ಕುಮಟಾದಲ್ಲಿ ಅರ್ಥಪೂರ್ಣ ಯುಗಾದಿ ಉತ್ಸವ

ಉತ್ತರ ಕನ್ನಡ - 0 Comment
Issue Date : 21.04.2014

ಕುಮಟಾ: ಇಲ್ಲಿ ಯುಗಾದಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಏರ್ಪಡಿಸಲಾದ ಮಾತಾ-ಪಿತೃ ಪೂಜನ ಕಾರ್ಯಕ್ರಮವು ವೈಶಿಷ್ಟ್ಯಪೂರ್ಣವಾಗಿತ್ತು. ಮಕ್ಕಳು ತಮ್ಮ ತಮ್ಮ ಮಾತಾ ಪಿತೃಗಳನ್ನು ಪೂಜಿಸಿದ್ದು ಅರ್ಥಪೂರ್ಣವಾಗಿ ನಮ್ಮ ಸಂಸ್ಕೃತಿಯನ್ನು ಬಿಂಬಿಸಿತು.
ಭಾರತವು ಅನೇಕ ವರ್ಷ ಪಾಶ್ಚಿಮಾತ್ಯರ ಗುಲಾಮಗಿರಿಯಲ್ಲಿದ್ದರೂ ನಮ್ಮ ಸಂಸ್ಕೃತಿಯನ್ನು ಕಳೆದುಕೊಂಡಿರಲಿಲ್ಲ. ಭಾರತಕ್ಕೆ ಯಾವಾಗ ಸ್ವರಾಜ್ಯ ದೊರಕಿತೋ ಆಗಿನಿಂದ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಜನರು ಭ್ರಮೆಗೆ ಒಳಗಾಗಿದ್ದು, ಈ ಭ್ರಮೆಯಿಂದ ಹೊರಬಂದು ಭಾರತೀಯ ಸಂಸ್ಕೃತಿಯನ್ನು ಉಳಿಸಿಬೆಳೆಸುವ ಕಾರ್ಯವಾಗಬೇಕು ಎಂದು ಕುಟುಂಬ ಪ್ರಬೋಧನದ ಪ್ರಮುಖರಾದ ಸು. ರಾಮಣ್ಣ ಹೇಳಿದರು.
ಅವರು ಮಣಕಿ ಮೈದಾನದಲ್ಲಿ ಏರ್ಪಡಿಸಲಾದ ಯುಗಾದಿ ಉತ್ಸವ ಸಮಾರಂಭದ ವಕ್ತಾರರಾಗಿ ಮಾತನಾಡಿದರು.
ಕನಿಷ್ಠ ಒಬ್ಬ ಶಿಕ್ಷಕನಾಗಲು ಅದೆಷ್ಟು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅಂದರೆ ಆತನಿಗೆ ಆ ಅರ್ಹತೆಯಿರಬೇಕಾಗುತ್ತದೆ. ಆದರೆ ಇಂದು ದೇಶವನ್ನು ಮುನ್ನಡೆಸುವ ರಾಜಕಾರಣಿಗಳಿಗೆ ಯಾವ ಕನಿಷ್ಠ ಅರ್ಹತೆಗಳೂ ಇಲ್ಲವಾಗಿದೆ. ಶರೀರ ರಾಜಕೀಯ ಮತ್ತು ಆತ್ಮ ರಾಷ್ಟ್ರೀಯತೆಯಾಗಿದೆ. ಆದ್ದರಿಂದ ಆತ್ಮವನ್ನು ಬಲಪಡಿಸಿಕೊಳ್ಳಬೇಕು. ಇದರಿಂದಾಗಿ ರಾಷ್ಟ್ರೀಯತೆಯನ್ನು ಬಲಪಡಿಸಿದಂತಾಗುತ್ತದೆ ಎಂದರು.
ಕಟಪಾಡಿಯ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಚಿಂತೆಯ ಮೂಲಕ ಹೊಸವರ್ಷ ಆಚರಿಸುವ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಟ್ಟು ಸತತ ಚಿಂತನೆಯ ಮೂಲಕ ಪ್ರಾರಂಭವಾಗುವ ಯುಗಾದಿಯನ್ನು ಹೊಸವರ್ಷವಾಗಿ ಆಚರಿಸಿ. ಈ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಇದನ್ನು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಡಾ. ಸುರೇಶ ಹೆಗಡೆ ಶಂಖನಾದ ಮೊಳಗಿಸಿದರು. ನಾಗಧರ್ಮೇಂದ್ರ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ. ಕುಮಾರಿ ಅಶ್ವಿನಿ ಎನ್. ಪ್ರಾರ್ಥಿಸಿದರು. ವಿಶ್ವೇಶ್ವರ ಭಟ್ಟ ಪಂಚಾಂಗ ಶ್ರವಣ ಮಾಡಿಸಿದರು. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಎಸ್.ಜಿ.ನಾಯ್ಕ ಸ್ವಾಗತಿಸಿದರು. ಸಮಿತಿ ಸಂಚಾಲಕ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿದಾನಂದ ಭಂಡಾರಿ ಹಾಗೂ ಅರುಣ ಮಣಕೀಕರ ನಿರೂಪಿಸಿದರು. ಸಮಿತಿ ಕಾರ್ಯದರ್ಶಿ ಬಿ.ಎನ್.ಕೆ. ನಾಗರಾಜ ವಂದಿಸಿದರು. ಬೇವು ಬೆಲ್ಲ ವಿತರಿಸಲಾಯಿತು.
ಪ್ರಾರಂಭದಲ್ಲಿ ನಡೆದ ಶೋಭಾಯಾತ್ರೆಯು ಜನರನ್ನು ಆಕರ್ಷಿಸಿತು.

   

Leave a Reply