ಕೆಎಲ್‍ಇಯಲ್ಲಿ ಕನ್ನಡ ಧ್ವನಿ

ಹುಬ್ಬಳ್ಳಿ - 0 Comment
Issue Date : 10.02.2014

ಹುಬ್ಭಳ್ಳಿ ಸುತ್ತಲಿನ 11 ಕಿ.ಮೀ. ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 21ರಂದು ಲೋಕಾರ್ಪಾಣೆಗೊಂಡ ನೂತನ ಎಫ್‍ಎಂ ಚಾನೆಲ್‍ ‘ಬಿವಿಬಿ ಸಮೂದಾಯ ಬಾನುಲಿ ಕೇಂದ್ರ’ದ ಮೂಲಕ ಹುಬ್ಬಳ್ಳಿ ಜನತೆ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ತಮ್ಮ ರೇಡಿಯೋಗಳಿಂದ ಆಸ್ವಾದಿಸುತ್ತಿದ್ದಾರೆ.    

ಈ ಸಮುದಾಯ ಬಾನುಲಿ ಕೇಂದ್ರ ತಲೆ ಎತ್ತಿರುವುದು ಕೆಎಲ್‍ಇ ಸಂಸ್ಥೆಯ ಬಿ.ವಿ.ಭೂಮರೆಡ್ಡಿ ಎಂಜಿನಿಯರಿಂಗ್‍ ಮತ್ತು ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ಾವರಣದಲ್ಲಿ.  ಮನೋರಂಜನೆ ಶಿಕ್ಷಣ,ಆರೋಗ್ಯ, ಜಾನಪದ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಈ 90.4 ಫ್ರಿಕ್ವೆನ್ಸಿ ಎಫ್ಎಂ ಚಾನೆಲ್‍ನಲ್ಲಿ ಬಿತ್ತರಗೊಳ್ಳುತ್ತಿವೆ. ಇಲ್ಲಿ ಎಫ್ಎಂ ಬಾನುಲಿ ಕೇಂದ್ರಕ್ಕಾಗಿ 50 ಲಕ್ಷ ರೂ. ಖರ್ಚು ಮಾಡಲಾಗಿದೆ. ಉತ್ತರ ಕರ್ನಾಟಕ ಭಾಷೆ, ಸಂಸ್ಕೃತಿ ಪರಿಚಯವಿರುವ ರೇಡಿಯೋ ಜಾಕಿಗಳನ್ನು ಹುಡುಕಿ ಅವರಿಗೆ ತರಬೇತಿ ನೀಡಲಾಗಿದೆ. 

ಕೆಎಲ್‌ಇ ಸಂಸ್ಥೆ ಶೀಘ್ರದಲ್ಲೇ ಇನ್ನೆರಡು ಎಫ್ಎಂ ಕೇಂದ್ರಗಳನ್ನು ಆರಂಭಿಸಲಿದೆ. ಬೆಳಗಾವಿಯಲ್ಲಿ ಆರೋಗ್ಯ ಕುರಿತಾದ ವಿಷಯಗಳ ಪ್ರಸಾರಕ್ಕೆ ಎಫ್.ಎಂ. ಕೇಂದ್ರ ಆರಂಭಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜನರು ಆರೋಗ್ಯ ಸಂಬಂಧಿತ ಮಾಹಿತಿ ಪಡೆಯಬಹುದಾಗಿದೆ. ಅಥಣಿಯಲ್ಲಿ ಕೃಷಿಗೆ ಸಂಬಂಧಿತ ಸಂಗತಿಗಳ ಎಫ್ಎಂ ಬಾನುಲಿ ಕೇಂದ್ರ ಕಾರ್ಯಾರಂಭ ಮಾಡಲಿದೆ.

ಕೆಎಲ್ಇ ಧ್ವನಿಯ ಪಟ್ಟಿ

* ಬೆಳಗ್ಗೆ 6.30ರಿಂದ 7: ನಾಡಗೀತೆ, ಸ್ಟೇಶನ್ ಐಡಿ, ಕಾರ್ಯಾಕ್ರಮ ವಿವರಣೆ, ಭಕ್ತಿಗೀತೆ.

* ಬೆಳಗ್ಗೆ 7ರಿಂದ 9: ನಾ ಹುಬ್ಬಳ್ಳಿಯವಾ

* ಬೆಳಗ್ಗೆ 9ರಿಂದ 11: ನಮ್ಮ ಕಲೆ ನಮ್ಮ ಬದುಕು

* ಮಧ್ಯಾಹ್ನ 2 ರಂದ 4: ಚಾವಡಿ ಚಾಟ್‍

* ಸಂಜೆ 4ರಿಂದ 5.55: ಯೂಥ್‍ಗಿರಿ

* ಸಂಜೆ 5.55ರಿಂದ 6: ಕಾರ್ಯಕ್ರಮ ವಿವರಣೆ

   

Leave a Reply