ಮಾತೃಶಕ್ತಿ ಸಂಘಟಿತವಾಗಬೇಕು

ದಕ್ಷಿಣ ಕನ್ನಡ - 0 Comment
Issue Date : 02.01.2013

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಅವರು ಕಲ್ಲಡ್ಕದಲ್ಲಿ ವಿವೇಕಾನಂದ 150ನೇ ಜಯಂತ್ಯುತ್ಸವದ ಮಾತೃಶಕ್ತಿ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ವಿವಿಧ ಆಕ್ರಮಣವನ್ನು ಎದುರಿಸಲು ಮಹಿಳಾಶಕ್ತಿ ಜಾಗೃತವಾಗಬೇಕು, ಸಂದರ್ಭ ಬಂದಾಗ ಎದ್ದು ನಿಂತು ಹೋರಾಡುವ ಶಕ್ತಿ ಮಹಿಳೆಯರಲ್ಲಿದ್ದು ದುರ್ಗೆಯರಾಗಬೇಕು ಎಂದು ತಿಳಿಸಿದರು. 

ಹಿಂದು ಎಂದರೆ ಕೋಮುವಾದಿ ಅಲ್ಲ.  ಜಗತ್ತಿಗೆ ಶಾಂತಿಯನ್ನು ಕೊಡುವ ಧರ್ಮ ಹಿಂದೂಗಳು ಜಗತ್ತಿನ ಜನರೆಲ್ಲರೂ ಸುಖಿಗಳಾಗಬೇಕೆಂದು ಬಯಸುತ್ತದೆ.  ಮಾತೆಯಲ್ಲಿರುವ ದೌರ್ಬಲ್ಯಗಳನ್ನು ದೂರಗೊಳಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಜವಾಬ್ದಾರಿಯನ್ನು ಮನೆಯಲ್ಲಿ ನಿರ್ವಹಿಸಬೇಕು.  ರಾಮಾಯಣ, ಮಹಾಭಾರತಗಳು ಆದರ್ಶವಾಗಿವೆ, ಭಗವದ್ಗೀತೆ ವೈಜ್ಞಾನಿಕವಾಗಿದೆ.  ನಮ್ಮ ಕುಟುಂಬ ಪದ್ಧತಿ ಬಲಿಷ್ಠವಾಗಿ ಅನ್ಯರ ಆಕ್ರಮಣ ತಡೆಯುವಂತರಾಗಬೇಕು, ದುರ್ಬಲ ಸರ್ಕಾರವನ್ನು ಕಿತ್ತೊಗೆಯಲು ಮಾತೃಶಕ್ತಿ ಸಂಘಟಿತವಾಗಬೇಕಾಗಿದೆ ಎಂದು ನುಡಿದರು. 

ಮಂಗಳೂರು ವಿಭಾಗದ ಸಹವಿಭಾಗ ಪ್ರಚಾರಕ ಪ್ರದೀಪ್ ಸಮಾರೋಪ ಭಾಷಣ ಮಾಡಿದರು.  ಮಾತೆಯರು ಸ್ವಾಮಿ ವಿವೇಕಾನಂದರಿಗೆ ತಾಯಿ ಭುವನೇಶ್ವರಿದೇವಿ ಜೀವನದ ಗುರಿಯನ್ನು ತಿಳಿಸಿದಂತೆ ನಮ್ಮ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು.  ಯುವಕರಿಂದ ಭವ್ಯಭಾರತ ನಿರ್ಮಾಣವಾಗಬೇಕು.  ಮಾತೃಶಕ್ತಿಯಿಂದ ಹಿಂದೂಧರ್ಮದ ರಕ್ಷಣೆಯಾಗಬೇಕು ಎಂದು ಹೇಳಿದರು.

   

Leave a Reply