ಉತ್ಥಿತಹಸ್ತ ಪಾದಾಂಗುಷ್ಠಾಸನ

ಅಷ್ಟಾಂಗ ಯೋಗ - 0 Comment
Issue Date : 12.03.2014

ಉತ್ಥಿತಹಸ್ತ ಪಾದಾಂಗುಷ್ಠಾಸನಕ್ಕೆ ಹಸ್ತಪಾದಾಂಗುಷ್ಠಾಸನ ಮತ್ತು ಉತ್ಥಿತ ಪಾದಾಂಗುಷ್ಠಾಸನ ಎಂಬ ಹೆಸರುಗಳೂ ಇವೆ.  ಆದರೆ ಉತ್ಥಿತ ಹಸ್ತಪಾದಾಂಗುಷ್ಠಾಸನ ಎಂಬ ಹೆಸರೇ ಈ ಆಸನಕ್ಕೆ ಹೆಚ್ಚು ಸೂಕ್ತವಾದುದು.

ಮಾಡುವ ಕ್ರಮ

1) ಯೋಗಾಭ್ಯಾಸಿಯು ಪ್ರಾರಂಭದಲ್ಲಿ ಎರಡೂ ಪಾದಗಳನ್ನು ಜೋಡಿಸಿ, ಭೂಮಿಗೆ ಲಂಬವಾಗಿ, ಕೈಗಳನ್ನು ತೊಡೆಗೆ ತಗಲುವಂತೆ ನೀಳವಾಗಿ ಚಾಚಿ, ಎದೆ ಎತ್ತಿ ನಿಲ್ಲಬೇಕು.

2) ಅನಂತರ ಉಸಿರನ್ನು ಹೊರಕ್ಕೆ ದೂಡಿ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ ಚಿತ್ರದಲ್ಲಿರುವಂತೆ ಎಡಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ಶರೀರದ ಮುಂದೆ ಬರುವಂತೆ ಮಾಡಬೇಕು. (ಅಂದರೆ ಈ ಸ್ಥಿತಿಯಲ್ಲಿ ಕಾಲು ಭೂಮಿಗೆ ಸಮಾನಾಂತರವಾಗಿರಬೇಕು)

3)  ಅನಂತರ ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಂಡು ಸಮತೋಲನವನ್ನು ಪಡೆಯಬೇಕು.

4) ಎಡಕಿವಿಗೆ ಸ್ಪರ್ಶಿಸುವಂತೆ ಎಡಗೈಯನ್ನು ಮೇಲಕ್ಕೆ ಚಾಚಬೇಕು. ಬಲಗಾಲಿನ ಮೇಲೆ ಇಡೀ ಶರೀರದ ಭಾರವನ್ನು 1 ರಿಂದ 3 ನಿಮಿಷಗಳ ವರೆಗೆ ಹೊರಿಸಿ ಅನಂತರ ಕಾಲುಗಳನ್ನು ನಿಧಾನವಾಗಿ ಬದಲಿಸಬಹುದು.

ಲಾಭಗಳು:

ಉತ್ಥಿತಪಾದಾಂಗುಷ್ಠಾಸನದ ಅಭ್ಯಾಸದಿಂದ ಉದರದ ಎಲ್ಲ ಅವಯವಗಳೂ ದೃಢಗೊಳ್ಳುವುವು. ಸೊಂಟದ ವಿಕಾರ ದೂರವಾಗುವುದು, ವೀರ್ಯರಕ್ಷಣೆಯಾಗುವುದು ಬಲಶಾಲಿಯಾಗುವುವು.  

   

Leave a Reply