ರೈತರ ಕಾರ್ಯ ಸುಗಮಮಾಡುವ ಯಂತ್ರ

ಸಾಧನೆ - 0 Comment
Issue Date : 12.02.2014

ಯಾವುದೇ ಅತ್ಯಾಧುನಿಕ ಸೌಲಭ್ಯಗಳಿಲ್ಲದೆ ಸೌರಶಕ್ತಿ ನೇಗಿಲು  ಯಂತ್ರ ಸಂಶೋಧಿಸಿರುವ ವಿದ್ಯಾರ್ಥಿನಿ ಪೂರ್ಣಿಮ ಕಲಿತಿರುವುದು ಕನ್ನಡ ಮಾಧ್ಯಮದಲ್ಲಿ. ಕಾನ್ವೆಂಟ್‍ ಶಿಕ್ಷಣದ ಜತೆಗೆ ಇಂಗ್ಲಿಷ್ ಭಾಷೆಯಿಂದ ಮಾತ್ರ ಬದುಕು ಸಾಧ್ಯ ಎಂದು ಬಹುತೇಕ ಮಂದಿ ಭ್ರಮೆಯಲ್ಲಿರುವ ಕಾಲವಿದು.   ರೈತರ ಮಕ್ಕಳೇನು ಸಾಧನೆ ಮಾಡಲು ಸಾಧ್ಯ ಎನ್ನುವ ಸಮಾಜದ ಲಘು ಭಾವನೆಯನ್ನು ಸುಳ್ಳು ಮಾಡಿರುವ ಸಾಧನೆ ಗ್ರಾಮೀಣ ಪ್ರತಿಭೆಗಳಲ್ಲಿ ಸ್ಫೂರ್ತಿ ಮೂಡಿಸುವಂಥದ್ದು.  

ಹಳ್ಳಿಗಾಡಿನ ರೈತರು ಬೆವರು ಹರಿಸಿ, ಕೃಷಿ ಮಾಡಿ ಅದರಲ್ಲಿ ಏಳಿಗೆ ಕಾಣದೆ ನಗರದತ್ತ ಮುಖ ಮಾಡುತ್ತಿರುವ ಈ ಕಾಲದಲ್ಲಿ ಮಂಡ್ಯದ ವಿದ್ಯಾರ್ಥಿನಿ ಸೌರಶಕ್ತಿ ಚಾಲಿತ ನೇಗಿಲು ಯಂತ್ರ ಸಂಶೋಧಿಸಿ ರೈತರ ಕೆಲಸ ಸುಲಭವಾಗುವಂತೆ ಮಾಡಿದ್ದಾಳೆ.

ಈ ವಿನೂತನ ಯಂತ್ರದ ಮೂಲಕ ಏಕಕಾಲದಲ್ಲಿ ಹಲವು ಕಾರ್ಯಗಳಾದ ಬೀಜ ಬಿತ್ತನೆ, ನೀರು ಸಿಂಪಡಿಕೆ, ಗೊಬ್ಬರವನ್ನೂ ಹಾಕಬಹುದು.  ಈ ಯಂತ್ರ ಸೌರಶಕ್ತಿಯಿಂದ ಕಾರ್ಯ ನಿರ್ವಹಿಸುತ್ತದೆ.  ಒಂದು ವೇಳೆ ಮೋಡದ ವಾತಾವರಣವಿದ್ದರೂ ಬ್ಯಾಟರಿಯನ್ನು ಅಳವಡಿಸಿದ ಯಂತ್ರವು ಕಾರ್ಯ ನಿರ್ವಹಿಸುತ್ತದೆ. ಈ ಯಂತ್ರದಲ್ಲಿ ರಿಮೋಟ್ ಕಂಟ್ರೋಲ್ ಅಳವಡಿಕೆಯಾಗಿದ್ದು ದೂರದಲ್ಲಿ ಕುಳಿತೇ ಯಂತ್ರವನ್ನು ನಿಯಂತ್ರಿಸಬಹುದಾಗಿದೆ.  ಈ ಯಂತ್ರದಲ್ಲಿ ಚಕ್ರಗಳ ಬದಲಿಗೆ ಟೂತ್ ಪ್ರೊಪೈಲ್‍ನಿಂದ ಚಲಿಸುವ ವ್ಯವಸ್ಥೆ ಮಾಡಿರುವದರಿಂದ ಹೊಲದ ಮಣ್ಣನ್ನು ಕೆದಕುತ್ತ, ಉಳುಮೆ ಮಾಡುತ್ತಲೇ ಚಲಿಸುತ್ತದೆ.

ಪೂರ್ಣಿಮಾಳ ಈ ಸಾಧನೆಗೆ ಪ್ರಶಸ್ತಿಗಳು ಲಭಿಸುತ್ತಿವೆ.  ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಸದರನ್‍ ಇಂಡಿಯಾ ಸೈನ್ಸ್ ಫೇರ್ 2014ರ ಯುಎಲ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದು ರಾಜ್ಯಕ್ದೆ ಕೀರ್ತಿ ತಂದಿದ್ದಾಳೆ.

   

Leave a Reply