ಪುತ್ತಿಗೆ ಮಠದಲ್ಲಿ ರತನ್‍ ಟಾಟಾ

ಉಡುಪಿ - 0 Comment
Issue Date : 11.02.2014

ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲಮಠದ ನೂತನ ಸ್ವಾಗತ ಮಂಟಪವನ್ನು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ, ದೇಶದ ಶ್ರೀಮಂತ ಕೈಗಾರಿಕೋದ್ಯಮಿ ರತನ್ ಎನ್‍.ಟಾಟಾ ಸೋಮವಾರ (ಫೆ.10) ಉದ್ಘಾಟಿಸಿದರು.

ಅತ್ಯಂತ ಸುಂದರ ಕಾಷ್ಠ ಕುಸುರಿಗಳಿರುವ ಈ ಮೂಲಮಠವನ್ನು ಕಳೆದ 2 ವರ್ಷಗಳಿಂದ ನವೀಕರಣಗೊಳಿಸಲಾಗುತ್ತಿದ್ದು ಇದೀಗ ನೂತನ ಸ್ವಾಗತ ಮಂಟಪದ ನಿರ್ಮಾಣದೊಂದಿಗೆ ಪೂರ್ಣಗೊಂಡಿದೆ.  ಈ ಸಂದರ್ಭದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ರತನ್‍ ಟಾಟಾ ಅವರನ್ನು ಸನ್ಮಾನಿಸಿದರು.  ರತ್ನರಥದ ಪ್ರತೀಕ, ಅಕ್ಕಿಕಾಳಿನಲ್ಲಿ ಕೆತ್ತಿರುವ ಗೀತಾ ಶ್ಲೋಕವುಳ್ಳ ಸ್ಮರಣಿಕೆ, ಶಾಲು ಪ್ರಸಾದಗಳನ್ನು ನೀಡಿ ಆಶೀರ್ವದಿಸಿದರು.  

ಪುತ್ತಿಗೆ ಮೂಲಮಠದಲ್ಲಿ ಶ್ರೀ ಪುತ್ತಿಗೆ ವಿದ್ಯಾಪೀಠವನ್ನು ಸ್ಥಾಪಿಸಿ ಈಗಾಗಲೇ ಉನ್ನತ ಸಂಸ್ಕೃತ ಶಿಕ್ಷಣವನ್ನು ನೀಡಲಾಗುತ್ತಿದೆ.  ಮುಂದೆ ಇಲ್ಲಿಯೇ ನಮ್ಮ ಪ್ರಾಚೀನ ಮೌಲ್ಯಗಳನ್ನು ಮತ್ತು ಆಧುನಿಕ ಶಿಕ್ಷಣವನ್ನು ನೀಡುವ ಸುಸಜ್ಜಿತ ಬೃಹತ್ ಶಿಕ್ಷನ ಸಂಸ್ಥೆಯೊಂದನ್ನು ನಿರ್ಮಿಸುವ ಕನಸು ಇದೆ.  ಇದಕ್ಕಾಗಿ ಯೋಜನೆ ಸಿದ್ಧವಾಗಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.

   

Leave a Reply