ಮೊಳಕಾಲ್ಮೂರು: ಸಂಘ ಕಾರ್ಯಾಲಯ ಉದ್ಘಾಟನೆ

ಚಿತ್ರದುರ್ಗ - 0 Comment
Issue Date : 02.12.2013

ಮೊಳಕಾಲ್ಮೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಕಾರ್ಯಾಲಯವನ್ನು ಧರ್ಮ ಜಾಗರಣದ ಪ್ರಾಂತ ಸಂಯೋಜಕ ಮುನಿಯಪ್ಪ ನ.22ರಂದು ಉದ್ಘಾಟಿಸಿದರು. ‘ಶ್ರೀರಾಮ ನಿಲಯ’ ಹೆಸರಿನ ಈ ನೂತನ ಕಾರ್ಯಾಲಯದ ಉದ್ಘಾಟನೆಯಂದು ಧಾರ್ಮಿಕ ವಿಧಿ, ಪೂಜೆ ಇತ್ಯಾದಿಗಳು ನೆರವೇರಿದವು.
ಶಿಕ್ಷಣ ತಜ್ಞ , ವನಮಿತ್ರ ಪ್ರಶಸ್ತಿ ಪುರಸ್ಕೃತ ಕ.ತಿ.ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಮಂಜುನಾಥ್ ಪಿ.ಎಂ.ಸ್ವಾಗತಿಸಿದರು. ಡಿ.ಎಂ.ಈಶ್ವರಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಸ್ವಯಂಸೇವಕರಾದ ಪಿ.ಎಂ.ಚಂದ್ರಶೇಖರ, ಪಾರ್ಥಸಾರಥಿ, ಕೀರ್ತಿ ಕುಮಾರ್, ಆರ್.ಜಿ.ಗಂಗಾಧರಪ್ಪ, ಡಿ.ಎಸ್.ಬಸಪ್ಪ, ಶಾಂತಾರಾಂ ಬಸಪತ್ ಮತ್ತಿತರ ಹಲವು ಗಣ್ಯರು ಪಾಲ್ಗೊಂಡಿದ್ದರು.

   

Leave a Reply