ಹುಬ್ಬಳ್ಳಿ: ಆರೆಸ್ಸೆಸ್‌ನಿಂದ ಸ್ವಚ್ಛತಾ ಕಾರ್ಯ

ಹುಬ್ಬಳ್ಳಿ - 0 Comment
Issue Date : 22.09.2014


ಹುಬ್ಬಳ್ಳಿ : ಹುಬ್ಬಳ್ಳಿ ನಗರದ ವಿವಿಧ ಉಪನಗರಗಳಲ್ಲಿ ಕಳೆದ ಸೆ.14ರಂದು ಆರ್‌ಎಸ್‌ಎಸ್ ಸ್ವಯಂಸೇವಕರಿಂದ ನಡೆದ ಸೇವಾ ಸಾಂಘಿಕ್‌ನಲ್ಲಿ ಸಂಘಸ್ಥಾನದ ಸುತ್ತಲಿನ ಪ್ರದೇಶಗಳನ್ನು ಸ್ವಚ್ಚಗೊಳಿಸಲಾಯಿತು.

ವಿದ್ಯಾನಗರ ಉಪನಗರ ಸಾಂಘಿಕ್‌ನಲ್ಲಿ ಮಾತನಾಡಿದ ಜಿಲ್ಲಾ ಸೇವಾ ಪ್ರಮುಖ್ ಮುರಲಿ ಕುಲಕರ್ಣಿಯವರು, ‘ನಮ್ಮ ಮನೆಯನ್ನು ಶುಚಿಯಾಗಿರಿಸಿಕೊಳ್ಳುವಂತೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸುವುದೂ ನಾಗರಿಕರಾದ ನಮ್ಮ ಕರ್ತವ್ಯವಾಗಿದೆ. ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ನುಡಿದರು.

ವಿದ್ಯಾನಗರ ಉಪನಗರದ ಸ್ವಯಂಸೇವಕರು ಸಮುದಾಯ ಭವನ ಮತ್ತು ಸಾರ್ವಜನಿಕ ಆಟದ ಮೈದಾನವನ್ನು ಶುಚಿಗೊಳಿಸಿದರು. ಅಕ್ಕಿಹೊಂಡ ಉಪನಗರದ ಸ್ವಯಂಸೇವಕರು ಸಮೀಪದ ಶಾಲಾ ಆವರಣ, ಶಾಲೆಯ ದಾರಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡರು.

   

Leave a Reply