ನವದೆಹಲಿ: ಭಾರತದ ಉನ್ನತ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಲಕ್ನೋದ ಐಐಎಂ ಆಡಳಿತ ಮಂಡಳಿ ಅಧ್ಯಕ್ಷರೊಂದಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಮಹತ್ತರ ಮಾತುಕತೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಟಾಟಾ ಸನ್ಸ್ ಲಿಮಿಟೆಡ್ ಅಧ್ಯಕ್ಷರು ಹಾಗೂ ಐಐಎಂ ಲಕ್ನೋದ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಎನ್. ಚಂದ್ರಶೇಖರನ್ ಅವರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಫಲಪ್ರದ ಸಮಾಲೋಚನೆ ನಡೆಸಿದರು.
ಉದ್ಯಮ ಕ್ಷೇತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹ ಟಾಟಾ ಸನ್ಸ್ ಲಿಮಿಟೆಡ್ ಸಾಧನೆಯ ಶಿಖರದಲ್ಲಿದ್ದು, ಉದ್ಯಮ ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ತನ್ನದೇಯಾದ ವಿಶಿಷ್ಠ ಕೊಡುಗೆ ನೀಡುತ್ತ ಬಂದಿದೆ.
ಇಂದು ದೆಹಲಿಯಲ್ಲಿ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಮತ್ತು ಟಾಟಾ ಸನ್ಸ್ ಲಿಮಿಟೆಡ್ ಅಧ್ಯಕ್ಷರ ಭೇಟಿ, ಸಮಾಲೋಚನೆ ಮಹತ್ವ ಪಡೆದುಕೊಂಡಿದೆ.
ತಮ್ಮನ್ನು ಭೇಟಿ ಮಾಡಿದ ಖ್ಯಾತ ಉದ್ಯಮೀ, ಶಿಕ್ಷಣ ತಜ್ಞ ಚಂದ್ರಶೇಖರ್ ಅವರೊಂದಿಗೆ ಪ್ರಸ್ತುತ ಶಿಕ್ಷಣ ಕ್ಷೇತ್ರದ ಬಗ್ಗೆ ಪರಸ್ಪರ ಚರ್ಚೆ ನಡೆಸಿದ ಸಚಿವ ಪ್ರಲ್ಹಾದ ಜೋಶಿ ಅವರು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಸಶಕ್ತಗೊಳಿಸುವ ನಿಟ್ಟಿನಲ್ಲಿ ಮೌಲ್ಯಯುತವಾದ ಸಲಹೆ – ಸೂಚನೆಗಳನ್ನು ಹಂಚಿಕೊಂಡರು.
ಈ ವೇಳೆ ಉಭಯ ನಾಯಕರು ಉನ್ನತ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾಗಿ ನಾವೀನ್ಯತೆ ಮತ್ತು ಸಂಶೋಧನಾಧಾರಿತವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಯುವ ಜನರು ತಮ್ಮ ಜ್ಞಾನವನ್ನು ಭಾರತದ ಸುಸ್ಥಿರ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ವಿಸ್ತೃತವಾಗಿ ಚರ್ಚಿಸಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
