12 10 1836 ರಂದು ಮೆಕಾಲೆ ಇಂಗ್ಲೆಂಡಿನಲ್ಲಿದ್ದ ತನ್ನ ತಂದೆಗೆ ಬರೆದ ಪತ್ರದ ಸಾರಾಂಶ ಇಲ್ಲಿದೆ.
ನಮ್ಮ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ನಾವು ಎಲ್ಲರನ್ನೂ ತಿದ್ದುವುದು ಕಷ್ಟ , ಆದರೆ ನಮ್ಮ ಶಿಕ್ಷಣ ಪದ್ಧತಿ ಮೂಲಕ ಅದ್ಬುತ ಸೃಷ್ಟಿ ಮಾಡಿದ್ದೇವೆ.
ನಮ್ಮ ಶಿಕ್ಷಣ ಪಡೆದ ಯಾವೊಬ್ಬ ಹಿಂದೂವೂ ತನ್ನ ಧರ್ಮಕ್ಕೆ ನಿಷ್ಠೆ ಯಿಂದ ಇರುವುದಿಲ್ಲ. ಇನ್ನು 30 ವರ್ಷ ನಮ್ಮ ಶಿಕ್ಷಣ ಪದ್ಧತಿ ಮುಂದುವರೆದಿದ್ದೆ ಆದರೆ ಭಾರತದಲ್ಲಿ ಯಾವೊಬ್ಬ ಹಿಂದೂವೂ ವಿಗ್ರಹ ಆರಾಧಕ ಆಗಿ ಉಳಿಯುವುದಿಲ್ಲ.
ಜೊತೆಗೆ ನಾನು ತುಂಬಾ ಹರ್ಷದಿಂದ ಹೇಳುತ್ತೇನೆ ಇನ್ನು ಮುಂದೆ ಹಿಂದೂಗಳನ್ನು ಮತಾಂತರ ಮಾಡುವ ಪ್ರಮೇಯ ಬರುವುದಿಲ್ಲ.
ಬ್ರಿಟಿಷರ ಇನ್ನೊಂದು ಅದ್ಬುತ ಕೊಡುಗೆ ಜನರನ್ನು ಧರ್ಮದ ಆಧಾರದ ಮೇಲೆ ಒಡೆದು ಆಳುವುದು.
ಇತ್ತೀಚಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ರೇವಂತ ರೆಡ್ಡಿ, ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ , ಮಾಜಿ ಲೋಕ ಸಭಾ ಸದಸ್ಯ ಡಿ ಕೆ ಸುರೇಶ್ ಅವರ ಹೇಳಿಕೆಗಳನ್ನು ಗಮನಿಸಿದರೆ ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ಪದ್ಧತಿ ತನ್ನ ಉದ್ದೇಶ ಈಡೇರಿಸುತ್ತಿದೆ ಮತ್ತ ಇಂದೂ ಚಾಲ್ತಿ ಯಲ್ಲಿ ಇದೆ.
ರೇವಂತ ರೆಡ್ಡಿ ಹೇಳಿಕೆ ಪ್ರಕಾರ ಭಗವಾನ್ ಶ್ರೀ ರಾಮ್, ಶ್ರೀಮಂತ ಮತ್ತು ಉತ್ತರ ಭಾರತದ ಹಿಂದೂಗಳ ದೇವರು . ಭಗವಾನ್ ಶ್ರೀ ಶಿವ ಬಡವ ಮತ್ತ ದಕ್ಷಿಣ ಭಾರತದ ಹಿಂದೂಗಳ ದೇವರು. ಇದು ನಿಜವಾ ನೋಡೋಣ.
ಕಾಂಗ್ರೆಸ್ ನೇತಾರರು ಸಿದ್ದರಾಮಯ್ಯ ,ಜೈರಾಂ ರಮೇಶ್ ಭಗವಾನ್ ಶ್ರೀ ರಾಮನ ಭಾವಚಿತ್ರಕ್ಕೆ ಅವಮಾನ ಮಾಡಿ ಜೀವನ ಇಡೀ ಶ್ರೀರಾಮನ ವಿರೋಧಿಸಿದ ತಮಿಳುನಾಡಿನ ವ್ಯಕ್ತಿ ರಾಮನ ಹೆಸರು ಇಟ್ಟುಕೊಂಡ ನೇತಾರ ರಾಮಸ್ವಾಮಿ ಪರಿಯಾರ್, ದ್ರಾವಿಡ ಪಕ್ಷದ ಮುಖ್ಯಮಂತ್ರಿ ರಾಮನ ಹೆಸರು ಇಟ್ಟುಕೊಂಡ ವ್ಯಕ್ತಿ ಎಂ ಜಿ ರಾಮಚಂದ್ರನ್ ಇವರಾರೂ ಭಾರತೀಯರಲ್ಲವೇ. ಉತ್ತರ ಭಾರತದ ಹೆಸರಾಂತ ವ್ಯಕ್ತಿಗಳ ಹೆಸರು ಶಿವನ ಹೆಸರಿನಲ್ಲಿ ಇದೆ.
ಗುಜರಾತಿನ ಶಂಕರಸಿಂಘ ವಗೆಲಾ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್,ಪಶ್ಚಿಮ ಬಂಗಾಳದ ಮಾಜಿ ಮಂತ್ರಿ ಸಿದ್ದಾರ್ಥ್ ಶಂಕರ್ ರೈ,ಕಮ್ಯುನಿಸ್ಟ್ ನೇತಾರ ಸೋಮನಾಥ್ ಚಟರ್ಜಿ, ಎಸ್ ಪಿ ನೇತಾರ ಶಿವಪಾಲ್ ಯಾದವ್, ವಕ್ತಾರ ರವಿ ಶಂಕರ್ ಪ್ರಸಾದ್ ಇವರಾರೂ ಭಾರತೀಯರಲ್ಲವೇ.
ದಕ್ಷಿಣ ಭಾರತ ಸೇರಿದಂತೆ ಭಾರತದ ಎಲ್ಲ ಹಿಂದೂಗಳ ಜೀವನದ ಆಸೆ ಒಮ್ಮೆ ಕಾಶೀ ವಿಶ್ವನಾಥ ದೇವಾಲಯ ನೋಡಬೇಕು.
ಭಾರತದ ಹಿಂದೂಗಳಿಗೆ ವಾರಣಾಶಿ ಮೆಕ್ಕಾ ಇದ್ದ ಹಾಗೆ. ಭಾರತದ ಹಿಂದೂಗಳ ಎಲ್ಲ ಮದುವೆಯಲ್ಲಿ ವರನ ಕಾಶಿಯಾತ್ರೆ ಮಾಡಿಸುವ ಪದ್ಧತಿ ಚಾಲ್ತಿಯಲ್ಲಿ ಇದೆ. ದಕ್ಷಿಣ ಭಾರತದ ಅತೀ ಹೆಚ್ಚು ಹಳ್ಳಿಗಳ ಹೆಸರು ರಾಮಪುರ ಆಗಿದೆ.
ದಕ್ಷಿಣ ಭಾರತದ ಅತೀ ಹೆಚ್ಚು ಹಿಂದೂಗಳ ಹೆಸರು ರಾಮಪ್ಪ, ರಾಮಣ್ಣ, ರಾಮಚಂದ್ರ, ರಾಮರಾವ್, ಸೀತಾ, ಜಾನಕಿ.
ಕರ್ನಾಟಕದ ಜನರ ಸಾಮಾನ್ಯ ಬಣ್ಣ ಗೋದಿ ಬಣ್ಣ. ಆದರೆ ಹವ್ಯಕ ಬ್ರಾಹ್ಮಣ ಸಮಾಜದ ಜನರ ಬಹುತೇಕ ಶೇಕಡ 99 ಜನರ ಬಣ್ಣ ಬಿಳಿ, ಹಾಗಂತ ಹವ್ಯಕರು ಕರ್ನಾಟಕದವರು ಅಲ್ಲ ಹೇಳಲು ಸಾಧ್ಯವೇ. ರೆಡ್ಡಿ ಅವರ ಹೇಳಿಕೆ ಮೂರ್ಖತನದ ಪರಮಾವಧಿ.
ಇನ್ನೂ ದೇಶ ವಿಭಜನೆಗೆ ಕಾಂಗ್ರೆಸ್ ಪಕ್ಷ ನಾಯಕರ ಇನ್ನೊಂದು ನುಡಿಮುತ್ತು ನೋಡಿ. ನಮ್ಮ ತೆರಿಗೆ ನಮ್ಮ ಹಕ್ಕು.
ಕರ್ನಾಟಕದ ಒಟ್ಟು ಜಿ ಡಿ ಪಿ ಯಲ್ಲಿ ಬೆಂಗಳೂರಿನ ಜನರ ಕೊಡಿಗೆ ಶೇಕಡ 38 ,ಬೆಂಗಳೂರು ನಗರದ ಜನಸಂಖ್ಯ 1.50 ಕೋಟಿ. ಕರ್ನಾಟಕದ ಒಟ್ಟು ಜನಸಂಖ್ಯೆಯ 7.10 ಕೋಟಿ ಅಂದರೆ ಕರ್ನಾಟಕದ 21 ಶೇಕಡಾ ಬೆಂಗಳೂರು ನಗರ ಜನರು ಕರ್ನಾಟಕ ಜಿ ಡಿ ಪಿ 38 ಕೊಡುತ್ತಿದ್ದೇವೆ, ಹಾಗಾಗಿ ಸಾಕಾರಾರದ ಬಜೆಟ್ ನಲ್ಲಿ 38 ಶೇಕಡ ಹಣ ನಮಗೆ ಕೊಡಿ ಅಂದರೆ ಉಳಿದ ಎಲ್ಲಾ ಸಣ್ಣ ಪುಟ್ಟ ನಗರ ಹಳ್ಳಿಗಳ ಕಥೆ ಏನು. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಎಲ್ಲರಿಗೂ ಗೌರವಯುತ ಬದುಕುವ ಹಕ್ಕು ಇರುವುದರಿಂದ ನಮ್ಮ ತೆರಿಗೆ ನನಗೆ ಕೊಡಿ ಅನ್ನುವುದು ಸಂವಿಧಾನ ವಿರೋಧಿ.
ಈ ವಿಚಾರ ಗೊತ್ತಿದ್ದು ಸಿದ್ದರಾಮಯ ಮತ್ತು ಡಿ ಕೆ ಸುರೇಶ್ ಅವರು ಕರ್ನಾಟಕದ ತೆರೆಗೆ ಕರ್ನಾಟಕಕ್ಕೆ ವಾಪಸು ಕೊಡಿ
ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಹೇಳುವ ಮೂಲಕ ದಕ್ಷಿಣ ಭಾರತದ ರಾಜ್ಯಗಳು ಹೆಚ್ಚು ತೆರಿಗೆ ಕೊಡುತ್ತಿವೆ ದಕ್ಷಿಣ ಭಾರತದ ತೆರಿಗೆ ವಾಪಸು ಕೊಡಿ ಎಂದು ಹೇಳುವ ಮೂಲಕ ಜನರು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಜನರ ಮಧ್ಯ ವೈಮನಸ್ಸು ಮೂಡಿಸಿ ದೇಶ ವಿರೋಧಿ ಕೆಲಸ ಮಾಡುತ್ತಿದ್ದಾರೆ.
ಇದೇನು ಪಭುದ್ಧ ಜನರಿಗೆ ಹೊಸದಲ್ಲ ಏಕೆಂದ್ರೆ ಇವರ ಗುರು ರಾಗಾ ಕೈಯಲ್ಲಿ ಪುಟ್ಟ ಕೆಂಪುಬಣ್ಣದ ನಕಲಿ ಸಂವಿಧಾನ ಪುಸ್ತಕ ಹಿಡಿದು ದಿನ ನಿತ್ಯ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿರುವುದರಿಂದ ತಥಾ ಗುರು ಯಥಾ ಶಿಷ್ಯ ಅಂತಾಗಿದೆ.
ಇಂಥಾ ದೇಶ ವಿರೋಧಿ ವಿಭಜನೆ ಹೇಳಿಕೆ ನೀಡುವ ವ್ಯಕ್ತಿಗಳ ಮೇಲೆ ಸುಪ್ರೀಂ ಕೋರ್ಟು ಸೂ ಮೊ ಟೂ ಪ್ರಕರಣ ದಾಖಲಿಸಬೇಕು ಮತ್ತು ಶೀಘ್ರವಾಗಿ ವಿಚಾರಣೆ ನಡೆಸಿ ಶಿಕ್ಷೆ ನೀಡಬೇಕು.
ಶಂಭುಲಿಂಗಪ್ಪ
ದಾವಣಗೆರೆ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
