ಭಾರತದ ಬ್ರಿಕ್ಸ್ ಕಾರ್ಯತಂತ್ರ: ವೈವಿಧ್ಯತೆಯ ಬೆಸುಗೆ, ಮಾನವಕೇಂದ್ರಿತ ಸಹಭಾಗಿತ್ವದ ಮುನ್ನಡೆ ಮತ್ತು ಬಲವಾದ ಜಾಗತಿಕ ಸಮತೋಲನ
ಈ ದಶಕದ ಭೌಗೋಳಿಕ ರಾಜಕೀಯ ಘಟನಾವಳಿಗಳು ತೀವ್ರ ಪೈಪೋಟಿ, ವ್ಯಾಪಾರ ಯುದ್ಧಗಳು, ತಾಂತ್ರಿಕ ಸಂಘರ್ಷಗಳು, ಹವಾಮಾನ ದುರಂತಗಳು ಹಾಗೂ ವಿಭಜಿತ ಬಾಂಧವ್ಯಗಳ ಸವಾಲುಗಳಿಗೆ ಸಾಕ್ಷಿಯಾಗುತ್ತಿವೆ. ಇಂತಹ ಸಂಕೀರ್ಣ ಸನ್ನಿವೇಶಗಳನ್ನು ಜಾಣ್ಮೆಯಿಂದ ನಿರ್ವಹಿಸಲು ಮತ್ತು ಜವಾಬ್ದಾರಿಯುತ…
