ಹಿಮ ಹಾದಿಯಲ್ಲಿ ವಿಶ್ವದಾಖಲೆ

ಸಾಧನೆ - 0 Comment
Issue Date : 12.02.2014

ಭೂಮಿಯ ದಕ್ಷಿಣ ತುತ್ತತುದಿ ಅಂಟಾರ್ಟಿಕಾದ ಅಮುಡ್‍ಸೆನ್ ಸ್ಕಾಟ್ ದಕ್ಷಿಣಧ್ರುವ ಪ್ರದೇಶವು 365 ದಿನವೂ ಮಂಜುಗೆಡ್ಡೆಯಿಂದ ಆವೃತ್ತವಾಗಿರುತ್ತದೆ.  ಇಂತಹ ಪ್ರದೇಶದಲ್ಲಿ ಮರಗಿಡ ಬೆಳೆಯುವುದಿಲ್ಲ.  ಹೀಗಾಗಿ ಹಿಮಜೀವಗಳು ಬಿಟ್ಟರೆ ಮನುಷ್ಯರು ಬದುಕೋದು ಕಷ್ಟ.  ಆದರೆ ಸಾಹಸಿಗಳಿಗೆ ಸ್ಫೂರ್ತಿಯ ತಾಣ.  ಸದಾ ಶೀತಗಾಳಿ ಬೀಸುವುದರಿಂದ ವಿಮಾನ, ಹೆಲಿಕಾಪ್ಟರ್ ಗಳು ಹಾರಾಡುವುದು ಕಷ್ಟ.  ಹೀಗಾಗಿ ಇಲ್ಲಿ ತಲುಪಬೇಕಾದರೆ ಸಾವಿರ ಕಿಲೋಮೀಟರ್ ದೂರದಲ್ಲಿ ವಾಹನದಿಂದ ಇಳಿದು, ಸ್ಕೇಟಿಂಗ್‍ ಮೂಲಕ ಎಚ್ಚರಿಕೆಯಿಂದ ಬರಬೇಕು.  

ಇಲ್ಲಿಗೆ ಟ್ರಕ್ಕಿಂಗ್‍ ಹೊರಡುವ ಮುನ್ನವೇ ಆಕ್ಸಿಜನ್ ಟ್ಯಾಂಕ್ ಜೊತೆಗೆ ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ಹಿಡಿದೇ ಸಾಗಬೇಕಾದ ಕಷ್ಟಗಳ ಅರಿವಿದ್ದರೂ ಬ್ರಿಟನ್‍ನ ಬ್ರಿಟ್‍ ಲೂಯಿಸ್ ಸಾಕಷ್ಟು ತಯಾರಿ ನಡೆಸಿ ಡಿ.2 2013ರಂದು ಪ್ರವಾಸ ಹೊರಟೇಬಿಟ್ಟರು.  ಹೆಜ್ಜೆಹೆಜ್ಜೆಗೂ ಸಂಕಷ್ಟಗಳನ್ನು ಎದುರಾಗುತ್ತಾ, ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಾ ಧ್ಯೆರ್ಯ ತಂದುಕೊಂಡು ಮುನ್ನುಗ್ಗಿದರು.  ಕೊನೆಗೂ 2014ರ ಜನವರಿ 18ರಂದು ದಕ್ಷಿಣಧ್ರುವದ ತುತ್ತತುದಿ ತಲುಪುವ ಮೂಲಕ ಗಿನ್ನೆಸ್ ದಾಖಲೆ ಪಡೆದರು.  

   

Leave a Reply