ಕಲೆಯ ತವರೂರ‌್ಯಾವುದು?

ಸುದ್ದಿಗಳು - 0 Comment
Issue Date : 13.10.2014

ಯಾವುದೇ ಕಲಾಪ್ರಕಾರವಿರಲಿ, ಮನುಕುಲದ ಶ್ರೇಷ್ಠತೆಯನ್ನು ಹೆಚ್ಚಿಸುವಂಥ, ಇತಿಹಾಸದ ವೈಭವವನ್ನು ವ್ಯಕ್ತಪಡಿಸುವಂಥ ಯಾವುದೇ ಅಂಶವೇ ಆದರೂ ಅದರ ಮೂಲ ಯುರೋಪ್ ಖಂಡವೇ ಎಂದು ಬಗೆಯಲಾಗುತ್ತದೆ. ಹಾಗೆಯೇ ಚಿತ್ರಕಲೆಗೂ ಮೂಲ ಅದೇ ಎಂಬ ಮಾತು ಇಷ್ಟು ದಿನ ಕೇಳಿಬರುತ್ತಿತ್ತು. ಪ್ರತಿಯೊಂದರಲ್ಲೂ ತಾವೇ ಮೊದಲಿಗರು ಎಂದು ಬೀಗುತ್ತಿದ್ದ ಯುರೋಪಿಯನ್ನರಿಗೆ ಮುಖಭಂಗವಾಗುವಂತೆ ಸುಮಾರು 40,000 ವರ್ಷಗಳಷ್ಟು ಹಳೆಯ ಪೇಂಟಿಂಗ್ ಒಂದು ದೊರೆತಿದೆ. ಈ ಪೇಂಟಿಂಗ್ ದೊರೆತದ್ದು ಇಂಡೋನೇಶಿಯಾದ ದ್ವೀಪವೊಂದರಲ್ಲಿ.

ಇಲ್ಲಿನ ಗುಹೆಯೊಂದರಲ್ಲಿ ಸಿಕ್ಕ ಈ ಚಿತ್ರದ ಕಾಲವನ್ನು ನಿಖರವಾಗಿ ಹೇಳಲಾಗದಿದ್ದರೂ ಇದಕ್ಕೆ ಈವರೆಗೂ ಸಿಕ್ಕ ಎಲ್ಲ ಚಿತ್ರಗಳಿಗಿಂತ ಹೆಚ್ಚಿನ ಇತಿಹಾಸವಿದೆ ಎಂಬುದು ದೃಢವಾಗಿದೆ. ಇದು ಕಲೆಯ ಇತಿಹಾಸವನ್ನೇ ಮರುಸೃಷ್ಟಿಮಾಡಿದಂತಾಗಿದೆ.ಯುರೋಪಿಯನ್ನರಿಗಿಂತ ಮೊದಲೇ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕಲೆ ವಿಕಾಸವಾಗಿರಬಹುದು. ಹಾಗೆಯೇ ಆ ಕಲೆಯನ್ನು ಸಂಶೋಧನೆಗೊಳಪಡಿಸಿದಾಗ ಅಲ್ಲಿನ ಜನರ ಜೀವನ ಶೈಲಿ ಮತ್ತು ಅವುಗಳ ಕಾಲಗಳ ಚಿತ್ರಣ ಸಿಗಬಹುದು ಎಂಬುದು ಸಂಶೋಧಕರ ಅಂಬೋಣ.

   

Leave a Reply