ಸಂಸ್ಕೃತ ವಿವಿ ಪರೀಕ್ಷೆ: ಶ‍್ರೀಹರಿ ಸುಬ್ರಹ್ಮಣ್ಯ ಪ್ರಥಮ ಸ್ಥಾನ

ಉಡುಪಿ ; ಜಿಲ್ಲೆಗಳು - 0 Comment
Issue Date : 23.06.2014

ಉಡುಪಿ: ಸಂಸ್ಕೃತ ಬಿ.ಎ. ಜ್ಯೋತಿಷ್ಯಶಾಸ್ತ್ರ ಪರೀಕ್ಷೆಯಲ್ಲಿ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಸರ್ವಪ್ರಥಮ ಸ್ಥಾನ ಪಡೆದು ಶ್ರೀಹರಿ ಸುಬ್ರಹ್ಮಣ್ಯ ಕೀರ್ತಿ ತಂದಿದ್ದಾರೆ. ಈತ ಗಳಿಸಿದ ಅಂಕಗಳು ಶೇ. 80. ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಈತ ವ್ಯಾಸಂಗ ಮಾಡುತ್ತಿದ್ದರು.
ಅಲ್ಲದೆ ಉಡುಪಿಯ ಪೂರ್ಣಪ್ರಜ್ಞ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿರುವ ಶ್ರೀಹರಿ ಬಿಬಿಎಂ ಅಂತಿಮ ಪರೀಕ್ಷೆಯಲ್ಲೂ ಶೇ. 83 ಅಂಕ ಗಳಿಸಿ ತರಗತಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಶ್ರೀಹರಿಸುಬ್ರಹ್ಮಣ್ಯ ತೀರ್ಥಹಳ್ಳಿ ತಾಲ್ಲೂಕಿನ ಹಾದಿಗಲ್ಲು ಗ್ರಾಮದ ಸಂಘದ ಹಿರಿಯ ಕಾರ್ಯಕರ್ತ ಡಾ. ಹಾದಿಗಲ್ಲು ಲಕ್ಷ್ಮಿನಾರಾಯಣ ಅವರ ಪುತ್ರ.

 

   

Leave a Reply