ಸತ್ಯೇಂದ್ರನಾಥ ಬೋಸ್ – ಭಾರತದ ಭೌತವಿಜ್ಞಾನಿ.

ವ್ಯಕ್ತಿ ಪರಿಚಯ - 0 Comment
Issue Date : 01.01.2014

ಸತ್ಯೇಂದ್ರನಾಥ ಬೋಸ್ ಇವರು 1894 ರ ಜನವರಿ 1 ರಂದು ಕಲ್ಕತ್ತೆಯಲ್ಲಿ ಹುಟ್ಟಿದರು.  

ಸಂಖ್ಯಾಶಾಸ್ತ್ರ ಪದ್ಧತಿಯನ್ನು ಕಂಡು ಹಿಡಿದು ವಿಶ್ವವಿಖ್ಯಾತರಾದ ಭಾರತೀಯ ಭೌತವಿಜ್ಞಾನಿ, ಸತ್ಯೇಂದ್ರನಾಥ ಬೋಸ್.  

ಸತ್ಯೇಂದ್ರನಾಥ ಬೋಸ್ ಶಾಂತಿ ಮತ್ತು ನಿಶ್ಯಸ್ತ್ರೀಕರಣ ಪ್ರತಿಪಾದಕರು ಕೂಡ ಆಗಿದ್ದರು. ಅವರು ಸೋವಿಯತ್ ಒಕ್ಕೂಟ, ಡೆನ್ಮಾರ್ಕ್, ಚೆಕೊಸ್ಲೊವಾಕಿಯಗಳನ್ನೊಳಗೊಂಡು ಅನೇಕ ದೇಶಗಳಿಗೆ ಭೇಟಿಕೊಟ್ಟರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಬ್ರಿಟಿಷರ ವಿರುದ್ಧ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರು ದೇಶದ ಸ್ವಾತಂತ್ರ್ಯದ ಅವಶ್ಯಕತೆಯನ್ನು ಚೆನ್ನಾಗಿ ಅರಿತಿದ್ದರು. 

ಅವರು ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ತತ್ವಜ್ಞಾನ, ಕಲೆ, ಸಾಹಿತ್ಯ ಮೊದಲಾದ ವಿಷಯಗಳ್ಲೂ ಆಸಕ್ತಿಯುಳ್ಳವರಾಗಿದ್ದರು.ವಿಜ್ಞಾನದಲ್ಲಿ ಅವರ ಸೇವೆಯನ್ನು ಮಾನ್ಯಮಾಡಿ ಭಾರತ ಸರಕಾರ ಅವರಿಗೆ  1954ರಲ್ಲಿ ಪದ್ಮವಿಭೂಷಣ ಬಿರುದನ್ನು ನೀಡಿತು.

ಸಮಾಜಸೇವೆಯು ಬೋಸರ ಜೀವನದಲ್ಲಿ ಜೀವಂತ ಆದರ್ಶವಾಗಿತ್ತು.  ಹಣವನ್ನು ಹಿಂಬಾಲಿಸದೇ ತಮ್ಮ ಸರ್ವಸ್ವವನ್ನೂ ವಿಜ್ಞಾನಕ್ಕಾಗಿ, ವಿದ್ಯಾರ್ಥಿಗಳಿಗಾಗಿ ಮತ್ತು ದೀನದಲಿತರ ಸೇವೆಗಾಗಿ ಅರ್ಪಿಸಿದರು.  ತಮ್ಮ ಜೀವನವನ್ನೇ ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟು ಜನರಿಗೆ ಉಜ್ವಲ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು.

ಸತ್ಯೇಂದ್ರನಾಥ್ ಬೋಸ್ 1974ರ ಫೆಬ್ರವರಿ 4ರಂದು ನಿಧನ ಹೊಂದಿದರು. ಬೋಸರ ಮರಣದಿಂದ ನಮ್ಮ ದೇಶಕ್ಕಷ್ಟೇ ಅಲ್ಲದೆ ಇಡೀ ಜಗತ್ತಿಗೂ ವಿಜ್ಞಾನ ಪ್ರಪಂಚಕ್ಕೂ ವಿಶೇಷ ಹಾನಿಯಾಯಿತು.

   

Leave a Reply