ಮುಷ್ಟಿ ಅಕ್ಕಿ ಯೋಜನೆಯ ವಾರ್ಷಿಕೋತ್ಸವ

ಶಿವಮೊಗ್ಗ - 0 Comment
Issue Date : 05.08.2014

ಶಿವಮೊಗ್ಗ: ಇಲ್ಲಿನ ಮಾತೆಯರು ನಡೆಸುತ್ತಿರುವ ಅನ್ನಪೂರ್ಣೇಶ್ವರಿ ಮುಷ್ಟಿಅಕ್ಕಿ ಯೋಜನೆಯ 6ನೇ ವಾರ್ಷಿಕೋತ್ಸವ ಜು. 20ರಂದು ಜರುಗಿತು. ವನವಾಸಿ ಕಲ್ಯಾಣ ಕೇಂದ್ರದ ಸಚ್ಚಿದಾನಂದ ಹೆಗಡೆ, ವೆಂಕಟೇಶ್ ಸಾಗರ್ ಹಾಗೂ ವೇದಾವತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮ ಭಟ್ ದಂಪತಿಗಳು ಉಪಸ್ಥಿತರಿದ್ದರು.
ಶ್ರೀಮತಿ ರುಕ್ಮಿಣಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚ್ಚಿದಾನಂದ ಹೆಗಡೆಯವರು ವನವಾಸಿ ಜನರು ಹಿಂದಿನಿಂದಲೂ ದೇಶದ ಹಿತಕ್ಕಾಗಿ ಹೋರಾಟ ನಡೆಸಿದ ನಿದರ್ಶನಗಳನ್ನು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಮಾ ಮೂರ್ತಿ ಮುಷ್ಟಿಅಕ್ಕಿ ಯೋಜನೆ ನಡೆದ ಬಂದ ದಾರಿಯನ್ನು ವಿವರಿಸಿ, ಮೊದಲು 2009ರಲ್ಲಿ ತಿಂಗಳಿಗೆ 40 ಕೆ.ಜಿ. ಅಕ್ಕಿಯನ್ನು ವನವಾಸಿ ಹಾಸ್ಟೆಲ್‌ಗೆ ಕಳುಹಿಸುತ್ತಿದ್ದು , ಇದೀಗ ತಿಂಗಳಿಗೆ 4 ಕ್ವಿಂಟಾಲ್ ಅಕ್ಕಿಯನ್ನು ಕಳುಹಿಸುತ್ತಿದ್ದೇವೆ. ಎರಡು ಹಾಸ್ಟೆಲ್‌ಗಳಿಗೆ ಶಿವಮೊಗ್ಗದ ಮಾತೆಯರು ಸಂಗ್ರಹಿಸಿದ ಅಕ್ಕಿಯನ್ನೇ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲ 5 ವನವಾಸಿ ಹಾಸ್ಟೆಲ್‌ಗಳಿಗೂ ನಮ್ಮಿಂದಲೇ ಅಕ್ಕಿ ಪೂರೈಕೆ ಆಗಬೇಕೆಂಬುದು ನಮ್ಮ ಅಭಿಲಾಷೆ ಎಂದರು.
ಸಮಾರಂಭದ ಅಂಗವಾಗಿ ಚಿಪಗೇರಿ ಹಾಸ್ಟೆಲ್‌ನಲ್ಲಿರುವ 35 ಮಕ್ಕಳಿಗೆ 35 ರಗ್‌ಗಳನ್ನು ಕಳುಹಿಸಲಾಯಿತು. ಇದುವರೆಗೆ ಮುಷ್ಟಿ ಅಕ್ಕಿ ಯೋಜನೆ ವತಿಯಿಂದ ಒಟ್ಟು 194 ಕ್ವಿಂಟಾಲ್ ಅಕ್ಕಿ ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ.

   

Leave a Reply