ಉಳ್ಳಾಲ ಮೀನುಗಾರರ ಚಿಂತಾಜನಕ ಸ್ಥಿತಿ

ದಕ್ಷಿಣ ಕನ್ನಡ - 0 Comment
Issue Date : 14.04.2014

ಮಂಗಳೂರಿನ ಉಳ್ಳಾಲದಲ್ಲಿ ಇತ್ತೀಚೆಗಷ್ಟೇ ಕೋಮು ಸಂಘರ್ಷ ತೀವ್ರಸ್ವರೂಪ ಪಡೆದು ಸುದ್ದಿಯಾಗಿತ್ತು. ಆದರೆ ಉಳ್ಳಾಲದಲ್ಲಿ ಇಂಥ ಘಟನೆ ನಡೆಯುವುದು ಹೊಸತೇನಲ್ಲ. ಏಕೆಂದರೆ ಜಿಹಾದಿಗಳ ಸಂಖ್ಯೆ ಹೆಚ್ಚಿರುವ ಆ ಪ್ರದೇಶದಲ್ಲಿ ಹಿಂದು ಯುವತಿಯರನ್ನು ವಿಕೃತವಾಗಿ ನಡೆಸಿಕೊಳ್ಳಲಾಗುತ್ತಿದೆ. ಉಳ್ಳಾಲವು ಕರಾವಳಿ ಪ್ರದೇಶವಾಗಿರುವುದರಿಂದ ಇಲ್ಲಿನ ಬಹುಪಾಲು ಜನರ ಜೀವನೋಪಾಯವೇ ಮೀನುಗಾರಿಕೆ. ಆದರೆ ಮನೆಯ ಯಜಮಾನರು ಮೀನುಗಾರಿಕೆಗೆಂದು ಹೊರಹೋದಾಗ ಇತ್ತ ನಡೆಯುವ ಘಟನೆಗಳೇ ಬೇರೆ. ಅವರು ಸಮುದ್ರದತ್ತ ಹೋಗಿದ್ದಾರೆಂಬುದು ತಿಳಿಯುತ್ತಿದ್ದಂತೆಯೇ ಅವರ ಮನೆಯ ಮೇಲೆ ಕಲ್ಲೆಸೆಯುವುದು, ಜೋರಾಗಿ ಮನೆಯ ಬಾಗಿಲನ್ನು ತಟ್ಟುವುದು, ಅವಾಚ್ಯ ಶಬ್ದಗಳಿಂದ ಕೂಗಾಡುವುದು ಆರಂಭವಾಗುತ್ತದೆ. ಮನೆಯ ಕಿಟಕಿ ಗಾಜುಗಳನ್ನು ಒಡೆದು ಮನೆಯೊಳಗೆ ನುಗ್ಗುಲು ಪ್ರಯತ್ನಿಸುವುದಲ್ಲದೆ ಮನೆಯಲ್ಲಿರುವ ಯುವತಿಯರ ಜೊತೆೆ ಅಸಭ್ಯವಾಗಿ ವರ್ತಿಸುತ್ತಾರೆ. ಅಷ್ಟೇ ಅಲ್ಲ, ಮನೆಯಲ್ಲಿರುವ ಹೆಂಗಸರೊಂದಿಗೂ ಅಸಭ್ಯ ರೀತಿಯಲ್ಲಿ ಮಾತನಾಡುತ್ತಾರೆ.

ಲವ್ ಜಿಹಾದ್ ಕೂಡ ಇಂಥ ಪ್ರದೇಶಗಳಲ್ಲಿ ಸಾಮಾನ್ಯ ಎನ್ನಿಸಿದೆ. ಈಗಾಗಲೇ ಇಂಥ ಹಲವು ಪ್ರಕರಣಗಳು ಸುದ್ದಿಯಾಗಿದ್ದು, ಉಳ್ಳಾಲ ರಾಜ್ಯದ ಸೂಕ್ಷ್ಮ ಪ್ರದೇಶವೆನ್ನಿಸಿಕೊಂಡಿದೆ.

ಈ ಬಗ್ಗೆ ಮೇಲಧಿಕಾರಿಗಳು, ಸರ್ಕಾರ ಹೆಚ್ಚಿನ ಕಾಳಜಿ ತೋರಬೇಕು. ಉಸಿರುಬಿಗಿ ಹಿಡಿದು ಬದುಕುತ್ತಿರುವ ಉಳ್ಳಾಲದ ಮೀನುಗಾರರ ಕುಟುಂಬಗಳಿಗೆ ರಕ್ಷಣೆ ನೀಡಬೇಕೆಂಬುದು ಜನರ ಅಭಿಮತ.

   

Leave a Reply