ಯುವ ಬರಹಗಾರರ ಕಾರ್ಯಾಗಾರ

ಬೆಂಗಳೂರಿನ ಸುದ್ದಿಗಳು - 0 Comment
Issue Date : 05.01.2014

ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ  ವಿಕ್ರಮ ವಾರಪತ್ರಿಕೆ ಆಶ್ರಯದಲ್ಲಿ “ಯುವ ಬರಹಗಾರರ ಕಾರ್ಯಾಗಾರ”ವನ್ನು  ಜ. 5ರಂದು ಆದರ್ಶ ಕಾಲೇಜು ಸಭಾಂಗಣ (ವಿಕ್ರಮ ಕಛೇರಿ ಎದುರು), 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ ಬೆಂಗಳೂರು ಇಲ್ಲಿ ನಡೆಯಿತು.

ಬರವಣಿಗೆ ಕಲೆಯ ಕೌಶಲ್ಯ ಮತ್ತಿತರ ಉಪಯುಕ್ತ ಸಂಗತಿಗಳ ಬಗ್ಗೆ ಈ ಕಾರ್ಯಾಗಾರದಲ್ಲಿ ವಿಷಯತಜ್ಞರಾದ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿಬಂತಿ ಪದ್ಮನಾಭ, ಹಿರಿಯ ಪತ್ರಕರ್ತ ಜಯರಾಂ ಅಡಿಗ ಹಾಗೂ ವಿಕ್ರಮ ಸಂಪಾದಕ ದು.ಗು. ಲಕ್ಷ್ಮಣ್  ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಹೊಸದಿಗಂತ ಪತ್ರಿಕೆಯ ಸಿ. ಇ. ಒ ಎಸ್. ಶಾಂತರಾಮ, ವಿಕ್ರಮ ಪತ್ರಿಕೆಯ ವ್ಯವಸ್ಥಾಪಕ ಶಿ.ನಾ.ಚಂದ್ರಶೇಖರ್, ವಾದಿರಾಜ್, ರಾಜೇಶ್ ಪದ್ಮಾರ್, ಎಸ್. ಆರ್.ಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಕಾರ್ಯಾಗಾರದಲ್ಲಿ ಮಾಹಿತಿ ನೀಡುತ್ತಿರುವ ಹಿರಿಯ ಪತ್ರಕರ್ತ ಜಯರಾಂ ಅಡಿಗ


ಕಾರ್ಯಾಗಾರದಲ್ಲಿ ಯುವ ಬರಹಗಾರರಿಗೆ ಬರವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತಿರುವ ಉಪನ್ಯಾಸಕ  ಸಿಬಂತಿ ಪದ್ಮನಾಭ

ಕಾರ್ಯಕ್ರಮಕ್ಕೆ ಆಗಮಿಸಿದ ಯುವ ಬರಹಗಾರರು

   

Leave a Reply