ಹಾಸನದಲ್ಲಿ ಯೋಧರ ಸ್ಮರಣೆ

ಹಾಸನ - 0 Comment
Issue Date : 05.08.2014

ಹಾಸನ: ಹಾಸನದ ಹೇಮಾವತಿ ಪ್ರತಿಮೆಯ ಮುಂದೆ ಕಾರ್ಗಿಲ್ ವಿಜಯದ 15ನೇ ವರ್ಷಾಚರಣೆ ಮತ್ತು ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಜಿಲ್ಲೆಯ ಯೋಧರ ಸಂಸ್ಮರಣ ಕಾರ್ಯಕ್ರಮವನ್ನು ಸ್ಥಳೀಯ ಯುವ ಬ್ರಿಗೇಡ್ ಹಮ್ಮಿಕೊಂಡಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನದ ವೇದಭಾರತಿಯ ಸಂಯೋಜಕರಾದ ಹರಿಹರಪುರಶ್ರೀಧರ್ ಅವರು ಕಾರ್ಗಿಲ್ ಸಮರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಪಾಕಿಸ್ಥಾನಿ ಸೈನಿಕರು ಉಗ್ರರ ವೇಷದಲ್ಲಿ ಭಾರತದ ಗಡಿಯೊಳಗೆ ನುಸುಳಿದ ಬಗ್ಗೆ ದನಗಾಹಿ ಬಾಲಕರು ಸೈನ್ಯಕ್ಕೆ ಮೊದಲ ಮಾಹಿತಿಯನ್ನು ನೀಡಿ ದೇಶಭಕ್ತರೆನಿಸಿಕೊಂಡರೆಂದು ತಿಳಿಸಿ ಇಂದಿನ ವಿದ್ಯಾವಂತರೆನಿಸಿಕೊಂಡ ಯುವಕರು ಈ ಬಾಲಕರಿಂದ ದೇಶಪ್ರೇಮವನ್ನು ಕಲಿಯಬೇಕೆಂದು ತಿಳಿಸಿದರು. ಇಂದಿಗೂ ಕೂಡ ಪಾಕಿಸ್ಥಾನೀ ಉಗ್ರರು ಭಾರತದಲ್ಲಿದ್ದು ಹೊಂಚುಹಾಕುತ್ತಿದ್ದಾರೆಂದು ತಿಳಿಸಿದ ಅವರು ಭಾರತದ ಪ್ರತಿಯೊಬ್ಬ ನಾಗರೀಕರೂ ದೇಶಪ್ರೇಮವನ್ನು ಬೆಳೆಸಿಕೊಳ್ಳದಿದ್ದರೆ ಭಾರತದಲ್ಲಿ ಮುಂದೆ ಬಲು ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆಂದು ಎಚ್ಚರಿಸಿದರು.

ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದ ಹಾಸನಜಿಲ್ಲೆಯ ಯೋಧರುಗಳಾದ ವೆಂಕಟ್, ಕಾಂತರಾಜು ಯೋಗಾನಂದ್, ಸಾಗರ್ ಮತ್ತು ಕುಮಾರ್ ಕುಟುಂಬದವರನ್ನು ಗೌರವಿಸಲಾಯಿತು.

   

Leave a Reply