ವೆಬ್‌ಸೈಟ್‌ಗೆ ಚಾಲನೆ

ಬೆಂಗಳೂರಿನ ಸುದ್ದಿಗಳು - 0 Comment
Issue Date : 13.10.2014

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಂಗಳೂರು ಘಟಕದ ವೆಬ್‌ಸೈಟ್‌ಗೆ ಅ. 1ರಂದು ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಚಾಲನೆ ನೀಡಿದರು. ಸರಸ್ವತಿ ಸಕಲ ಕಲೆಗಳ ದೇವತೆ. ಆ ದೇವತೆಯನ್ನು ಪೂಜಿಸಿ ಆರಾಧಿಸುವುದರಿಂದ ಜ್ಞಾನಾರ್ಜನೆ ಆಗುತ್ತದೆ ಎಂದರು.

ಭಾರತೀಯ ಸಾಹಿತ್ಯ ಸಂಸ್ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದರಿಂದ ನಾಡಿನ ಕೆಲವು ಸಾಹಿತಿಗಳಲ್ಲಿ ವಿಕೃತ ಮನಸ್ಥಿತಿ ಎದ್ದು ಕಾಣುತ್ತಿದೆ ಎಂದು ಮಿಥಿಕ್ ಸೊಸೈಟಿಯ ಸದಸ್ಯ ಪ್ರಸನ್ನ ಕುಮಾರ್ ಹೇಳಿದರು. ನೂತನ ವೆಬ್‌ಸೈಟ್ www.sahityabharathi.orgನಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ಹಾಕಲಾಗುತ್ತದೆ ಎಂದು ಘಟಕದ ಅಧ್ಯಕ್ಷ ಡಾ. ಬಾಬು ಕೃಷ್ಣಮೂರ್ತಿ ವಿವರಿಸಿದರು. ಸಾಹಿತಿ ಡಾ.ಎಸ್.ಆರ್. ಲೀಲಾ ಉಪನ್ಯಾಸ ನೀಡಿದರು. ಚಂದ್ರಶೇಖರ ಭಂಡಾರಿ ಉಪಸ್ಥಿತರಿದ್ದರು.

   

Leave a Reply