‘ಕಾರ್ಗಿಲ್ ವಿಜಯ ದಿವಸ್’ ಅಧಿಕೃತಗೊಳಿಸಿ: ತರುಣ್ ವಿಜಯ್

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.08.2014

ಬೆಂಗಳೂರು: ಕಾರ್ಗಿಲ್ ವಿಜಯ ದಿವಸವನ್ನು ರಾಷ್ಟ್ರೀಯ ಯುದ್ಧ ಯೋಧರ ದಿನಾಚರಣೆಯನ್ನಾಗಿ ಘೋಷಿಸುವಂತೆ ರಾಜ್ಯಸಭಾ ಸದಸ್ಯ ತರುಣ್ ವಿಜಯ್ ಆಗ್ರಹಿಸಿದರು.

ಅವರು ಜು. 26ರಂದು ಇಂದಿರಾನಗರದಲ್ಲಿ ‘ಮಂಥನ’ ಆಶ್ರಯದಲ್ಲಿ ನಡೆದ ಬುದ್ಧಿಜೀವಿಗಳ ಸಭೆಯಲ್ಲಿ ಮಾತನಾಡಿದರು. ಈ ಕುರಿತು ತಾನು ರಾಜ್ಯಸಭೆಯಲ್ಲಿ ಮುಂದಿನ ವಾರ ಒಂದು ಪ್ರಸ್ತಾವನೆ ಸಲ್ಲಿಸುವುದಾಗಿಯೂ ಹೇಳಿದರು.

ಇಡೀ ಜಗತ್ತಿನಲ್ಲಿ ಹುತಾತ್ಮರನ್ನು ನಿರ್ಲಕ್ಷಿಸುವ ದೇಶವೊಂದಿದ್ದರೆ ಅದು ಭಾರತ ಮಾತ್ರ. ಇದಕ್ಕೆ ಕಾರಣ ನಮ್ಮ ಜಾತ್ಯತೀತ ರಾಜಕಾರಣಿಗಳು. ಯುದ್ಧದಲ್ಲಿ ಬಲಿದಾನ ಮಾಡಿದ ವೀರ ಯೋಧರಿಗೆ ಬೇಕೆಂದೇ ಅಗೌರವ ತೋರಲಾಗುತ್ತಿದೆ. ಆದರೆ ಭಾರತೀಯ ಸೈನ್ಯವನ್ನು ಟೀಕಿಸುವ ಅರುಂಧತಿ ರಾಯ್‌ಯಂತಹ ಬುದ್ಧಿಜೀವಿಗಳಿಗೆ ಮಹತ್ವ ನೀಡಲಾಗುತ್ತಿದೆ ಎಂದು ವಿಷಾದಿಸಿದರು.
ಭಾರತೀಯ ಸೈನಿಕರು ಅತ್ಯಂತ ಪರಾಕ್ರಮದಿಂದ 4 ಯುದ್ಧಗಳಲ್ಲಿ ಹೋರಾಡಿದ್ದಾರೆ. ಆದರೆ ದೆಹಲಿಯಲ್ಲಿರುವುದು ಸರ್ ಎಡ್ವಿನ್ ಲುಥಿಯನ್ಸ್ ಅವರ ಸ್ಮಾರಕ ಮಾತ್ರ. ಆತನೊಬ್ಬ ಬ್ರಿಟಿಷ್ ಯೋಧ. ನಮ್ಮ ಯೋಧರಿಗೆ ಒಂದೇ ಒಂದು ಸ್ಮಾರಕ ನಿರ್ಮಿಸದಿರುವುದು ಖಂಡನೀಯ ಎಂದರು.

ಶಾಲಾ-ಕಾಲೇಜು ಪಠ್ಯ ಪುಸ್ತಕಗಳಲ್ಲಿ ಭಾರತೀಯ ಯೋಧರ ಸಾಹಸಗಾಥೆಗಳ ಕುರಿತು ಅಧ್ಯಾಯಗಳನ್ನು ಪರಿಚಯಿಸುವಂತೆ ತಾನು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆಯುವುದಾಗಿಯೂ ತರುಣ್ ವಿಜಯ್ ತಿಳಿಸಿದರು.

   

Leave a Reply