ಹುಬ್ಬಳ್ಳಿಯಲ್ಲಿ ತಿಲಕರ ಪುಣ್ಯಸ್ಮರಣೆ

ಜಿಲ್ಲೆಗಳು - 0 Comment
Issue Date : 06.10.2014

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿ ಜರುಗಿತು. ಬಿಜೆಪಿಯ ಧುರೀಣ, ಉದ್ಯೋಗಪತಿ ಕೆ.ಟಿ.ಪವಾರ್ ಮಾತನಾಡಿ, ರಾಷ್ಟ್ರಕ್ಕೆ ತಿಲಕರ ವಿಚಾರ ಅತ್ಯಂತ ಅನಿವಾರ್ಯವಾಗಿದೆ. ಹಿಂದುತ್ವದ ಜಾಗೃತಿಗಾಗಿ ನಾವೆಲ್ಲ ಅಗ್ರೇಸರರಾಗಿರಬೇಕು ಎಂದು ಕರೆ ನೀಡಿದರು.

ಸಾವರ್ಕರ್ ಸ್ಮಾರಕದ ಮುಖ್ಯಸ್ಥ ಸಂತೋಷ್ ಸರ್ವದೆ ಅವರು ಮಾತನಾಡಿ, ಭಾರತವು ಚೀನಾ ಹಾಗೂ ಪಾಕಿಸ್ಥಾನವನ್ನು ನಂಬಬಾರದು. ಈ ಎರಡು ರಾಷ್ಟ್ರಗಳ ಬಗ್ಗೆ ಜಾಗೃತೆಯಿಂದ ಇರಬೇಕು. ಚೀನಾಕ್ಕೆ ಭಾರತ ತಕ್ಕ ಪಾಠ ಕಲಿಸಬೇಕು ಎಂದರು. ಮುಸ್ಲಿಂ ಭಯೋತ್ಪಾದಕರ ದಮನಕ್ಕೆ ಭಾರತವು ಇಸ್ರೇಲ್ ಮಾದರಿ ಅನುಸರಿಸಬೇಕು ಎಂದೂ ಹೇಳಿದರು.
ಜಗದ್ಗುರು ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸುಧಾಕರ ಆಮಟೆ ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ನಾಗರತ್ನ ಜರತಾರಘರ್ ಸ್ವಾಗತಿಸಿದರು. ಸರೋಜಿನಿ ಚಾವ್ಲಾ ವಂದಿಸಿದರು.

   

Leave a Reply