ರಾಷ್ಟ್ರದ ವೈಭವಕ್ಕೆ ತ್ಯಾಗ, ಸೇವೆ ಅಗತ್ಯ

ಬಾಗಲಕೋಟೆ - 0 Comment
Issue Date : 11.08.2014

ಬಾಗಲಕೋಟೆ: ಸಮಾಜದ ಹಿತಕ್ಕಾಗಿ ತ್ಯಾಗ, ಸಮರ್ಪಣೆ ಮಾಡಬೇಕು. ಆಗ ಮಾತ್ರ ಸಮಾಜ ಮತ್ತು ರಾಷ್ಟ್ರದ ಉನ್ನತಿ ಸಾಧ್ಯ ಎಂದು ರಾ.ಸ್ವ. ಸಂಘದ ಮಧ್ಯ ಕ್ಷೇತ್ರೀಯ ಕಾರ್ಯವಾಹ ರಾಮಕೃಷ್ಣರಾವ್ ಅವರು ಪ್ರತಿಪಾದಿಸಿದರು.

ಇಲ್ಲಿ ಇತ್ತೀಚೆಗೆ ನಡೆದ ನಗರ ಶಾಖೆಯ ಗುರುಪೂಜಾ ಉತ್ಸವದಲ್ಲಿ ಅವರು ಮಾತನಾಡಿದರು. ಸಂಘವು ಕಳೆದ 86 ವರ್ಷಗಳಿಂದ ವ್ಯಕ್ತಿನಿರ್ಮಾಣದ ಸಮಾಜ ಸಂಘಟನೆಯ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಸಮಯದಾನ, ಧನದಾನ ಮೀಸಲಿಡಬೇಕು ಎಂದು ಕರೆ ನೀಡಿದರು. ಮುಧೋಳ ಸಕ್ಕರೆ ಕಾರ್ಖಾನೆಯ ಉತ್ಪಾದನಾ ವಿಭಾಗದ ಪ್ರಮುಖರಾದ ಡಾ. ಓಂಪ್ರಕಾಶ್ ರಾವ್ ಸರದೇಶಪಾಂಡೆ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಚಾಲಕ ಡಾ. ಸಿ.ಎಸ್. ಪಾಟೀಲ ಅವರು ಉಪಸ್ಥಿತರಿದ್ದರು.

   

Leave a Reply