ಪಕ್ಕದ ಮನೆಯಾದೀತಾ ಮಂಗಳಗ್ರಹ?!

ಸುದ್ದಿಗಳು - 0 Comment
Issue Date : 13.10.2014

ಭಾರತ ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸುತ್ತಲೇ ಹಲವಾರು ಜೋಕುಗಳು ಕೇಳ ಬಂದವು. ಅವೆಲ್ಲವೂ ಮತ್ತೊಂದು ಗ್ರಹವೆಂದರೆ ಇನ್ನು ಮೇಲೆ ಅಚ್ಚರಿಪಡಬೇಕಿಲ್ಲ. ಅದು ನಮ್ಮ ಭೂಮಿಗೆ ಪಕ್ಕದ ಮನೆಯಿ ದ್ದಂತೆ ಎಂಬ ಅರ್ಥವನ್ನೇ ನೀಡಿದವು. ಆದರೆ ಇತ್ತೀಚೆಗೆ ನಾಸಾ ಹೊಸ ಕಾರ್ಯವೊಂದಕ್ಕೆ ಕೈಹಾಕುವ ಮೂಲಕ ಮಂಗಳನ ಅಂಗಳಕ್ಕೆ ಸಾಮಾನ್ಯನೂ ಕಾಲಿರಿಸಲು ಅನುಕೂಲತೆ ಕಲ್ಪಿಸಿದೆ.

ನಾವು ಮಾಡಬೇಕಾಗಿರುವುದಿಷ್ಟೇ, ನಾಸಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಒರಿಯನ್ಸ್ ಮಾರ್ಸ್‌ ವಿಸಿಟ್ ಎಂಬ ಭಾಗವೊಂದಿದೆ. ಅದರಲ್ಲಿ ನಮ್ಮ ಹೆಸರನ್ನು ನೋಂದಾಯಿಸಿದರಾಯಿತು. ಕೆಲವೇ ಕ್ಷಣಗಳಲ್ಲಿ, ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ, ಅಭಿನಂದನೆಗಳು ಎಂಬ ಸಂದೇಶವೊಂಧು ನಿಮ್ಮ ಕೈ ಸೇರುತ್ತದೆ. ಹೀಗೆ ನೋಂದಾಯಿಸಿದ ಹೆಸರುಗಳಲ್ಲಿ ಕೆಲ ಆಯ್ದ ಹೆಸರುಗಳನ್ನು ಮುಂದೆ ಮಂಗಳಯಾನಕ್ಕೆ ಕಳಿಸುವ ಯೋಚನೆ ನಾಸಾದ್ದು. ಈಗಾಗಲೇ ಮಂಗಳಕ್ಕೆ ತೆರಳಿರುವ ಉಪಗ್ರಹಗಳು ಮಂಗಳನ ವಾತಾವರಣ ಜೀವಿಗಳಿಗೆ ವಾಸಯೋಗ್ಯವೇ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ನೀಡುವುದೊಂದೇ ತಡ. ಮಂಗಳನತ್ತ ಕೌತುಕದ ನೋಟ ಬೀರುತ್ತಿದ್ದ ಹಲವು ತಂಡಗಳೇ ಮಂಗಳನತ್ತ ಪಯಣಿಸಲು ತಯಾರಾಗಿವೆ. ಈ ಎಲ್ಲಾ ಕಾರಣಗಳಿಂದ ಮಂಗಳ ಗ್ರಹ ಇನ್ನು ಕೆಲವೇ ದಶಕಗಳಲ್ಲಿ ಪಕ್ಕದ ಮನೆ ಎಂದು ಅನ್ನಿಸಿದರೂ ಅಚ್ಚರಿಯಿಲ್ಲ. ಹಾಗೆಯೇ ಬೇರೆ ಬೇರೆ ದೇಶ ಪ್ರಭಾವಿಗಳು ಈಗಾಗಲೇ ಮಂಗಳನಲ್ಲಿ ಸೈಟು ನೋಂದಣಿ ಮಾಡುವುದಕ್ಕೆ ಶುರು ಮಾಡಿದ್ದು, ಮಗಳನಲ್ಲೂ ರಿಯಲ್ ಎಸ್ಟೇಟ್ ವ್ಯವಹಾರ ಆರಂಭವಾದರೆ ಅಚ್ಚರಿಯೇನಿಲ್ಲ!

   

Leave a Reply