ಮತಾಂತರವನ್ನು ನಿಲ್ಲಿಸಿ: ಪೋಪ್ ಕರೆ

ಸುದ್ದಿಗಳು - 0 Comment
Issue Date : 11.08.2014

ಅರ್ಜೈಂಟೈನಾ: ಕ್ರೈಸ್ತ ಧರ್ಮಕ್ಕೆ ಅನ್ಯಧರ್ಮೀಯರನ್ನು ಮತಾಂತರಿಸುವುದನ್ನು ನಿಲ್ಲಿಸಿ. ಹೀಗೆಂದು ಕರೆಕೊಟ್ಟವರು ಹಿಂದೂ ನಾಯಕರಲ್ಲ. ಆದರೆ ಸ್ವತಃ ಕ್ರೈಸ್ತ ಸಮುದಾಯದ ಪ್ರಮುಖ ಪೋಪ್ ಆಗಿರುವ ಫ್ರಾನ್ಸಿಸ್ ಅವರು!
ಇಲ್ಲಿನ ‘ವಿವಾ’ ಎಂಬ ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪೋಪ್ ಫ್ರಾನ್ಸಿನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಸಂದರ್ಶನದಲ್ಲಿ ಪೋಪ್ ಅವರು ಇನ್ನೂ ಹಲವು ಸಂಗತಿಗಳತ್ತ ಗಮನ ಸೆಳೆದಿದ್ದಾರೆ: ‘ಊಟಕ್ಕೆ ಕುಳಿತಾಗ ನಿಮ್ಮ ಮನೆಯ ಟಿವಿಯನ್ನು ಸ್ವಿಚ್ ಆಫ್ ಮಾಡಿ. ಟಿವಿ ತಾಜಾ ಮಾಹಿತಿಗಳನ್ನು ಒದಗಿಸುವ ಉಪಯುಕ್ತ ಸಾಧನವಾಗಿರಬಹುದು. ಆದರೆ ಊಟದ ಸಮಯದಲ್ಲಿ ಅದು ನಿರುಪಯುಕ್ತ. ಬೇರೆಯವರನ್ನು ನಿಕಟವಾಗಿಸಿಕೊಳ್ಳಲು ಅವರೊಂದಿಗೆ ಸೌಹಾರ್ದ ಮಾತುಕತೆ ಪರಿಣಾಮಕಾರಿ.’
ಇಂತಹ ಒಟ್ಟು 10 ಸಂದೇಶಗಳನ್ನು ಅವರು ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ. ಪರಿಸರವನ್ನು ಸಂರಕ್ಷಿಸಿ, ನಕಾರಾತ್ಮಕ ವಿಷಯಗಳಿಗೆ ವಿರಾಮ ಹೇಳಿ. ಇತರರ ನಂಬಿಕೆಗಳನ್ನು ಗೌರವಿಸಿ. ಶಾಂತಿಗಾಗಿ ಕೆಲಸ ನಿರ್ವಹಿಸಿ ಇತ್ಯಾದಿ
ಪೋಪ್ ಅವರೇನೋ ತಮ್ಮ ಅನುಯಾಯಿಗಳಿಗೆ ಇಂತಹ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಆದರೆ ಅವರ ಅನುಯಾಯಿಗಳು ಇದನ್ನೆಲ್ಲ ಅನುಸರಿಸುತ್ತಾರೆ ಎಂಬುದಕ್ಕೆ ಗ್ಯಾರಂಟಿ ಏನಿಲ್ಲ. ಮತಾಂತರಕ್ಕೆ ತಡೆ ಹಾಕಿ ಎಂದು ಪೋಪ್ ಹೇಳಿರುವುದನ್ನು ಕ್ರೈಸ್ತ ಮತ ಪ್ರಚಾರಕರು ಕೇಳಿಸಿಕೊಳ್ಳಬೇಕಾಗಿದೆ.

   

Leave a Reply