ಮೈಸೂರು: ಸಮಿತಿಯ ಗುರುಪೂಜಾ ಉತ್ಸವ

ಮೈಸೂರು - 0 Comment
Issue Date : 212.07.2014

ಮೈಸೂರು: ಇಲ್ಲಿನ ಶ್ರೀ ರಮಣಮಹರ್ಷಿ ಜ್ಞಾನ ಕೇಂದ್ರದಲ್ಲಿ ಜು. 12ರಂದು ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುಪೂಜೆಯನ್ನು ನೆರವೇರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಶ್ರೀಮತಿ ಅರ್ಪಿತಾ ಪ್ರತಾಪ್ ಸಿಂಹ ಅವರು ಮಾತನಾಡುತ್ತಾ ಗುರುಪೂರ್ಣಿಮಾ ಉತ್ಸವವು ಭಾರತೀಯ ಸಂಸ್ಕೃತಿಯಲ್ಲಿ ಅತಿ ಮುಖ್ಯವಾದದ್ದು, ಗವಾನ್ ವೇದವ್ಯಾಸರ ಜನ್ಮದಿನ. ವ್ಯಾಸರು ವೇದಗಳನ್ನು ಸರಳವಾಗಿ ವಿಂಗಡಿಸಿ ಅದರ ಸಾರವನ್ನು ನೀಡಿ ಪರೋಪಕಾರವೇ ಧರ್ಮ, ಪರಪೀಡನೆಯೇ ಮಹಾಪಾಪ ಎಂದು ಸಾರಿದರು, ಇದರ ಮಹತ್ವವನ್ನು ಎಲ್ಲರೂ ಅರಿಯುವ ಅಗತ್ಯವಿದೆ. ಜನಹಿತ ಕಾರ್ಯವನ್ನು ಮಾಡುವ ಸಂಕಲ್ಪದಿಂದ ಎಲ್ಲರೂ ಪ್ರಯತ್ನಿಸಿದಲ್ಲಿ ದೇಶದ ಹಿತವನ್ನು ಕಾಯುವ ಕಾಯಕದಲ್ಲಿ ನೇತಾರರು ಶ್ರಮಿಸಿ ದೇಶಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು ಎಂದರು.

ಸಮಿತಿಯ ಪ್ರಮುಖ ಸಂಚಾಲಿಕಾ ಶ್ರೀಮತಿ ಶಾಂತಕುಮಾರಿಯವರು ಗುರುವಂದನೆಯು ನಮ್ಮ ಋಷಿ ಮುನಿಗಳ ಪರಂಪರೆಯ ದ್ಯೋತಕ, ಅರ್ಜುನನಿಗೆ ಶ್ರೀಕೃಷ್ಣ ಗುರುವಾಗಿ ಬೋಧಿಸಿದಂತೆ, ಏಕಲವ್ಯನು ದ್ರೋಣರನ್ನು ಗುರುವೆಂದು ನಂಬೆ ಬಿಲ್ವಿದ್ಯೆ ಕಲಿತು ಅವರಿಗೆ ಗೌರವ ಸೂಚಿಸಿದನು. ಅಂತೆಯೇ ಭೀಷ್ಮರು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸಿದರು, ಅಂದಿನ ದೊರೆಗಳಾಗಿದ್ದ ಕೃಷ್ಣದೇವರಾಯನು ತನ್ನ ಗುರುವಿನ ವಾಕ್ಯವನ್ನು ಪರಿಪಾಲಿಸಿ ಜನಹಿತ ಕಾರ್ಯಗಳನ್ನು ಮಾಡಿದನು, ನಮಗೆ ಗುರುಪ್ರಾಯವಾಗಿರುವ ಭಗವಾಧ್ವಜವು ತ್ಯಾಗ ಮತ್ತು ಶಕ್ತಿಯ ಸಂಕೇತ, ಸದಾ ಬದುಕಲ್ಲಿ ನಾವು ಊರ್ಧ್ವಮುಖರಾಗಿದ್ದು ಅನ್ಯರ ಕಷ್ಟಗಳಿಗೆ ಸ್ಪಂದಿಸಿ ಜೀವನವನ್ನು ಸಾರ್ಥಕಗೊಳಿಸಬೇಕು ಎನ್ನುವ ಸಂದೇಶವನ್ನು ಭಗವಾಧ್ವಜವು ಸಾರುತ್ತದೆ ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಕಾರ್ಯವಾಹಿಕಾ ಶ್ರೀಮತಿ ಪೂರ್ಣಿಮಾ ರವಿಶಂಕರ್, ಇನ್ನಿತರ ಸಮಿತಿಯ ಪ್ರಮುಖರು ಮತ್ತು ಸೇವಿಕೆಯರು ಉಪಸ್ಥಿತರಿದ್ದರು.
ಸಮಿತಿಯ ವತಿಯಿಂದ ಬಾಲಕಿಯರಿಗೆ ಮತ್ತು ಗಿನಿಯರಿಗೆ ಏರ್ಪಡಿಸಿದ್ದ ದೇಶಕ್ತಿಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಬಾಗವಹಿಸಿ ಬಹುಮಾನ ಪಡೆದ ಮಾತೆಯರು ಮತ್ತು ಮಕ್ಕಳಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.

   

Leave a Reply