ರಾಷ್ಟ್ರ ಭಾಷಾ ಹಿಂದಿ ದಿವಸ ಉತ್ಸವ

ಬೀದರ್ - 0 Comment
Issue Date : 22.09.2014

ಬೀದರ್: ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ರಾಷ್ಟ್ರ ಭಾಷಾ ಹಿಂದಿ ದಿವಸ ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾದ ಗೌತಮ್ ಕಿಶನ್ ಶಿಂಧೆ ಇವರು ಹಿಂದಿ ದಿವಸ ಕುರಿತು ತಮ್ಮ ಉಪನ್ಯಾಸದಲ್ಲಿ ಹಿಂದಿ ಭಾಷೆಯು ಭಾರತದ ಅಖಂಡತೆಗೆ ಹಾಗೂ ಭಾರತದ ಪ್ರತಿಯೊಬ್ಬ ನಾಗರಿಕನ ಹೆಮ್ಮೆಗೆ ಸೂತ್ರಧಾರಿ ಭಾಷೆ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಅತಿಥಿಗಳಾದ ಆರ್.ಆರ್.ಕೆ.ಎಸ್. ಕಾಲೇಜಿನ ಪ್ರಾಂಶುಪಾಲರು ಆರ್.ಕೆ. ವಾಗ್‌ಮಾರೆಯವರು ಭಾಷೆಯಿಲ್ಲದೆ ಮನುಷ್ಯನ ಬದುಕು ದುಸ್ತರ ಎಂದು ಹೇಳಿದರು.
ರಾಜ ಭಾಷಾ ಹಿಂದಿಯು ಅಖಂಡ ಭಾರತೀಯರನ್ನು ಜೋಡಿಸುವ ಭಾಷೆ ಆಗಬೇಕು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ಭಾಷೆ ಗೌರವ ಹೆಚ್ಚಾಗಬೇಕೆಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ ಶ್ರೀಮತಿ ಪ್ರತಿಭಾ ಚಾಮಾ ಅವರು ಜಗತ್ತಿನ್ನಲ್ಲಿಯೇ ಹಿಂದಿ ಭಾಷೆ ಮೂರನೇ ಅತಿ ಹೆಚ್ಚು ಮಾತನಾಡುವವರ ಸಂಖ್ಯೆ ಹೊಂದಿರುವ ಭಾಷೆ. ಇದು ಭಾರತೀಯರು ಹೆಮ್ಮೆ ಪಡುವ ಸಂಗತಿ ಎಂದರು.

   

Leave a Reply