ಶತಮಾನದ ಹಿಂದಿನ ಭಾಷೆ ಕನ್ನಡ. ಕನ್ನಡಕ್ಕೆ ಇದೀಗ ಬೂಕರ್ ಪ್ರಶಸ್ತಿಯ ಗರಿಯೂ ಸೇರಿದೆ. ಅಭಿಜಾತ ಭಾಷೆಯ ಪರಂಪರೆ ಹೊಂದಿರುವ ಇದರ ಮೂಲ ದ್ರಾವಿಡ ಎನ್ನುವುದಿದೆ. ಪೊಟೊದ್ರಾವಿಡಿಯನ್ ಭಾಷಾ ಮೂಲದ್ದು ಇದರಲ್ಲಿ ಸರಿ ಸುಮಾರು ನಲವತ್ತು ಭಾಷೆಗಳು ಕವಲೊಡೆದಿವೆ ಅದರಲ್ಲಿ ಕನ್ನಡವೂ ಒಂದು. ಹೀಗಿರುವಾಗ ಅನ್ಯ ಹೇಳಿಕೆಗಳು ತಪ್ಪು ಅಲ್ಲವೆ? ಈ ಸಂಚನೆ ಕನ್ನಡಕ್ಕೆ ಆಗಿಂದ್ದಾಗ್ಗೆ ಎಡತಾಕುತಿರುತ್ತದೆ. ಕರ್ನಾಟಕ ಏಕೀಕರಣ ಮತ್ತು ಕನ್ನಡದ ವಿಶೇಷತೆಗಳನ್ನು ಅವಲೋಕಿಸುವ ಪ್ರಯತ್ನ ಇದು.
ಭೂಪಟದ ವ್ಯವಸ್ಥೆ ಇಲ್ಲದೆ ಇದ್ದ ಕಾಲದಲ್ಲಿ ಕರ್ನಾಟಕದ ಬಗ್ಗೆ ಸ್ಪಷ್ಟಚಿತ್ರಣ ಮೂಡಿಸಲು ನಮ್ಮ ಹಿರಿಯರು ಹೇಳುತ್ತಿದ್ದ ಬಗೆ ಎಂತಹವರಲ್ಲಿಯೂ ರೋಮಾಂಚನ ತರಿಸುತ್ತದೆ. ನಮ್ಮ ಎಡಗಾಲನ್ನು ಎತ್ತಿ ಒಂದೆಡೆ ಇರಿಸಿದರೆ ನಿಮ್ಮ ಪಾದದ ಹೆಬ್ಬೆಟ್ಟು ಬೀದರನ್ನು ಸೂಚಿಸುವುದಾದರೆ ಕಿರುಬೆರಳು ಕೊಲ್ಲಾಪುರವನ್ನು ಸೂಚಿಸುತ್ತದೆ. ಹೆಬ್ಬೆಟ್ಟಿಗೆ ಕೆಳಭಾಗ(ಉಳಿದಭಾಗ) ಮಡಕಶಿರ ಅನಂತಪುರವನ್ನು ಸೂಚಿಸುತ್ತದೆ. ಕಿರುಬೆರಳಿನಿಂದ ಮೊದಲುಗೊಂಡು ಹಿಮ್ಮಡಿಯನ್ನು ಸುತ್ತುವರಿದ ಭಾಗ ಸಹ್ಯಾದ್ರಿಪರ್ವತ ಶ್ರೇಣಿ ನದ-ನದಿಗಳನ್ನು ಸೂಚಿಸುತ್ತದೆ. ಎಂತಹ ಅದ್ಭುತ ಕಲ್ಪನೆ ಆಲ್ಲವೇ…!
ಇಪ್ಪತ್ತೆರಡು ಭಾಗಗಳಲ್ಲಿ ಹರಿದುಚೂರಾಗಿದ್ದ ಈ ನೆಲವನ್ನು ಕರ್ನಾಟಕ ಎಂಬ ಹೆಸರಿನಡಿತರಲು ನಮ್ಮ ನಾಯಕರು ಪಟ್ಟಶ್ರಮ ನಿಜಕ್ಕೂ ಶಾಘ್ಲನೀಯ. ಕರ್ನಾಕ ಏಕೀಕರಣಗೊಂಡು ಏಕೀಕೃತಗೊಂಡಕರ್ನಾಟಕದಲ್ಲಿ ಕನ್ನಡಿಗರು 66ನೇ ವಸಂತಕ್ಕೆ ಕಾಲಿರಿಸಿದ್ದೇವೆ. ೧೯೦೫ರ ವೇಳೆಯಲ್ಲಿ ‘ಅಖಂಡಕರ್ನಾಟಕ’ ಒಂದು ಕನಸೇ ಆಗಿತ್ತು. ‘ರಾಷ್ಟ್ರೀಯತೆ’ ಹಾಗು ‘ಪ್ರಾದೇಶಿಕತೆ’ ಎಂಬೆರಡು ಜಾಗೃತಿಯಿಂದ ಆವಿರ್ಭವಿಸಿರುವಂತಹದ್ದೆ ಕರ್ನಾಟಕ.
‘ಏಕೀಕರಣ ಎಂಬ ಬೀಜ ಮೊಳೆಯಲು ಕಾರಣೀಭೂತವಾದ ಒಂದೆರಡು ಘಟನೆಗಳನ್ನು ಇಲ್ಲಿ ಹಂಚಿಕೊಳ್ಳುವ ಬಯಕೆ ನನ್ನದು. ಮೊದಲಿಗೆ ಕನ್ನಡ ಕುಲಪುರೋಹಿತ ಎಂದೇ ನಾವು ಕರೆಯುವ ಆಲೂರು ವೆಂಕಟರಾಯರ ಕುರಿತ ವಿಚಾರ, ಸ್ವಾಭಿಮಾನ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದಾಗ ಮಹಾರಾಷ್ಟ್ರಕ್ಕೆ ಮರಾಠಿಗರಿಗೆ ತಿಲಕರಂಥ ನಾಯಕರು, ಗುಜರಾತ್ಗೆ ಗುಜರಾತಿ ಭಾಷೆಗೆ ಸರ್ದಾರ ಪಟೇಲರು, ಬಂಗಾಳಕ್ಕೆ ಬಿಪಿನ್ ಚಂದ್ರಪಾಲ್ ಇದ್ದಾರೆ ಆದರೆ ಕರ್ನಾಟಕಕ್ಕೆ ಅಂತಹ ನಾಯಕರು ಇಲ್ಲವಲ್ಲ ಎಂಬ ಕೊರತೆಯನ್ನು ಮನಗಾಣುತ್ತಾರೆ. ಅವರೇ ಒಂದೆಡೆ ಬರೆದುಕೊಳ್ಳುವಂತೆ ಕೀರ್ತಿಕಾಮನೆಯ ಒಳನೋಟ ಸಿಕ್ಕರೂ ರಾಷ್ಟ್ರೀಯ ನಾಯಕನಾಗಿ ಹೆಸರು ಮಾಡದೆ ಕರ್ನಾಟಕಏಕೀಕರಣ ಅದರ ಅಗತ್ಯತೆಯನ್ನು ಗ್ರಹಿಸಿ ಹೋರಾಟ ಸನ್ನದ್ಧನಾದೆ ಎನ್ನುತ್ತಾರೆ. ತೆಲುಗರು ಪ್ರತಾಪರುದ್ರದೇವನನ್ನು, ಮರಾಠಿಗರು ಶಿವಾಜಿಯನ್ನು ಹೇಳುವಂತೆ ಕನ್ನಡಿಗರು ವಿಜಯನಗರದ ಶ್ರೀ ಕೃಷ್ಣದೇವರಾಯನನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ಅವರೇ ಖುದ್ದಾಗಿ ಹೋಗಿ ಸ್ಥಳ ವೀಕ್ಷಣೆ ಮಾಡಿ ಅಧ್ಯಯನ ನಡೆಸಿ ‘ಕರ್ನಾಟಕಗತವೈಭವ’ ಎಂಬ ಪುಸ್ತಕ ಬರೆಯುತ್ತಾರೆ. ಇಲ್ಲಿ ಈ ಕೃತಿಯಲ್ಲಿ ವೆಂಕಟರಾಯರು (ಪುಟ ೩೧) ಸಾತ್ವಿಕಾಹಂಕಾರದ ಕುರಿತು ಹೇಳುತ್ತಾರೆ. ಕನ್ನಡಿಯಲ್ಲಿ ನಮ್ಮ ಮುಖ ಕಾಣಿಸಬೇಕೆಂದರೆ ಅದು ಸ್ವಚ್ಛವಾಗಿರಬೇಕು ಹಾಗೆಯೇ ಇಂತಹ ಕನ್ನಡ, ನಾಡು, ನುಡಿ ಎಂಬ ಉದಾತ್ತ ಕಲ್ಪನೆಗಳು ನಮ್ಮಲ್ಲಿ ಮೂಡಬೇಕಾದರೆ ನಮ್ಮ ಮನಸ್ಸು ಶುದ್ಧವೂ ಸಾತ್ವಿಕಾಹಂಕಾರದಿಂದೊಡಗೂಡಿಸಬೇಕೆಂದು ಉತ್ತಮ ಸಂದೇಶವನ್ನು ಕನ್ನಡಿಗರಿಗೆ ನೀಡುತ್ತಾರೆ. ಎರಡನೆಯದಾಗಿ ಏಕೀಕರಣದ ಸಂದರ್ಭದಲ್ಲಿ ನಾವು ಹೇಳುವ ವಿರಳಾತಿವಿರಳ ಹೆಸರುಎಂದರೆ ಅಗರಕುಂಟೆ ಶಂಕರಪಾಟೀಲರದ್ದು. ಈತ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದ್ದ ಕಾಲಕ್ಕೇ ಖಾಸಗಿ ಶಾಲೆಯನ್ನು ತರೆಯಲು ಸಂಕಲ್ಪಿಸಿ ಅರ್ಜಿಯೊಂದನ್ನು ಆಡಳಿತಾಧಿಕಾರಿಯ ಕೈಗೆ ನೀಡಿದರೆ ಆತಕೇವಲ ಮರಾಠಿ ಮತ್ತು ಇಂಗ್ಲೀಷ್ ಭಾಷೆ ಬಲ್ಲವನಾದ್ದರಿಂದ ಕೆಲಸ ಕೈಗೂಡುವುದಿಲ್ಲ. ಮೇಲಾಗಿ ಪಾಟೀಲರಿಗೆ ಇಂಗ್ಲೀಷ್ ಭಾಷೆಯೂ ತಿಳಿದಿರುವುದಿಲ್ಲ, ಅಲ್ಲಿ ಭಾಷಾ ಸಮಸ್ಯೆ ಎದುರಾಗುತ್ತದೆ. ಆ ಕ್ಷಣದಲ್ಲಿ ಅಗರಕುಂಟೆ ಶಂಕರನಾರಾಯಣರ ಮನಸ್ಸಿನಲ್ಲಿ ಮೂಡುವುದೇ ಆಡಳಿತ ಭಾಷೆಕನ್ನಡವಾಗಬೇಕೆಂಬ ಹಂಬಲ ನಿರ್ಧಾರ ಆ ನಿಟ್ಟಿನಲ್ಲಿ ಅವರು ಹೋರಾಟ ಪ್ರವೃತ್ತರಾಗುತ್ತಾರೆ. ಅಷ್ಟೆ ಏಕೆ ಸರ್ಥಾಮಸ್ ಮನ್ರೋ ಸಹ ನಾನು ನೀಡಿದ ವರದಿ ತಪ್ಪು ಸ್ಥಳಿಯ ಭಾಷೆ ಕನ್ನಡ ಆಡಳಿತ ಭಾಷೆಯಾಗಬೇಕೆಂಬ ಹೇಳಿಕೆಯನ್ನು ದಾಖಲಿಸುತ್ತಾನೆ.
ಏಕೀಕರಣದ ಹೋರಾಟಕ್ಕೆ ಮಹತ್ವ ಇರುವ ಹೋರಾಟ ಎಂದರೆ ೧೯೫೩ ಏಪ್ರಿಲ್ ೨೩ ರಂದು ನಡೆದ ಉಪವಾಸ ಸತ್ಯಾಗ್ರಹ. ಅಗರಕುಂಟಿಯವರು ಹುಬ್ಬಳ್ಳಿಯ ಇಂದಿನ ನೆಹರು ಮೈದಾನ (ಅಂದಿನ ಗುಳಕವ್ವ ಮೈದಾನ) ದಲ್ಲಿ ೨೩ ದಿನಗಳ ಉಪವಾಸ ಸತ್ಯಾಗ್ರಹಕೈ ಗೊಮಡಿರುತ್ತಾರೆ. ಸತ್ಯಾಗ್ರಹದ ತೀವ್ರತೆಯನ್ನು ಅರಿತ ಶ್ರೀಮತಿ ಜಯದೇವಿ ತಾಯಿ ‘ಲಿಗಾಡೆ’ (ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ) ಹೋರಾಟ ನಿಲ್ಲಿಸಲು ರಕ್ತದಲ್ಲಿ ಕಾಗದ ಬರೆದು ತಲುಪಿಸುತ್ತಾರೆ. ಮೈದಾನದಲ್ಲಿ ಹೋರಾಟತೀವ್ರ ಸ್ವರೂಪ ಪಡೆದುಕೊಂಡು ಲಾಠಿಪ್ರಹಾರವೂ ಸಂಭವಿಸುತ್ತದೆ. ಆ ಹೋರಾಟತೀವ್ರತೆಯು, ತೀಕ್ಷ್ಣತೆಯು ಕರ್ನಾಟಕದ ಕಾಂಗ್ರೆಸ್ಸಿಗರು ನೆಹರುರವರಲ್ಲಿ ಏಕೀಕರಣದ ಬೇಡಿಕೆಯನ್ನು ಬಲವಂತವಾಗಿ ಮಂಡಿಸಲು ಸಹಾಯವಾಗುತ್ತದೆ. ’ದಾರ್’ಸಮಿತಿರಚನೆಯಾದ ಬಳಿಕ ಮೊದಲು ಆಂಧ್ರಪ್ರದೇಶ ನಂತರ ೧೯೫೬ ನವಂಬರ್ ೧ ರಂದು ಕರ್ನಾಟಕ ಏಕೀಕರಣವಾಗುತ್ತದೆ. ೧೯೭೩ರಲ್ಲಿ ಮೈಸೂರುರಾಜ್ಯದ ಬದಲಿಗೆ ‘ಕರ್ನಾಟಕ’ ಎಂಬ ಹೆಸರು ನಾಮಕರಣವಾಗುತ್ತದೆ. ‘೧೯೧೫ರ ಅವಧಿಯಲ್ಲೇ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡಕ್ಕೆ ಮೂರ್ತಸ್ವರೂಪ ಕರುಣಿಸಿದವರು ಸರ್.ಎಂ. ವಿಶ್ವೇಶ್ವರಯ್ಯನವರು ಅವರನ್ನು ಕನ್ನಡಿಗರು ಮರೆಯಲು ಸಾಧ್ಯವೇ?
ಕರುನಾಡು ಎಂದರೆಎತ್ತರದ ನಾಡು ಎಂದರ್ಥ(ಸಮುದ್ರದ ಮಟ್ಟದಿಂದ ೧,೫೦೦ ಅಡಿಗಳಷ್ಟು ಎತ್ತರವಿರುವ ನಾಡುಕರ್ನಾಟಕ) ಕನ್ನಡ ಮನಸ್ಸುಗಳನ್ನು ಒಂದುಗೂಡಿಸಿ ಒಳ್ಳೆಯ ಆಶಯಗಳಿಂದ ಹೆಜ್ಜೆ ಹಾಕಿದ ಕನ್ನಡನಾಡು ಇಂದಿಗೂ ಸಂತೃಪ್ತಿ, ಸಮೃದ್ಧಿಯಿಂದ ದೂರವೇ ಉಳಿದಿದೆ. ನೆರೆಹೊರೆಯ ಭಾಷೆಗಳಿಂದ ಮೊದಲುಗೊಂಡು ಪಡುವಣನಾಡಿನ ದೈತ್ಯ ಇಂಗ್ಲೀಷ್ ಎದಿರು ಅಸ್ತಿತ್ವ ಉಳಿಸಿಕೊಳ್ಳಲು ಕನ್ನಡ ಇಂದು ತಿಣುಕಾಡುತ್ತಿದೆ. ರಾಷ್ಟ್ರಕವಿ ಕುವೆಂಪು ಅವರುತಮ್ಮ ಮೊದಲಮಗ ತೇಜಸ್ವಿಯವರಿಗೆ ಚೆನ್ನಾಗಿ ಇಂಗ್ಲೀಷ್ ಕುರಿತು ಕನ್ನಡದಲ್ಲಿ ಅಗಾಧ ಕೆಲಸ ಸಾಧಿಸುವ ಸಾಧ್ಯತೆಯ ಬಗ್ಗೆ ತಿಳಿವಳಿಕೆ ಹೇಳಿದ್ದರಂತೆ ಹಾಗಾಗಿ ನುಡಿತಂತ್ರಾಂಶಕ್ಕೆ ತೇಜಸ್ವಿಯವರ ಕೊಡುಗೆಯೂ ಇರುವುದು. ಕನ್ನಡದ ಬೆಳವಣಿಗೆಗೆ ಪೂರಕವಾಗಬಹುದಾದ ಸರಕನ್ನುಅನ್ಯ ಭಾಷೆಯಿಂದ ಎರವಲು ಪಡೆಯುವುದು ತಪ್ಪಲ್ಲ ಅಲ್ಲವೇ ಉದಾಹರಣಗೆ ವಾಟ್ಸ್ಪ್, ಪೇಸ್ಬುಕ್ ಬ್ಲಾಗ್ಗಳ ತಂತ್ರಜ್ಞಾನದ ಹೂರಣವೇ ಇವುಗಳನ್ನು ಕನ್ನಡ ಭಾಷೆಗೆಅದರ ಏಳಿಗೆಗ ಅವುಗಳನ್ನು ಅಭರಣಗಳಂತೆ ಬಳಸಿಕೊಂಡಲ್ಲಿ ತಪ್ಪಿಲ್ಲ ಅಲ್ಲವೆ.? ಒಟ್ಟಂದದಲ್ಲಿ ಕನ್ನಡಕಟ್ಟುವ ಕೆಲಸ ಪಡೆಯಬೇಕು ಅಷ್ಟೆ.
ಕನ್ನಡಕ್ಕೆ ಬಂದೊದಗುತ್ತಿರುವ ಅಪಾಯದ ಕುರಿತು ಬೇಂದ್ರೆ ೧೯೨೫ರಲ್ಲಿ ‘ಕನಸಿನೊಳಗೊಂದು ಕನಸು’ ಎಂಬ ಕವಿತೆ ಬರೆದಿರುವರು ಇಂದಿನ ಜಾಗತೀಕರಣ ಸ್ಥಿಯಲ್ಲಿ ಇಂಗ್ಲೀಷ್ ಬೇಡವೆನ್ನುವುದು ಮೂರ್ಖತನ. ಆದರೆಈ ಇಂಗ್ಲೀಷ ದೇಶಿಯ ಭಾಷೆಗಳಿಗೆ ಪೂತನಿಯಂತೆ ವಿಷವುಣಿಸಿ ನಾಗಲೋಟದಿಂದ ಸಾಗುತ್ತಿರುವುದು ಆತಂಕದ ವಿಷಯ.
ಮೊದಲು ನಮ್ಮ ಅದ್ಯತೆ ನಮ್ಮ ತಾಯ್ನುಡಿಗಿರಬೇಕು ಅಷ್ಟೆ. ತಾಯಿ ಮಕ್ಕಳನ್ನು ಸಾಕುವಂತೆ ತಾಯ್ತನ ಮರೆಯುವಂತೆ ಮಲತಾಯಿ ಇರಲು ಸಾಧ್ಯವೇ. ಅಮ್ಮ ಅಮ್ಮನೇ ಅಲ್ಲವೆ. ಹಾಗಾಗಿ ತಾಯಿಭಾಷೆ ಕನ್ನಡಕ್ಕೆ ನಮ್ಮ ಆದ್ಯತೆಯಿರಬೇಕು. ತಾಯಿನುಡಿ ಕಲಿಸುವಷ್ಟು ಸರಳವಾಗಿ ಬೇರೆ ಭಾಷೆ ಕಲಿಸಲಾರದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದರಂತೆಯೆ ನಮ್ಮ ಮಕ್ಕಳಿಗೆ ಕನ್ನಡದಲ್ಲಿ ಓದಲು ಬರೆಯಲು ಕಲಿಸುವುದು ನಮ್ಮ ಆಧ್ಯಕರ್ತವ್ಯವಾಗಬೇಕು. ಇಲ್ಲವಾದರೆ ನಮ್ಮ ಮಕ್ಕಳು I know kannada but I don”t know how to read and write ಎಂದು ಹೆಚ್ಚುಗಾರಿಕೆಯಿಂದ ಹೇಳಿಕೊಳ್ಳುವ ಅಪಾಯದ ಸ್ಥಿತಿಯನ್ನು ತಲುಪಬೇಕಾಗುತ್ತದೆ.
ಕರ್ನಾಟಕ ಎಂದರೆ ಇಂದಿಗೆ ಮಿನಿ (ಪ್ರಪಂಚ) ವಿಶ್ವಾವಾಗಿದೆ. ಬಂದವರೆಲ್ಲ ಅವರವರ ಭಾಷೆ ಸಂಸ್ಕೃತಿಯನ್ನು ಇಲ್ಲಿ ಬಲವಂತವಾಗಿ ಸ್ಥಾಪಿಸುತ್ತಿದ್ದಾರೆ. ಕನ್ನಡಿಗರೂ ಅವರ ಭಾಷೆಯಲ್ಲಿಯೇ ಅನಿವಾರ್ಯವಾಗಿ ವ್ಯವಹರಿಸಬೇಕಾದ ಅಪಾಯ ಬಂದಿದೆ. ದಾರಿಹೋಕ! ಇರಲಿ! ಇದ್ದುಕೊಳ್ಳಲಿ! ಎಂದು ಜಗುಲಿ ಬಿಟ್ಟುಕೊಟ್ಟರೆ ಬೆಳಗೆದ್ದು ಆ ದಾರಿ ಹೋಕ ಇದೇ ಮನೆಯೇ ನನ್ನದು ಎಂದು ಹಕ್ಕು ಸ್ಥಾಪಿಸುವ ಮನಸ್ಥಿತಿ ಕನ್ನಡಕ್ಕಿದೆ ಇಂದು.
ಕನ್ನಡ ನಾಡು ನುಡಿ ನಮ್ಮದು ಇಂಗ್ಲೀಷ್ ದೂರದ ಪಡುವಣ ನಾಡಿನದ್ದು ತಾನು ಹೋದಲ್ಲೆಲ್ಲ ಸ್ಥಳಿಯ ಭಾಷೆಯನ್ನು ತನ್ನ ಅಧಿಪತ್ಯ ಸಾಧಿಸಿದೆ. ಇಂತಹ ಬಡಪೆಟ್ಟಿಗೆ ಒಗ್ಗದವರು ಎಂದರೆ ಫ್ರೆಂಚರು, ಜರ್ಮನ್ನರು ಕಾರಣ ಅವರಲ್ಲಿ ಸಾಂಸ್ಕೃತಿಕ ಮಮತೆಯಿದೆ ಐಕ್ಯತೆಯಿದೆ. ಆ ವಿಚಾರದಲ್ಲಿ ಕನ್ನಡ ನೆಲಕ್ಕೆ ಅಂತಹ ಕೊರತೆಯಿಲ್ಲ ಗ್ರೀಕ್ ಪ್ರಹಸನಗಳಲ್ಲಿ ಕನ್ನಡ ಭಾಷೆಯ ಪದಗಳನ್ನು ಉಲ್ಲೇಖ ಮಾಡಿಕೊಂಡಿರುವ ಉದಾಹರಣೆಯಿದೆ. “ಕಾವೇರಿಯಿಂದಮಾಗೋದಾವರಮಿರ್ದ” ನಾಡು ಎನ್ನುತ್ತಾರೆ “ಭಾದಿಪ್ಪಕಲಿಯುಗ ವಿಪರೀತನ್” ಎಂಬ ಶಾಸನದ ಸಾಲಿನ ಉಲ್ಲೇಖಕನ್ನಡಿಗರ ಸಾಹಸಕ್ಕೆ ಕನ್ನಡಿಯಂತಿದೆ.
ಇಷ್ಟೆಲ್ಲಾ ಇದ್ದರೂ‘ನುಡಿಯಲೆತ’ (ಪೂರ್ವಜರ ಭಾಷೆಯಿಂದ ದೂರವಾಗಿ ಬೇರೆ ಭಾಷೆಯತ್ತ ಸರಿಯುವುದು) ನುಡಿಯಳಿಕೆ (ತಮ್ಮದಲ್ಲದ ಭಾಷೆ ಹೆಚ್ಚು ಬಳಸುತ್ತ ಬೆಳೆಯುವುದು) ಎಂಬ ಪರಿಭಾಷೆಗಳು ಕನ್ನಡಕ್ಕೆ ಭಾರಿ ಹೊರೆಯಾಗಿದೆ. ಕರ್ನಾಟಕ ಎಂದರೆ ಸುಂದರ ವರ್ಣರಂಜಿತ ಪುಸ್ತಕ ಕಾಲಕ್ಕೆ ಬದಲಾವಣೆಗೆಅನ್ಯ ಭಾಷೆಯ ಸೆಳೆತಕ್ಕೆ ಸಿಲುಕಿ ಒಂದೊಂದೆ ಹಾಳೆಗಳನ್ನು ಕಳಚಿಕೊಳ್ಳುತ್ತಿದೆ. ಬದ್ಧತೆಯಿರುವ ನಾವು ಕನ್ನಡಿಗರು ಹರಿದ ಹಾಳೆಗಳನ್ನು ಕರ್ನಾಟಕ ಎಂಬ ವರ್ಣರಂಜಿತ ಪುಸಕಕ್ಕೆ ಮರುಜೋಡಣೆ ಮಾಡುವುದರೊಂದಿಗೆಇನ್ನಷ್ಟು ಸಾಧನೆ ಎಂಬ ವರ್ಣರಂಜಿತ ಹಾಳೆಗಳನ್ನು ಸೇರಿಸಬೇಕಾಗಿದೆ. ರಾಜಕೀಯ ಇಚ್ಛಾಶಕ್ತಿ, ಕನ್ನಡ ಪರ ಕೆಲಸಗಳಲ್ಲಿ ಬದ್ಧತೆಎರಡುಇದ್ದರೆ ಕನ್ನಡಿಗರು ಕರ್ನಾಟಕದಲ್ಲಿ ಸಾರ್ವಭೌಮರು.
ಕನ್ನಡ ನೆಲದ ಅನನ್ಯತೆಯ ಪ್ರಮುಖಾಂಶಗಳು
- ಕ್ರಿಸ್ತ ಶ 450ರಲ್ಲಿ ರಚಿತವಾದ ಕನ್ನಡ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನ.
- ಕನ್ನಡದ ಬಗೆಗಿನ ಪ್ರಾಚೀನ ಬರಹ ದಾಖಲೆ ಎಂದರೆ ಅಶೋಕನ ಬ್ರಹ್ಮಗಿರಿ ಶಾಸನ
- ಕನ್ನಡ ಎರಡು ಸಾವಿರ ಹಳೆಯದಷ್ಟೆ ಅಲ್ಲ ನೀವು ಮಾತನಾಡುವುದನ್ನ ಬರೆಯಬಹುದು, ಬರೆದುದ್ದನ್ನು ಓದಲುಬಹುದಾದ ಭಾಷೆ ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಇಲ್ಲ.
- ಯಾವಾಗ ಕವಿರಾಜಮಾರ್ಗದಲ್ಲಿ ಕಾವೇರಿಯಿಂದಗೋದಾವರಿಗಿರ್ಪ ಎಂದು ಹೇಳಿದಾಗ ಇಂಗ್ಲೀಷ್ ಇನ್ನು ಶೈಶವಾವಸ್ಥೆಯಲ್ಲಿತ್ತು
- ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಈ ಕನ್ನಡಿಗರ್ (ಯಾವುದನ್ನು ಕುರಿತು ಓದದ ಅವಿದ್ಯಾವಂತರು ಕಾವ್ಯ ಬರೆದು ಪ್ರಯೋಗ ಮಾಡುವಷ್ಟು ಬುದ್ದಿವಂತರು). ಈ ಮಾತನ್ನು ಸಾವಿರ ವರ್ಷಗಳ ಹಿಂದೆಯೇ ಅಮೋಘವರ್ಶನ ಕವಿರಾಜಮಾರ್ಗದಲ್ಲಿಯೇ ಹೇಳಲಾಗಿದೆ.
- ವಿದೇಶಿಯನೊಬ್ಬನಿಂದ ಶಬ್ದಕೋಶದ ರಚನೆಯಾಗಿರುವುದು ಕನ್ನಡದಲ್ಲಿ ಮಾತ್ರ. ಜರ್ಮನಿಯ ರೆವೆರಂಡ್ ಎಫ್ ಕಿಟ್ಟೆಲ್ 1894ರಲ್ಲಿ ಭಾರತೀಯ ಉಪಖಂಡದ ಇತಿಹಾಸ ಭಾಷೆ ಸಂಸ್ಕೃತಿಗಳನ್ನು ಅಧ್ಯಯನ ಮಾಡಲು ಕನ್ನಡವನ್ನು ಅರಿಸಿಕೊಂಡು ನಿಘಂಟು ರಚಿಸಿದರು.
- ಪ್ರಜಾಪ್ರಭುತ್ವದ ಕಲ್ಪನೆ ಮೊದಲು ಬಂದದ್ದು ವಚನ ಸಾಹಿತ್ಯದಲ್ಲಿ
- ಅಂಕಿಗಳು ವರ್ಣಮಾಲೆಯನ್ನು ಆಧರಿಸಿರುವ ಭಾಷೆ ಕನ್ನಡ.
- ರಗಳೆ ಮತ್ತು ಷಟ್ಪದಿ ಸಾಹಿತ್ಯ ಎಂಬುದು ಕನ್ನಡದಲ್ಲಿ ಮಾತ್ರ ಕಾಣಬಹುದಾದ ವಿಶಿಷ್ಟ ಹಾಗು ಅಪರೂಪವಾದ ಸಾಹಿತ್ಯವಾಗಿದೆ.
- ಕನ್ನಡಕ್ಕೆ 2000 ವರ್ಷಗಳಷ್ಟು ಸುದೀರ್ಘಇತಿಹಾಸವಿರುವ ಕನ್ನಡ ಪ್ರಪಂಚದಲ್ಲಿಯೇ ಪ್ರಾಚೀನ ಭಾಷೆಗಳಲ್ಲಿ ಒಂದು ಅತ್ಯಂತ ಹೆಚ್ಚು ಮಾತನಾಡುವ ಮೂವತ್ತು ಭಾಷೆಗಳಿಲ್ಲಿ ಕನ್ನಡಕ್ಕೆ ಸ್ಥಾನವಿದೆ.
- ಕನ್ನಡ ಪ್ರತಿಶತ ೯೯.೯೯ರಷ್ಟು ವೈಜ್ಞಾನಿಕ ಹಾಗು ತರ್ಕಬದ್ದವಾದ ಭಾಷೆ
- ಎರಡು ಶತಮಾನದ ಹಿಂದೆಯೇ ಗ್ರೀಕ್ ಭಾಷೆಯ ಚಾರಿಯೇಟ್ ಮೈಮ್ ಎನ್ನುವ ನಾಟಕದಲ್ಲಿ ಕನ್ನಡದ ನುಡಿಗಟ್ಟುಗಳನ್ನು ಬಳಸಲಾಗಿತ್ತು
- ಮುಂಬೈ ನಗರದಲ್ಲಿ ಮೊಟ್ಟ ಮೊದಲು ಆಂಗ್ಲ ಗವರ್ನರಿಗೆ ಕೊಡ ಮಾಡಿದ ನಾಗರಿಕ ಸನ್ಮಾನ ಪತ್ರ ಕನ್ನಡದಲ್ಲಿ ನ್ನಡ ಲಿಪಿಯಲ್ಲಿತ್ತು.
- ನೇಪಾಳದ ಪಶುಪತಿನಾಥ ದೇವಾಲಯದ ಪ್ರಮುಖ ಅರ್ಚಕರು ಶೃಂಗೇರಿ ಮೂಲದ ಕನ್ನಡಿಗರು
- ಕನ್ನಡಕ್ಕೆಇದುವರೆಗೂ ಸಂದಿರುವುದು ೮ ಜ್ಞಾನಪೀಠ ಪ್ರಶಸ್ತಿಗಳು (ಬೇರೆಯವುಗಳಿಗೆ ಹೋಲಿಸಿದೆ ಹಿಂದಿ 9, ತೆಲಗು 2, ಮಲಯಾಳಂ 3, ತಮಿಳು 2)
- ಬರೆದ ನಂತರ ಅತ್ಯಂತ ಸುಂದರವಾಗಿ ಕಾಣುವ ವಿಶ್ವದ ಐದು ಭಾಷೆಗಳಲ್ಲಿ ಕನ್ನಡವೂ ಒಂದು ಶ್ರೀಯುತ ವಿನೋಭಾ ಭಾವೆ ಅವರು ಕನ್ನಡವನ್ನು ವಿಶ್ವಲಿಪಿಗಳ ರಾಣಿ ಎಂದು ಹೊಗಳಿದ್ದಾರೆ.
- ಇಂಗ್ಲೀಷ್ಗೆ ತನ್ನದೇ ಆದ ಲಿಪಿ ಇಲ್ಲ ಅದನ್ನೂ ರೋಮನಲ್ಲಿ ಬರೆಯಲಾಗುತ್ತದೆ. ಹಿಂದಿಗೂ ಕೂಡತನ್ನದೆ ಆದ ಲಿಪಿ ಇಲ್ಲ. ಅದನ್ನೂ ಪ್ರಾಚೀನದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ತಮಿಳು ತನ್ನದೇ ಆದ ಲಿಪಿ ಹೊಂದಿದ್ದರೂ ತರ್ಕಬದ್ದವಾಗಿ ಕೆಲವು ಅಕ್ಷರಗಳನ್ನು ಬೇರೆಬೇರೆ ರೀತಿಯಾಗಿ ಉಚ್ಛರಿಸಲಾಗುತ್ತದೆ.
- ದೇವಾಲಯದ ಶಿಲ್ಪಗಳನ್ನೆ ಆಧರಿಸಿ ಕೃತಿರಚನೆಯಾಗಿರುವುದು ಬೇಲೂರಿನ ಶಿಲ್ಪಗಳನ್ನು ಕುರಿತು ಅದು ಡಿವಿಜಿಯವರ ಅಂತಃಪುರಗೀತೆಗಳು.
- ಕುವೆಂಪು ಪಡೆದಿರುವ ಸಾಹಿತ್ಯ ಪ್ರಶಸ್ತಿಗಳನ್ನು ಬೇರಾವ ಭಾರತೀಯ ಸಾಹಿತಿಯು ಪಡೆದಿಲ್ಲ.
- ವಿಕಿಪೀಡಿಯಾ ಲಾಂಛನದಲ್ಲಿ ಕನ್ನಡದ ‘ವಿ’. ಅಕ್ಷರವಿದೆ.
- ತಾಜ್ ಮಹಲ್ ನಂತರ ಅತೀ ಹೆಚ್ಚು ಜನರು ವೀಕ್ಷಿಸುವ ಪ್ರವಾಸಿ ತಾಣ ಕೃಷ್ಣರಾಜೇಂದ್ರ ಒಡೆಯರು ನಿರ್ಮಿಸಿದ ಮೈಸೂರು ಅರಮನೆ
- ಭಾರತೀಯ ಶಿಲ್ಪ ಕಲೆಯ ತೊಟ್ಟಲು ಎಂದು ಕರೆಸಿಕೊಂಡಿರುವ ಬಾದಾಮಿ ಐಹೊಳೆ ಪಟ್ಟದಕಲ್ಲು ಕರ್ನಾಟಕದಲ್ಲಿದೆ.
- ಬ್ರಿಟಿಷ್ ಸರಕಾರಕ್ಕೆ ದಕ್ಷಿಣ ಭಾರತದಲ್ಲಿ ಆದಾಯ ತೆರಿಗೆ ಪಾವತಿಸಿದ ಮಹಿಳೆ ಬೆಂಗಳೂರು ನಾಗರತ್ನಮ್ಮ ಕನ್ನಡದವರು.
- ನಾಯಕ ನಟನಾಗಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾರತದ ಏಕೈಕ ನಟ ಡಾ. ರಾಜಕುಮಾರ್
- ನೀರಿನೊಳಗೆ ಮೊದಲ ಬಾರಿಗೆ ಚಿತ್ರೀಕರಿಸಿದ ಚಲನಚಿತ್ರ ಒಂದು ಮುತ್ತಿನ ಕಥೆ
- ಅತೀ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಸ್ತಾಪಿಸಿದ ಕೀರ್ತಿ ಕರ್ನಾಟಕದ್ದು ಹಾಗಾಗಿ ಕರ್ನಾಟಕವನ್ನು ಭಾರತದ ಬ್ಯಾಂಕಿಂಗ್ ತೊಟ್ಟಿಲು ಎಂದು ಕರೆಯುತ್ತಾರೆ.
- ವಿಶಿಷ್ಟ ಶೈಲಿ ಮತ್ತು ರಂಗಭೂಮಿ ವಿನ್ಯಾಸ ಹೊಂದಿರುವ ವಿಶ್ವದ ಏಕೈಕ ಕಲೆ ಯಕ್ಷಗಾನ ಅದು ಕರ್ನಾಟಕದ ಕರಾವಳಿಯಲ್ಲಿದೆ
- ವಿದ್ಯುತ್ ದೀಪಗಳನ್ನು ಅಳವಡಿಸಿಕೊಂಡ ಏಷ್ಯಾದ ಮೊದಲ ನಗರ ಬೆಂಗಳೂರು
- ಕರ್ನಾಟಕಕ್ಕೆ ಸೇವೆಗೈದ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ರಾಷ್ಟ್ರೀಯ ಇಂಜಿನಿಯರಗಳ ದಿನಾಚರಣೆ ಆಚರಿಸಲಾಗುತ್ತದೆ.
- ಭಾರತದಲ್ಲಿ ಮೊದಲು ಆಕಾಶವಾಣಿಯನ್ನು ಸ್ಥಾಪಿಸಿದ್ದು ಕರ್ನಾಟಕದ ಮೈಸೂರಿಲ್ಲಿ (1936 ಎಂ.ವಿ ಗೋಪಾಲಸ್ವಾಮಿ)
- ಭಾರತೀಯ ಸೇನೆಯ ಮೊದಲ ಕಮಾಂಡರ್ –ಇನ್ –ಚೀಫ್ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ
- ಭಾರತದಲ್ಲಿನ ಎಲ್ಲಾ ಚುನಾವಣೆಗೆ ಬಳಸಲಾಗುವ ಅಳಿಸಲಾಗದ ಕಪ್ಪು ಶಾಯಿಯನ್ನು ತಯಾರಿಸಲು ಅಧಿಕಾರ ಹೊಂದಿರುವ ಕರ್ನಾಟಕದ ಸ್ಥಳ ಮೈಸುರಿನ ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್
- ಭಾರತದ ಅತಿ ದೊಡ್ಡ ಕಚ್ಚಾ ರೇಷ್ಮೆಸೀರೆ ಉತ್ಪಾದನ ಘಟಕ ಕರ್ನಾಟಕದಲ್ಲಿದೆ ಇದಕ್ಕೆ ಜಿ.ಐ. ಟ್ಯಾಗ್ ಕೂಡ ಇದೆ.
- 5G ತಂತ್ರಜ್ಞಾನವನ್ನು ಅಳವಡಿಸಿಕೊಂಡ ಅಂತರಾಷ್ಟ್ರೀಯ ವಿಮಾನನಿಲ್ದಾಣ ಕೆಂಪೇಗೌಡ ವಿಮಾನನಿಲ್ದಾಣ ಕನ್ನಡ ನೆಲದ್ದು.
– ಸುಮಾ ವೀಣಾ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
