್ಮ ಸಂಸ್ಕತಿ ಪರಂಪರೆಯನ್ನು ಮರೆತು ಸಮಾಜವು ಹಾದಿ ತಪ್ಪುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ನಂತರ ಶಾಲಾ ಹೊರ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡಲಾಯ್ತು. ಕಾರ್ಯಕ್ರಮದಲ್ಲಿ ಸ್ಪಂದನ ವೇದಿಕೆಯ ಪ್ರಮುಖರೂ ವೇದಭಾರತಿಯ ಕಾರ್ಯದರ್ಶಿಗಳೂ ಆದ ಶ್ರೀಮತಿ ಕಲಾವತಿ, ಶಾಲೆಯ ಆದಳಿತಾಧಿಕಾರಿಗಳಾದ ಪ್ರೊ.ಜಯರಾಮ್ ಹಾಗೂ ವೇದಭಾರತಿ ಮತ್ತು ಸ್ಪಂದನ ವೇದಿಕೆಯ ಸದಸ್ಯರುಗಳು ಪಾಲ್ಗೊಂಡಿದ್ದರು. ನಿವೃತ್ತ ತಹಸಿಲ್ದಾರ್ ಮತ್ತು ವೇದಭಾರತಿಯ ಉಪಾಧ್ಯಕ್ಷ ಜಗದೀಶ್ ಅವರು ಸ್ವಾಗತಿಸಿ, ಶ್ರೀಮತಿ ಉಮಾ ಜಗದೀಶ್ ವಂದಿಸಿ, ಶ್ರೀಮತಿ ಕಲಾವತಿ ನಿರ್ವಹಿಸಿದರು.

   

Leave a Reply