ಸ್ಕೇಟಿಂಗ್‍ನಿಂದ ವಿಶ್ವದಾಖಲೆ ನಿರ್ಮಿಸಿದ ಪೋರ

ಸಾಧನೆ - 0 Comment
Issue Date : 12.02.2014

ಬೆಂಗಳೂರಿನ ಬಸವೇಶ್ವರ ನಗರದ ಪ್ಲೋರೆನ್ಸ್ ಶಾಲೆಯಲ್ಲಿ ಈಗಿನ್ನೂ ಎಲ್‍ಕೆಜಿ ಓದುತ್ತಿರುವ ಐದು ವರ್ಷದ ಗಗನ್‍ ವಿಶ್ವ ದಾಖಲೆ ಪಟ್ಟಿಯಲ್ಲಿ ತನ್ನ ಹೆಸರು ಬರುವಂತೆ ಸಾಧನೆಗೈದಿದ್ದಾನೆ.  ಸ್ಕೇಟಿಂಗ್‍ ವೀಲ್‍ಗಳನ್ನು ಕಟ್ಟಿಕೊಂಡ ಬಾಲಕ 300ಕ್ಕೂ ಅಧಿಕ ಮಂದಿ ಸಾಕ್ಷಿಯಾಗಿದ್ದ ಸ್ಥಳದಲ್ಲಿ ನಿಲ್ಲಿಸಿದ 39 ಟೊಯೋಟಾ ಕಾರುಗಳ ಅಡಿಯಲ್ಲಿ ಅಂದರೆ 69.2 ಮೀಟರ್‍ಗಳಷ್ಟು ಉದ್ದವನ್ನು ಕ್ರಮಿಸಲು ಆತ ತೆಗೆದುಕೊಂಡ ಕಾಲಾವಕಾಶ ಕೇವಲ 29 ಸೆಕೆಂಡುಗಳು.

ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‍ನ ಐವರು ತಾಂತ್ರಿಕ ಅಧಿಕಾರಿಗಳು ಈ ವೇಳೆ ಹಾಜರಿದ್ದರು.  ಮುಂದಿನ ಏಪ್ರಿಲ್ ವೇಳೆಗೆ ಗಿನ್ನಿಸ್ ಸಂಸ್ಥೆಯಿಂದ ಈ ದಾಖಲೆ ಅಧಿಕೃತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

   

Leave a Reply