ಸಮಾಜಕ್ಕಾಗಿಯೇ ಬದುಕಿದ ಬಿ.ಎಲ್.ಅಕ್ಕಿ

ಹುಬ್ಬಳ್ಳಿ - 0 Comment
Issue Date :

ನವಲಗುಂದ: ಸಮಾಜಕ್ಕಾಗಿ ಬದುಕಿದ ಸಂಘದ ಕಾರ್ಯಕರ್ತರಾಗಿದ್ದ ದಿವಂಗತ ಬಿ.ಎಲ್.ಅಕ್ಕಿ ಅವರ ಕುರಿತ ಸಂಸ್ಮರಣ ಸಂಚಿಕೆಯನ್ನು ಇಲ್ಲಿಗೆ ಸಮೀಪದ ಮಜ್ಜಿಗುಡ್ಡ ಗ್ರಾಮದಲ್ಲಿ ಬಿಡುಗಡೆಗೊಳ್ಳಿಸಲಾಯಿತು. ಸಮಾರಂಭದ ಸಾನಿಧ್ಯ ವಹಿಸಿದ್ದ ಗದುಗಿನ ಶ್ರೀ ತೊಂಟದಾರ್ಯ ಜಗದ್ಗುರುಗಳು ಅಕ್ಕಿಯವರು ಸಮಾಜ ಸೇವೆಯಲ್ಲಿ ಸಾಕ್ಷತ್ಕಾರ ಕಂಡ ಗಣ್ಯರು ಎಂದು ಪ್ರಶಂಸಿಸಿದರು.

ಸಮಾರಂಭದಲ್ಲಿ ಹೂವಿನ ಶಿಡ್ಲಿಯ ವಿರಕ್ತಮಠದ ಚೆನ್ನವೀರಸ್ವಾಮಿಗಳು, ಹೊಸಳ್ಳಿಯ ಬೂದೀಶ್ವರ ಮಹಾಸ್ವಾಮಿಗಳು, ಎಸ್.ಎಸ್.ಹರ್ಲಾಪುರ, ಕೃತಿಕಾರ ಡಾ. ಎ.ಸಿ.ವಾಲಿ, ಎಂ.ಕೆ. ನಾಯಕ ಮೊದಲಾದವರು ಉಪಸ್ಥಿತರಿದ್ದರು. ನಿಂಗಪ್ಪ ನೀಲಪ್ಪ ಗುಡ್ಡದ ಅಧ್ಯಕ್ಷತೆ ವಹಿಸಿದ್ದರು.

ದಿ. ಬಿ.ಎಲ್.ಅಕ್ಕಿಯವರು ಶಿಕ್ಷಕರಾಗಿ ಜೀವನ ಪ್ರಾರಂಭಿಸಿದರು. ಅನಂತರ ಸೈನ್ಯಕ್ಕೆ ಸೇರಿ 1971ರಲ್ಲಿ ನಡೆದ ಪಾಕಿಸ್ತಾನ ವಿರುಧದ ಯುದ್ಧದಲ್ಲಿ  ಭಾಗವಹಿಸಿದ್ದರು. ನಿವೃತ್ತಿಯ ನಂತರ ಸಂಘದ ಸಂಪರ್ಕಕ್ಕೆ ಬಂದು ಸಮಾಜ ಸೇವೆಯಲ್ಲಿ ತೊಡಗಿದರು. ಮಜ್ಜಿಗುಡ್ಡ ಗ್ರಾಮದ ಕೊರತೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಶಾಲೆ, ರಸ್ತೆ, ನೆರಳಿಗಾಗಿ ಬೇವಿನ ಮರಗಳ ನೆಡುವಿಕೆ ಮೊದಲಾದ ಕೆಲಸಗಳಲ್ಲಿ ಯಶಸ್ವಿಯಾದರು. ಅಕ್ಕಿಯವರು ಒಂದು ರೀತಿಯಲ್ಲಿ ಸಮಾಜ ಸಿರಿಯಾಗಿಯೇ ಬದುಕಿದರು. ‘ಜಂಗು ಹತ್ತಿ ಹೋಗುವುದಕ್ಕಿಂತ ಸವೆದು ಹೋಗುವುದು ಲೇಸು’ ಎಂದು ಅಕ್ಕಿಯವರು ಆಗಾಗ ಹೇಳುತ್ತಿದ್ದರು. ಅದರಂತೆಯೇ ಅವರು ಮುಂದಿನ ಪೀಳಿಗೆಗೆ ದಾರಿದೀಪವಾಗಿ ಬದುಕಿದರು.

ವರದಿ: ಕರವೀರಪ್ಪ ಮಡಿವಾಳರ

   

Leave a Reply