ಬೀದರ್, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿದ ಪ್ರಾಚೀನ ಭಾರತ ಸಾಧನ ಯಾತ್ರೆ ಕಾರ್ಯಕ್ರಮ.
ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪಮಂತ್ರದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ನಾಗೇಶ್ ರೆಡ್ಡಿ, ಸಂಸ್ಥೆಯ ಉಪಾಧ್ಯಕ್ಷರು, ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಆತ್ಮಗೌರವವನ್ನು ಬೆಳೆಸಿಕೊಳ್ಳುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ನಮ್ಮ ಪೂರ್ವಜರ ಆಚಾರ-ವಿಚಾರಗಳ ಬಗ್ಗೆ ಆಳವಾಗಿ ತಿಳಿದುಕೊಂಡು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರ ಆಲೋಚನೆಗಳನ್ನು ವಾರಸುದಾರರಾದ ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ಇಳಿಸುವ ಪ್ರಯತ್ನ ಮಾಡಬೇಕು. ಅರ್ಥಮಾಡಿಕೊಂಡು ಗೌರವದ ಜೀವನ ನಡೆಸಬೇಕು. ದೇಹ, ಮನಸ್ಸು, ಸಮರ್ಪಣೆಯೊಂದಿಗೆ ಭಾರತದ ಭವಿಷ್ಯವನ್ನು ಭದ್ರಗೊಳಿಸುವ ಪ್ರಯತ್ನ ನಮ್ಮದಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಶ್ರೇಷ್ಠ ವಿಚಾರ, ಗುರಿಯನ್ನು ಇಟ್ಟುಕೊಂಡು ಸಂಪೂರ್ಣ ಏಕಾಗ್ರಚಿತ್ತದಿಂದ ಪಾಲ್ಗೊಳ್ಳಬೇಕೆಂದು ಹೇಳಿದರು.
ಮುಖ್ಯ ಅತಿಥಿ ಸೂರ್ಯಕಾಂತ್ ಮಠಪತಿ, ಜ್ಞಾನಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾತನಾಡಿ ನಮ್ಮ ಹಿಂದೂ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ, ಸದೃಢ ಭಾರತವನ್ನು ಹೇಗೆ ಕಟ್ಟಬೇಕು ಎಂಬ ವಿಚಾರಗಳು ಈ ಶಾಲೆಯಲ್ಲಿ ಮುಂದುವರಿಯುತ್ತಿವೆ ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ತಮಗೆ ಕೊಟ್ಟ ವಿಷಯದ ಬಗ್ಗೆ 7 ನಿಮಿಷಗಳ ಕಾಲ ಮಂಡನೆ ಮಾಡಿದರು. ಪ್ರದರ್ಶನವು ವಿದ್ಯಾರ್ಥಿಗಳಿಂದ ಚಕ್ರಾಕಾರದಲ್ಲಿ ನಡೆಯಿತು. 35 ವಿದ್ಯಾರ್ಥಿಗಳು ಉತ್ಕೃಷ್ಟವಾಗಿ ವಿಷಯವನ್ನು ಪ್ರಸ್ತುತಪಡಿಸಿದರು. ಪ್ರದರ್ಶನ ಹಾಗೂ ವಿದ್ಯಾರ್ಥಿಗಳ ವಿಷಯ ವಿಶ್ಲೇಷಣೆಯನ್ನು ಗಮನಿಸಿ, ಆಗಮಿಸಿದ ಗಣ್ಯರು ಶಾಲೆಯ ಶಿಸ್ತು, ವಿದ್ಯಾರ್ಥಿಗಳ ಕಾರ್ಯಚಟುವಟಿಕೆ ಹಾಗೂ ಅವರ ಭೌತಿಕ ಮಟ್ಟವನ್ನು ಪ್ರಶಂಸಿಸಿದರು.
ಸಮಾರೋಪದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ಹನುಮಂತರಾವ್ ಪಾಟೀಲ್ ಅವರು ಮಾತನಾಡಿ, ಸಂಸ್ಥೆಯು 43 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಶಾಲೆಯು ಒಂದು ಪರಿವರ್ತನೆಯ ಕೇಂದ್ರವಾಗಿ ಗಣನೀಯವಾಗಿ ಸಾಗುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷರು ಮಾತನಾಡಿ, ಮಕ್ಕಳ ಪ್ರತಿಭೆ, ಪ್ರಯೋಗ ನಿರಂತರವಾಗಿ ಸಾಗುತ್ತಿದೆ. ನಾನು ಮಾಡುತ್ತೇನೆ ಎಂಬ ಛಲವನ್ನು ಬೆಳೆಸಿಕೊಂಡು ಪುಸ್ತಕದ ಜ್ಞಾನದ ಜೊತೆಗೆ ಪ್ರಯೋಗಗಳನ್ನು ಮಾಡಿದಾಗ ನಿಜವಾದ ಜ್ಞಾನ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಶಿವಶರಣಪ್ಪ ಪಾಟೀಲ್, ಉದ್ಘಾಟಕರು ಶ್ರೀಮತಿ ಅನಿತಾ ಅಶೋಕ್ ಗುತ್ತಿಗೆದಾರರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರಾದ ಶ್ರೀ ಚನ್ನಬಸವಂತರಡ್ಡಿ, ಬಲಭೀಮರಾವ್ ಕಚೇರೆ, ಶ್ರೀ ಶಿವಕುಮಾರ ಉಪ್ಪೆ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶರಣು ಪಾಟೀಲ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಸಿರಿಗೆರೆ, ವಿವಿಧ ಶಾಲೆಗಳ ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಅಶ್ವಿನಿ ಪಾಟೀಲ್ ನಿರೂಪಿಸಿದರು. ಪ್ರತಿಭಾ ತೇಲಿ ಸ್ವಾಗತಿಸಿದರು. ಕಾರ್ಯಕ್ರಮ ಶಾಂತಿಮಂತ್ರದೊಂದಿಗೆ ಮುಕ್ತಾಯಗೊಂಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
