ಬೆಂಗಳೂರು: 79 ವರ್ಷಗಳ ಹಿಂದೆ ಗುರು ಪೂರ್ಣಿಮೆಯ ದಿನ (ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರವೂ ಕಾಕತಾಳೀಯ ಎಂಬಂತೆ 1948ರ ಜುಲೈ 22ರ ದಿನಾಂಕವೇ ಆಗಿತ್ತು) ಉಜ್ವಲ ರಾಷ್ಟ್ರೀಯ ಕನ್ನಡ ವಾರಪತ್ರಿಕೆ ವಿಕ್ರಮ ಜನ್ಮತಾಳಿತು. ರಾಷ್ಟ್ರೀಯ ಜಾಗೃತಿ ಅಖಂಡ ಅಭಿಯಾನದಲ್ಲಿ ಅಂದು ಪ್ರಾರಂಭವಾದ ಮೊದಲ ಹೆಜ್ಜೆಯ ಹೆಗ್ಗುರುತಿನ ಸವಿ ನೆನಪಿಗಾಗಿ ಪತ್ರಿಕೆಯ ಮೊದಲ ಸಂಪುಟದ ಮೊದಲ ಸಂಚಿಕೆಯ ಎಲ್ಲ 8 ಪುಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಆಸಕ್ತರ ಪಾಲಿಗೆ ಅತಿ ಅಪರೂಪದ ಸಂಗ್ರಹವಿದು.
