ಮಣಿಪಾಲದಲ್ಲಿ ಕಲಿತ ಸತ್ಯ ಮೈಕ್ರೊಸಾಫ್ಟ್ ಸಿಇಓ

ಭಾರತ ; ಸಾಧನೆ - 0 Comment
Issue Date : 05.02.2014

ಸತ್ಯ ನಾದೆಲ್ಲ

ಕರ್ನಾಟಕದ ಮಣಿಪಾಲದಲ್ಲಿ ವ್ಯಾಸಂಗ ಮಾಡಿದ ಹೈದರಾಬಾದ್ ಸಂಜಾತ ಸತ್ಯ ನಾದೆಲ್ಲ ಅವರು ಬಿಲ್ ಗೇಟ್ಸ್ ಸಂಸ್ಥಾಪಿಸಿದ ಮೈಕ್ರೊಸಾಫ್ಟ್ ಕಂಪೆನಿಯ ನೂತನ ಸಿಇಒ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ಪ್ರತಿಷ್ಠಿತ ಹುದ್ದೆಗೆ ಭಾರತೀಯರೊಬ್ಬರು ನೇಮಕಗೊಳ್ಳುತ್ತಿರುವುದು  ಸಂಭ್ರಮದ ಸಂಗತಿ.

38 ವರ್ಷದ ಇತಿಹಾಸ ಹೊಂದಿರುವ ಕಂಪೆನಿಗೆ ನಾದೆಲ್ಲ 3ನೇ ಸಿಇಒ ಆಗಿದ್ದು, 22 ವರ್ಷದಿಂದ ಮೈಕ್ರೊಸಾಫ್ಟ್ ನ ವಿವಿಧ ವ್ಯವಹಾರಗಳಲ್ಲಿ ಕಾರ್ಯಕಾರಿ ಹುದ್ದೆ  ನಿರ್ವಹಿಸಿದ್ದಾರೆ. ಇದೇ ವೇಳೆ ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದು ತಂತ್ರಜ್ಞಾನ ಸಲಹೆಗಾರರಾಗಿ ಹೊಸಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. 

   

Leave a Reply