ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ರಟಕಲ್ನಲ್ಲಿ 75 ಗೋವುಗಳ ಸಾಮೂಹಿಕ ಗೋ ಪೂಜೆ ಮಾಡಲಾಯಿತು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ, ಬಿಜೆಪಿ ಯುವ ಮೋರ್ಚಾ ಕಲಬುರಗಿ ಗ್ರಾಮಾಂತರ ಜಿಲ್ಲಾ ವತಿಯಿಂದ ಚಿಂಚೋಳಿ ತಾಲ್ಲೂಕಿನ ರಟಕಲ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಗೋ ಸಂರಕ್ಷಣಾ ಸೇವಾ ಸಮಿತಿಯಲ್ಲಿ ವಿಶೇಷ 75 ಗೋವುಗಳ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪ್ರಧಾನಮಂತ್ರಿಗಳ ಜನ್ಮದಿನದ ಅಂಗವಾಗಿ ಗೌರವ ಮತ್ತು ಭಕ್ತಿಯ ಸಂಕೇತವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶ್ರೀಪರಮ ಪೂಜ್ಯ ರೇವಣಸಿದ್ದೇಶ್ವರ ಸ್ವಾಮೀಜಿಗಳು ಹಾಗೂ ಪರಮ ಪೂಜ್ಯ ನೀಲಕಂಠ ಗುರೂಜೀ ಅವರ ಆಶೀರ್ವಾದ ಹಾಗೂ ಪ್ರಾರ್ಥನೆಗಳು ನೆರವೇರಿದವು.
ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಕಲಬುರಗಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ವೀರೇಂದ್ರ ಪಾಟೀಲ್ ರೈಕೋಡ್ ಅವರು ನೇತೃತ್ವ ವಹಿಸಿದ್ದರು. ಬಿಜೆಪಿ ಯುವ ಮೋರ್ಚಾದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ವಿಭಾಗ ಸಹ ಪ್ರಭಾರಿ ಶ್ರೀ ಶರಣಪ್ಪ ತಳವಾರ ಜೀ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ವಿಜಯಕುಮಾರ್ ಚೆಂಗೇಟೆ ಜೀ, ಪರ್ವತ ರೆಡ್ಡಿ ,ಅನಿಲ್ ಕಂಟ್ಲಿ ಸೇರಿದಂತೆ ಚಿಂಚೋಳಿ ತಾಲ್ಲೂಕಿನ ಹಲವು ಹಿರಿಯ ಬಿಜೆಪಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋ ಸಂರಕ್ಷಣೆ, ಸಮಾಜ ಸೇವೆ ಹಾಗೂ ಸಮುದಾಯದ ಸಹಭಾಗಿತ್ವದ ಮಹತ್ವವನ್ನು ಒತ್ತಿಹೇಳಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರಾಷ್ಟ್ರ ಸೇವೆ ನಿರಂತರವಾಗಿ ಸಾಗಲಿ ಹಾಗೂ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸಲಾಯಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
