ಕಿಡಿಗೇಡಿಗಳ ಕೃತ್ಯಕ್ಕೆ ವಿಹೆಚ್‍ಪಿ ಖಂಡನೆ

ಚಿಕ್ಕಮಂಗಳೂರು - 0 Comment
Issue Date : 03.01.2014

ಡಿ.28ರಂದು ಚಿಕ್ಕಮಗಳೂರಿನ ಎಂ.ಜಿ.ರಸ್ತೆಯ ಕ್ರಾಸ್‍ನಲ್ಲಿರುವ ದರ್ಗಾದ ಪವಿತ್ರತೆ ಹಾಳು ಮಾಡಿರುವ ಕಿಡಿಗೇಡಿಗಳ ಕೃತ್ಯವನ್ನು ವಿಹೆಚ್‍ಪಿ ಖಂಡಿಸಿದೆ.  ಅದಲ್ಲದೆ ಅಂದು ಕೆಲ ಮುಸ್ಲಿಂ ಯುವಕರು ಮಚ್ಚು ಲಾಂಗು ಪ್ರದರ್ಶನ ಮಾಡಿ ತಾಲಿಬಾನಿಗಳ ರೀತಿಯಲ್ಲಿ ವರ್ತಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ವಿಹೆಚ್‍ಪಿ ಪ್ರಶ್ನಿಸಿದೆ.  

ಜಿಲ್ಲಾ ಖಜಾಂಚಿ ಯೋಗೀಶ್‍ ರಾಜ್ ಅರಸ್ ಚಿಕ್ಕಮಗಳೂರು ನಗರದ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ನಿಖರವಾದ ಯುವಕರ ಗುರುತು ಪತ್ತೆಹಚ್ಚಿ ಈ ಗೂಂಡಾ ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ಸಾಂತ್ವನವನ್ನು ಸಹ ಹೇಳದೇ ಇರುವುದು ನಾಚಿಕೆಗೇಡಿನ ಸಂಗತಿ.  ಇವರು ಕೇವಲ ಮುಸ್ಲಿಮರ ಮತಗಳನ್ನು ಮಾತ್ರ ಪಡೆದಿದ್ದಾರೆಯೇ? ಹಿಂದುಗಳು ಮತ ನೀಡಿಲ್ಲವೇ ಎಂಬ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.

ಗಲಭೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಪೇದೆ ಸೇರಿದಂತೆ ಅನೇಕರು ಇದರಲ್ಲಿ ಗಾಯಗೊಂಡಿದ್ದು ಮುಸ್ಲಿಂ ಯುವಕರ ಗುಂಪು ನಡೆಸಿರುವ ಈ ಹೇಯ ಕೃತ್ಯ ಖಂಡನೀಯ.  ಇಂಥಹವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

   

Leave a Reply